Home ಕಲ್ಯಾಣ ಕರ್ನಾಟಕ ಜಿಲ್ಲೆಗಳು ಸಿಎಎ,ಎನ್ ಆರ್ ಸಿಯ ಕಾನೂನುಗಳು ಮುಸ್ಲಿಂಮರಿಗೆ ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೂ ತೊಂದರೆ ತಪ್ಪಿದ್ದಲ್ಲ ಇಂತಹ...

ಸಿಎಎ,ಎನ್ ಆರ್ ಸಿಯ ಕಾನೂನುಗಳು ಮುಸ್ಲಿಂಮರಿಗೆ ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೂ ತೊಂದರೆ ತಪ್ಪಿದ್ದಲ್ಲ ಇಂತಹ ಸಂವಿಧಾನ ವಿರೊಧಿ ಕಾನೂನು ರದ್ದಾಗಬೇಕು; ಲಕ್ಷ್ಮಿ ದೇವಿ.

0
494

ಸಿಎಎ,ಎನ್ ಆರ್ ಸಿಯ ಕಾನೂನುಗಳು ಮುಸ್ಲಿಂಮರಿಗೆ ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೂ ತೊಂದರೆ ತಪ್ಪಿದ್ದಲ್ಲ ಇಂತಹ ಸಂವಿಧಾನ ವಿರೊಧಿ ಕಾನೂನು ರದ್ದಾಗಬೇಕು; ಲಕ್ಷ್ಮಿ ದೇವಿ ನಾಯಕ್.

ಮಾನವಿ ಜ.18- ರಾಬ್ತಾ-ಏ-ಮಿಲ್ಲತ್‌ ವೇದಿಕೆ ಮಾನವಿ ಘಟಕದ ನೇತೃತ್ವದಲ್ಲಿ ನಗರದ ಟಿಎಪಿಸಿಎಮ್ಎಸ್ ಆವರಣದಲ್ಲಿ ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನಾ ಸಮಾವೇಶ ನಡೆಸುವ ಮೂಲಕ ಪೌರತ್ವ ತಿದ್ದುಪಡಿ ಕಾನೂನು ಜಾರಿ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನ ವಿರೊಧಿಸಲಾಯಿತು.

ಕೇಂದ್ರ ಸರಕಾರ ಈ ಮಸೂದೆಯನ್ನ ಜಾರಿ ಮಾಡುವ ಮೂಲಕ ದೇಶವನ್ನ ವಿಭಜಿಸುವ ಕೆಲಸಕ್ಕೆ ಕೈ ಹಾಕಿದೆ ಈ ಮಸೂದೆ ಜಾರಿಮಾಡಿ  ಪ್ರಜಾಪ್ರಭುತ್ವದ ದೇಶ ಭಾರತದಲ್ಲಿ ಸಂವಿಧಾನದ ಮೂಲ ಅಂವಶಗಳ ಮೇಲೆ ದಾಳಿ ಮಾಡುವ ಮೂಲಕ ಇದೇ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಪೌರತ್ವ ಕಾನೂನು ಜಾರಿಮಾಡಲಾಗಿದೆ ಇದು ಖಂಡನೀಯ

ಸಿಎಎ ಇಂದ ದೇಶದ ಯಾವೊಬ್ಬ ಪ್ರಜೆಗೂ ತೊಂದರೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಇವು ಒಂದಕ್ಕೊಂದು ಸಂಬಂಧ ಹೊಂದಿವೆ. ಇವು ಒಂದು ಸಮುದಾಯದ ಜನರನ್ನು ಮಾತ್ರ ಗುರಿಯಾಗಿರಿಸಿಕೊಂಡು ಜಾರಿಗೆ ತರಲಾಗುತ್ತಿದೆ ಎಂದು ಕಾಂಗ್ರೇಸ್ ಮಹಿಳಾ ಮುಖಂಡರಾದ ಮಾಜಿ ಪುರಸಭಾ ಅಧ್ಯಕ್ಷೆ ಹಾಲಿ ಪುರಸಭೆ ಸದಸ್ಯೆ ಲಕ್ಷ್ಮೀ ದೇವಿ ಹೇಳಿದರು.

ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ಹೊರದೇಶಗಳಲ್ಲಿ ದೌರ್ಜನ್ಯಕ್ಕೊಳಗಾದ ಜನರಿಗೆ ಭಾರತದ ಪೌರತ್ವ ಕೊಡುವುದಕ್ಕಾಗಲೀ, ಇಲ್ಲಿನ ಅಕ್ರಮ ವಲಸಿಗರಿಗೆ ಪೌರತ್ವ ನೀಡಿ ಅವರನ್ನು ಈ ದೇಶದ ಪ್ರಜೆಗಳಾಗಿಸುವುದಕ್ಕಾಗಲೀ‌ ನಮ್ಮ ವಿರೋಧವಿಲ್ಲ. ಹೀಗೆ ಪೌರತ್ವ ನೀಡುವುದರಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ನಿಯಮ ಜಾರಿಗೊಳಿಸಲು ಹೊರಟಿರುವುದಕ್ಕಷ್ಟೇ ನಮ್ಮ ವಿರೋಧ. 2014 ಡಿಸೆಂಬರ್ 31ರ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ಬಂದ ಮುಸ್ಲಿಂ ಹೊರತಾದ ಧರ್ಮಗಳ ಜನರಿಗೆ ಪೌರತ್ವ ನೀಡುವುದೇನೋ‌ ಸರಿ, ಆದರೆ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಭೂತಾನ್ ಈ ದೇಶಗಳಿಂದ ಭಾರತಕ್ಕೆ ವಲಸೆ ಬಂದವರನ್ನು ಈ ಕಾಯ್ದೆಯಿಂದ ಹೊರಗಿಡಲು ಕಾರಣವೇನು? ಎಂದು ಪ್ರಶ್ನಿಸಿದರು

ಒಂದು ಕಾಯ್ದೆ ಸಂಸತ್ತಿನ ಬಹುಮತ ಗಳಿಸಿ ಕಾನೂನಾಗಿ ಜಾರಿಗೆ ಬರಲು ಸಿದ್ಧವಾದರೂ, ಆ ಕಾನೂನು ನ್ಯಾಯಸಮ್ಮತವಲ್ಲ ಎಂದೆನಿಸಿದರೆ ಜೈಲಿಗೆ ಹೋದರೂ ಪರವಾಗಿಲ್ಲ ಅದಕ್ಕೆ ಅಸಹಕಾರ ತೋರಿ ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದರು. ರವೀಂದ್ರನಾಥ್ ಠಾಗೋರ್ ಅವರು ಭಾರತ ಸರ್ವಧರ್ಮ ಸಹಿಷ್ಣು ದೇಶವಾಗಬೇಕು, ಮುಕ್ತವಾದ ಶಿಕ್ಷಣ ಮತ್ತು ಅಭಿವ್ಯಕ್ತಿಗೆ ಅವಕಾಶಗಳಿರಬೇಕು, ಇಲ್ಲಿನ ಪ್ರತಿ ಪ್ರಜೆ ಧೈರ್ಯದಿಂದ, ಸ್ವಾಭಿಮಾನದ ಬದುಕು ಬಾಳಬೇಕು ಎಂದು ಹೇಳಿದ್ದರು, ಆದರೆ ಬಿಜೆಪಿ ಹಿಂದೂ ರಾಷ್ಟ್ರ ನಿರ್ಮಾಣದ ಹುನ್ನಾರದೊಂದಿಗೆ ಕಾನೂನು ಜಾರಿಗೆ ತಂದಿದೆ ಎಂದು ಲಕ್ಷ್ಮಿ ದೇವಿ ಅಸಮಾಧಾನ ವ್ಯಕ್ತಪಡಿಸಿದರು.

ಕಾಯ್ದೆಯ ವಿರುದ್ಧ ದೇಶವ್ಯಾಪಿ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಅವರಲ್ಲಿ ಬರೀ ಮುಸ್ಲಿಮರಷ್ಟೇ ಅಲ್ಲ, ವಿದ್ಯಾರ್ಥಿಗಳು, ಕಾರ್ಮಿಕರು, ಪ್ರಗತಿಪರರು, ಮಹಿಳೆಯರು ಹೀಗೆ ಎಲ್ಲ ವರ್ಗದ ಜನರು ಇದ್ದಾರೆ. ಸಿಎಎ,,ಎನ್ ಆರ್ ಸಿಯ ಕಾನೂನುಗಳು ಮುಸ್ಲಿಂಮರಿಗೆ ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೂ ತೊಂದರೆ ತಪ್ಪಿದ್ದಲ್ಲ ಎಂದು ಅವರು ಹೇಳಿದರು

