“ಎಳೆಯರು ಇವರು, ನಾವು ಗೆಳೆಯರು” ಚಲನ ಚಿತ್ರ ವೀಕ್ಷಿಸಿದ ಅಲ್-ಹಿರಾ ಶಾಲೆಯ ಮಕ್ಕಳು.

0
358

ಮಾನವಿ. ಜ.22- ಇಂದು ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ನಗರದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದ “ಎಳೆಯರು ಇವರು, ನಾವು ಗೆಳೆಯರು”  ಮಕ್ಕಳ ಸಿನೆಮಾವನ್ನ  ವಿವಿಧ ಶಾಲಾ ಮಕ್ಕಳು ವೀಕ್ಷಿಸಿದರು.

ಇವರುಗಳ ಪೈಕಿ ಅಲ್ ಹಿರಾ ಶಾಲೆಯ ಸುಮಾರು 250 ಮಕ್ಕಳು ಬಲು ಉತ್ಸಾಹದಿಂದ ಬೆಳಿಗ್ಗೆ 07 ಗಂಟೆಗೆ ಶಾಲೆಗೆ ಆಗಮಿಸಿ ಸಾಮೊಹಿಕವಾಗಿ ಚಿತ್ರಮಂದಿರಕ್ಕೆ ತೆರಳಿ ಸಿನೆಮಾ ವೀಕ್ಷಿಸಿದರು. ಶಾಲೆಯ ಶಿಕ್ಷಕರು ಮತ್ತು ಕಾರ್ಯದರ್ಶಿಗಳು ಮಕ್ಕಳಜೊತೆ ಚಿತ್ರ ವೀಕ್ಷಿಸಿದರು.

ಅಲ್ ಹಿರಾ ಶಾಲೆಯ ಶಿಕ್ಷಕರು ಮತ್ತು ಶಾಾ ಆಡಳಿತ ಮಂಡಳಿಯವರು ಯಾವತ್ತೂ ನಮಗೆ ಉತ್ತಮವಾಗಿ ಸ್ಪಂದಿಸುತ್ತಾರೆ ಮತ್ತು ಯಾವುದೇ ಸಲಹೆ ಸೂಚನೆ ನೀಡಲಿ ತಕ್ಷಣ ಸ್ಪಂದಿಸಿ ನಮ್ಮನ್ನ ಸಹಕರಿಸುವುದು ಅಲ್ ಹಿರಾ ಶಾಲೆಯವರ ಮುಖ್ಯ ಗುಣ ಎಂದು ಸಿ ಆರ್ ಪಿ ಕೃಷ್ಣ ಮೂರ್ತಿ ಪ್ರಶಂಸಿದರು.

ಚಲನಚಿತ್ರ ವೀಕ್ಷಿಸಿದ ನಂತರ ಅಲ್-ಹಿರಾ ಶಾಲೆಯ ಮಕ್ಕಳಿಂದ ವ್ಯಕ್ತವಾದ ಅಭಿಪ್ರಾಗಳು :

*ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನ ಹೊರಹಾಕಲು ಸಹಕಾರಿಯಾಗಿದೆ.

*ದೈನಂದಿನ ಜೀವನದಲ್ಲಿ ದಿನ ಪತ್ರಿಕಗಳನ್ನ ಓದಬೇಕು ವಿಶೇಷವಾಗಿ ಸುಭಾಶಿತಗಳನ್ನ ಓದಿ ನೆನಪಿಟ್ಟುಕೊಂಡು ತರಗತಿಯ ಕರಿಹಲಿಗೆ ಬೊರ್ಡ್ ಮೇಲೆ ಬರೆಯಬೇಕು,

*ಪಾಲಕರು ಹಾಗು ಶಿಕ್ಷಕರ ಮುಂದೆ ತಮ್ಮ ಬೇಡಿಕೆಗಳನ್ನ ಹೇಗೆ ಹೇಳಿಕೊಳ್ಳ ಬೇಕೆಂಬುದು ಮಕ್ಕಳಿಗೆ ಗೊತ್ತಾಗುತ್ತದೆ.

*ತನ್ನ ಗ್ರಾಮ ಮತ್ತು ಊರುಗಳಲ್ಲಿ ಸ್ವಚ್ಚತೆಯನ್ನ ಕಾಪಡಿಕೊಳ್ಳವುದು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು ಮಕ್ಕಳಿಂದ ಪ್ರಾರಂಭ ವಾಗಬೇಕು,

*ಶಾಲೆಯ ವತಿಯಿಂದ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ತಪ್ಪದೇ ಭಾಗವಹಿಸವುದು ವಿದ್ಯಾರ್ಥಿಯ ಮುಖ್ಯ ಕೆಲಸವಾಗಿದೆ. *ಸಹಪಾಟಿಗಳ ಜೊತೆ ಯಾವಗಲೂ ನಗುನಗುತ್ತಾ ಇರಬೇಕು, *ಎಲ್ಲಾ ರೀತಿಯ ಆಟಗಳನ್ನ ಆಡಿ ಅನುಭವಿಸಬೇಕು,

*ಗೆಳೆಯರ ಆರೊಗ್ಯ ಕಾಪಾಡುವುದು ಎಲ್ಲರ ಕರ್ತವ್ಯ, *ಯಾರಿಗೂ ನೊವು ಆಗಲಾರದ ಹಾಗೆ ನೊಡಿಕೊಳ್ಳ ಬೇಕು,

*ನಮ್ಮಲ್ಲಿರುವ ಪ್ರತಿಭೆಗಳು ಬೇರೆಯವರಿಗೆ ಸಹಕಾರಿಯಾಗಲಿ, *ಶಾಲಾ ಶಿಕ್ಷಕರು ಮಕ್ಕಳ ಪ್ರತಿಭೆಗಳನ್ನ ಪ್ರೊತ್ಸಾಹಿಸಿದಾಗ ಮಾತ್ರ ಮಕ್ಕಳು ಬೆಳೆಯಲು ಸಾಧ್ಯ,

*ಕಷ್ಠ ಮತ್ತು ತೊಂದರೆಗಳು ಬಂದಾಗ ದೇವರನ್ನ ನೆನೆಸಿಕೊಂಡು ಭಕ್ತಿಯಿಂದ ಪ್ರಾರ್ಥಿಸಬೇಕು,

*ದೇವರು ಇಚ್ಚಿಸಿದರೆ ಆಗದೇ ಇರುವ ಕೆಲಸವೂ ಆಗುತ್ತೆ ಎಂಬುದಕ್ಕೆ ಸಿನೆಮಾದ ಕೊನೇಯ ದೃಷ್ಯಗಳು ಸಾಕ್ಷಿ, *ಪರೀಕ್ಷೆ ಎಂತಹದ್ದೇ ಇರಲಿ ನಿರಾಶೆಯಾಗದೆ ಕೊನೇ ಘಳಿಗೆಯ ವರೆಗೆ ಶ್ರಮಿಸಿ ಗೆಲ್ಲಬೇಕು,

 

 

 

 

 

 

 

 

 

 

 

LEAVE A REPLY

Please enter your comment!
Please enter your name here