ಹೆಲ್ಮೆಟ್ ಧರಿಸಿದರೆ ಮಾತ್ರ ಪೆಟ್ರೋಲ್ : ಪಿಎಸ್‌ಐ ವೀರೇಶ್

0
210

ಮಸ್ಕಿ : ಮಸ್ಕಿಯ ಪೊಲೀಸ್ ಠಾಣೆಯಲ್ಲಿ ಬುಧವಾರ ಪೆಟ್ರೋಲ್ ಬಂಕ್ ಹಾಗೂ ದ್ವಿಚಕ್ರ ವಾಹನಗಳ ಮಾರಾಟ ಶೋರೂಮ್‌ಗಳ ಮಾಲೀಕರ ಸಭೆ ನಡೆಯಿತು.

ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಸವಾರರು ಕಡ್ಡಾಯವಾಗಿ ಸೀಟ್‌ಬೆಲ್ಟ್ ಮತ್ತು ಹೆಲ್ಮೆಟ್‌ಗಳನ್ನು ಧರಿಸಿಕೊಳ್ಳಬೇಕು ಮತ್ತು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ಗಳನ್ನು ಧರಿಸದಿದ್ದರೆ ಪೆಟ್ರೋಲ್ ಬಂಕ್‌ಗಳಲ್ಲಿ ಪೇಟ್ರೋಲ್ ಹಾಕದಂತೆ ಪೋಲಿಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ಪಿಎಸ್‌ಐ ಸಣ್ಣ ವೀರೇಶ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಪೆಟ್ರೋಲ್ ಬಂಕ್ ಹಾಗೂ ದ್ವಿಚಕ್ರ ವಾಹನ ಮಾರಾಟ ಶೋರೂಮ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಅಫಘಾತಗಳನ್ನು ತಡೆಯುವ ಜವಬ್ದಾರಿ ನಮ್ಮ ಮೇಲಿರುವದರಿಂದ ವಾಹನ ಚಾಲಕರು ಚಾಲನೆ ಮಾಡುವಾಗ ರಸ್ತೆ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದರು. ವಾಹನಗಳ ಮಾರಾಟ ಶೋರೂಂಗಳಲ್ಲಿ ಹೊಸ ವಾಹನಗಳನ್ನು ಖರೀದಿಸಿದಾಗ ವಾಹನದ ಜತೆ ಹೆಲ್ಮೆಟ್‌ನ್ನು ಕಡ್ಡಾಯವಾಗಿ ನೀಡಬೇಕೆಂದರು.

ಅಲ್ಲದೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬರುವ ಸವಾರರಿಗೆ ಹೆಲ್ಮೆಟ್ ಇದ್ದರೆ ಮಾತ್ರ ಪೇಟ್ರೋಲ್ ಹಾಕಲಾಗುತ್ತದೆ ಎಂದು ಸೂಚನಾ ಫಲಕವನ್ನು ಅಳವಡಿಸುವ ಮೂಲಕ ಸವಾರರಲ್ಲಿ ಜಾಗೃತಿ ಮೂಡಿಸಬೇಕೆಂದರು. ಹೆಲ್ಮೆಟ್ ಧರಿಸದಿದ್ದರೆ ದಂಡ ಚಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಟ್ಟಣದಲ್ಲಿ ವಿವಿಧ ಪೆಟ್ರೋಲ್ ಬಂಕ್ ಹಾಗೂ ವಾಹನ ಶೋರೂಂ ಮಾರಾಟ ಮಾಲೀಕರಿದ್ದರು.

 

LEAVE A REPLY

Please enter your comment!
Please enter your name here