ಕೇಂದ್ರ ಸರಕಾರ ಈ ಮಸೂದೆಯನ್ನ ಜಾರಿ ಮಾಡುವ ಮೂಲಕ ದೇಶವನ್ನ ವಿಭಜಿಸುವ ಕೆಲಸಕ್ಕೆ ಕೈ ಹಾಕಿದೆ ಈ ಮಸೂದೆ ಜಾರಿಮಾಡಿ  ಪ್ರಜಾಪ್ರಭುತ್ವದ ದೇಶ ಭಾರತದಲ್ಲಿ ಸಂವಿಧಾನದ ಮೂಲ ಅಂವಶಗಳ ಮೇಲೆ ದಾಳಿ ಮಾಡುವ ಮೂಲಕ ಇದೇ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಪೌರತ್ವ ಕಾನೂನು ಜಾರಿಮಾಡಲಾಗಿದೆ ಇದು ಖಂಡನೀಯ.

ಪೌರತ್ವ ಮಸೂದೆ ತಿದ್ದುಪಡಿಯ ಹೆಸರಿನಲ್ಲಿ ಈ ದೇಶದಲ್ಲಿರುವ ಮುಸಲ್ಮಾನರಿಗೆ ದೇಶದ ಹೊರಗೆ ದಬ್ಬುವ ಉದ್ದೇಶ ಇವರದ್ದಾಗಿದೆ ಕಾರಣ ಇಂತಹ ಸಂವಿಧಾನ ವಿರೊಧಿ ಕಾನೂನು ರದ್ದಾಗಬೇಕು ವಿವಿಧ ರಾಜಕೀಯ ಪಕ್ಷಗಳು, ವಿವಿಧ ಧರ್ಮೀಯರು,ಬುದ್ಧಿಜೀವಿಗಳು ಎಲ್ಲರೂ ಒಂದಾಗಿ ಈ ವಿವಾದಾತ್ಮಕ ಕಾನೂನಿನ ವಿರುದ್ಧ ಸಂವಿಧಾನದ ಉಳುವಿಗಾಗಿ ಧ್ವನಿ ಎತ್ತಿ ಹೊಸ ಸ್ವಾತಂತ್ರ್ಯ ಚಳುವಳಿಯನ್ನ ಪ್ರಾರಂಭ ಮಾಡಿರುತ್ತಾರೆ ಒಂದು ತಿಂಗಳಿಂದ ಸತತವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ನಿರಂತರ ಸಾರ್ವಜನಿಕ ಹೊರಾಟ ಮಾಡುತ್ತಿದ್ದಾರೆ ಆದರೂ ಕೇಂದ್ರ ಸರಕಾರ ತನ್ನ ಹಟವನ್ನ ತೊರಿಸುತ್ತಾ  ವಿವಾದಾತ್ಮಕ ಕಾನೂನು ಜಾರಿ ಮಾಡಿರುವುದು ಖಂಡನಿಯ ಎಂದು ಮಹಿಳಾಘಟಕದ ಜಿಲ್ಲಾಧ್ಯಕ್ಷೆ ನುಸ್ರತ್ ಜಹಾ ಹೇಳಿದರು

ಡಾ!! ರೊಹಿಣಿ ಜಗನ್ನಾತ್, ಮಾಜಿ ಪರಸಭೆ ಅಧ್ಯಕ್ಷೆ ಫರ್ಹಾನ ಬಾಬುಲ್, ಮತ್ತು ತಬಸ್ಸುಮ್ ಅಮ್ಜದ್ ಖಾನ್ ಹಾಗು ಇರ್ಫಾನ ಸಬಾ ಜುಬೇದಾ ಬೇಗಂ, ರಜಿಯ ಸುಲ್ತಾನ, ಸೌಂದರ್ಯ ಜಾಹೇದಾ ಬೇಗಂ, ನಾಜಿಯಾ, ಮತ್ತು ಇನ್ನಿತರೇ ಮಹಿಳಾ ಮುಖಂಡರು ಮಾತನಾಡಿದರು.

