ಎರಡು ದಿನದೊಳಗೆ ಕೆಳಭಾಗದ ರೈತರಿಗೆ ನೀರು ಬಿಡದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ- ಎನ್ ಎಸ್ ಬೋಸರಾಜು

0
265

ಮಾನ್ವಿ:ಜ.16- ಕೆಳ ಭಾಗದ 65,76,85,89,ಮತ್ತು 92 ಕಾಲುವೆಗೆ 02 ದಿನಗಳ ಒಳಗಾಗಿ ನೀರು ಬಿಡದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ವಿಧಾನ ಪರಿಷತ್ ಸದಸ್ಯರಾದ ಎನ್ ಎಸ್ ಬೋಸರಾಜ್ ಹೇಳಿದರು.

ಪಟ್ಟಣದಲ್ಲಿ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೇಲ್ಭಾಗದ ಕಾಲುವೆಗೆ 3400 ಕ್ಯೂಸೆಸ್ ನೀರಿದೆ ಕೆಳಭಾಗದ ಕಾಲುವೆಗೆ 1400 ಕ್ಯೂಸೆಸ್ ನೀರು ಬರಬೇಕು ಆದರೆ ಸದ್ಯದ ಮಟ್ಟಿಗೆ ಬರೀ 700 ಕ್ಯೂಸೆಸ್ ನೀರಿದೆ.ಕೆಳಭಾಗದ ರೈತರು ಜಮೀನಿನಲ್ಲಿ ಹತ್ತಿ ಮೆಣಸಿನಕಾಯಿ ಜೋಳದ ಬೆಳೆಗಳಿಗೆ ನೀರಿನ ಅವಶ್ಯಕತೆ ಇದ್ದು ಈ ಕೂಡಲೇ ಕಾಲುವೆಗೆ 1400 ಕ್ಯೂಸೆಕ್ ನೀರು ಹರಿಸಿ ರೈತರ ಜಮೀನಿನಲ್ಲಿ ಬೆಳೆಯುವಂತ ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕು.
ಐಸಿಸಿ ಸಭೆಯಲ್ಲಿ ಇಬ್ಬರ ಸಚಿವರ ಜೊತೆ ಮಾತನಾಡಿ ಕೆಳಭಾಗದ ಕಾಲುವೆಗೆ ಆದಷ್ಟು ಬೇಗ ನೀರು ಬಿಡಬೇಕು ಎಂದು ಕೇಳಿದಾಗ ಸಚಿವರು ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು ಆದರೆ ಇನ್ನು ಇದುವರೆಗೂ ಯಾವ ಸಚಿವರು ಕೂಡ ಸ್ಪಂದಿಸಿಲ್ಲ ರಾಯಚೂರು ಭಾಗದ ಮಂತ್ರಿಗಳಿಗೆ ಈ ಸಮಸ್ಯೆಯ ಬಗ್ಗೆ ಹೇಳಬೇಕಂದ್ರ ಮಂತ್ರಿಗಳು ಈ ಕಡೆ ಬರ್ತಾ ಇಲ್ಲ ಎಂದರು.
88 ಕೋಟಿ ರೂಪಾಯಿ ಅನುದಾನದಲ್ಲಿ ರಬ್ಬಣಕಲ್ ಕುಡಿಯುವ ನೀರಿನ ಕೆರೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ಆ ಕೆರೆಗೆ 85 ಕಾಲುವೆ ಮೂಲಕ ನೀರು ತುಂಬಿಸಲು ಮುಖ್ಯಮಂತ್ರಿಗಳ ಆದೇಶ ಇದ್ದರೂ ಕೂಡ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಸರಕಾರದ ಆದೇಶಕ್ಕೆ ಕಿಮ್ಮತ್ತು ಕೊಡದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಳ ಭಾಗದ ರೈತರ ಪರಿಸ್ಥಿತಿ ಗಂಭೀರವಾಗಿದ್ದು ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ 2 ದಿನಗಳ ಒಳಗೆ ನೀರು ಬಿಡದಿದ್ದರೆ ಈ ಭಾಗದ ರೈತರ ಮುಖಂಡರಲ್ಲಿ ಚರ್ಚೆ ಮಾಡಿ ಉಗ್ರವಾದ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹಂಪಯ್ಯ ನಾಯಕ, ಅಬ್ದುಲ್ ಗಫೂರ್ ಸಾಬ್,ಶರಣಯ್ಯ ನಾಯಕ್ ಕೆ ಗುಡದಿನ್ನಿ, ದೊಡ್ಡಬಸಪ್ಪಗೌಡ ಭೋಗಾವತಿ, ರಾಜಾ ವಸಂತ ನಾಯಕ್,ಬಾಲಸ್ವಾಮಿ ಕೊಡ್ಲಿ, ಸಿದ್ದರಾಮಪ್ಪ ನೀರಮಾನ್ವಿ, ಶಿವಶಂಕರ್ ಗೌಡ ಬಾಗಲವಾಡ, ಜಯ ಪ್ರಕಾಶ್, ರಾಮಕೃಷ್ಣ, ಮುಜುಮ್ ಖಾದ್ರಿ ಗುರು,ರೇವಣಸಿದ್ದಯ್ಯ ಸ್ವಾಮಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here