ಮಾನ್ವಿ ತಾಲೂಕಿನ ದಂಡಾಧಿಕಾರಿ ಬಿರಾದರ್ ಅವರು ಸಮಾವೇಶದ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವಿಕರಿಸಿದರು.

ವಿಶೇಷವೆಂದರೆ  ಮಹಿಳೆಯರು ದೇಶಪ್ರೇಮದಲ್ಲಿ ಸುಡುಬಿಸಿಲಿನಲ್ಲಿ ಸತತವಾಗಿ ಕುಳಿತುಕೊಂಡು ಸಿಎಎ ಎನ್ ಆರ್ ಸಿ ಯನ್ನ ವಿರೊಧಿಸಿದರು ಜಿ ಐಓ,ಜಮಾತೇ ಇಸ್ಲಾಮಿ,ಅಹಲೇ ಹದೀಸ್,ಅಹಲೆ ಸುನ್ನತ್ ವಲ್ ಜಮಾತ್ ,ತಬ್ಲೀಗಿ ಜಮಾತ್, ಮಹದವಿಯಾ ಜಮಾತ್ ಮತ್ತು ಇತರೇ ಧಾರ್ಮಿಕ ಸಂಘಟನೆಗಳ ಮಹಿಳಾ ಸದಸ್ಯರು ಭಾಗವಹಿಸಿದರು

ಪೊಲಿಸ್ ಇಲಾಖೆ ಶಾಂತಿಯನ್ನ ಕಾಪಾಡಲಿಕ್ಕಾಗಿ ಉತ್ತಮ ರೀತಿಯಲ್ಲಿ ಬಂದೊಬಸ್ತ್ ಮಾಡಿತ್ತು

ಈಸಂದರ್ಭದಲ್ಲಿ  ಇತರೇ ಮಹಿಳಾ ಸಂಘಟನೆಗಳ ಮುಖಂಡರು  ಮತ್ತು ಧಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ರಾಬಿತಯೇ ಮಿಲ್ಲತ್ ನ ಎಲ್ಲಾ ಪದಾಧಿಕಾರಿಗಳು ಹಾಗು ಸೈಯದ್ ಅಕ್ಬರ್ ಸಾಬ್,ಸೈಯದ್ ಸಜ್ಜಾದ್ ಹುಸೇನ್ ಮತ್ವಾಲೆ,ಕಾಂಗ್ರೇಸ್ ಮುಖಂಡ ವಸಂತ ನಾಯಕ್,ಸೈಯದ್ ಸಾದಿಕ್ ಪಾಶ ಬಾಬುಲ್, ಅಬ್ದುಲ್ ಕರೀಮ್ ಖಾನ್ ಸಾಬ್, ಚಂದಾಹುಸೇನ್ ಸಾಬ್ ಅನ್ವರ್ ಪಾಶ ಉಮರಿ, ಸುಭಾನ್ ಬೇಗ್ ಪುರಸಭೆ ಸದಸ್ಯರಾದ  ಇಬ್ರಾಹೀಮ್ ಕುರೇಶಿ, ಫರೀದ್ ಉಮರಿ, ಹುಸೇನ್ ಬಾಷ ಎಚ್ ಬಿ ಎಮ್, ಸಾಬಿರ್ ಸಾಬ್  ಎಮ್ ಏ ಏಚ್ ಮುಖೀಮ್, ಆಖಿಲ್ ಜೀಶಾನ್, ಗುಲಾಮ್ ರಸೂಲ್, ಕೆ ಎಮ್ ಬಾಷ ,ಎಕ್ಸಲ್ ಸಾಬಿರ್,ಕೆಎಮ್ ಬಾಷ ಉಪಸ್ಥಿತರಿದ್ದರು

 

 

LEAVE A REPLY

Please enter your comment!
Please enter your name here

bitcoin mixer bitcoin mixer bitcoin mixer bitcoin mixer bitcoin mixer bitcoin tumbler bitcoin tumbler bitcoin tumbler bitcoin tumbler bitcoin tumbler bitcoin blender bitcoin blender bitcoin blender bitcoin blender bitcoin blender bitcoin laundry bitcoin laundry bitcoin laundry bitcoin laundry bitcoin laundry best cryptocurrency tumbler best cryptocurrency tumbler best cryptocurrency tumbler best cryptocurrency tumbler best cryptocurrency tumbler