ಕಾಯಕಯೋಗಿ ಸಿದ್ದರಾಮೇಶ್ವರ ಮೌಲ್ಯಾಧಾರಿತ ವಿಚಾರಗಳನ್ನು ಯುವಕರು ಅಳವಡಿಸಿಕೊಳ್ಳಬೇಕು – ರಾಜಾ ವೆಂಕಟಪ್ಪ ನಾಯಕ

0
125

ಮಾನ್ವಿ: ಜ.14 ಕಾಯಕಯೋಗಿ ಸಿದ್ದರಾಮೇಶ್ವರ ಮೌಲ್ಯಾದಾರಿತ ವಿಚಾರಗಳನ್ನು ಯುವಕರು ಅಳವಡಿಸಿಕೊಳ್ಳಬೇಕೆಂದು – ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ಟಿ.ಎ.ಪಿ.ಸಿ.ಎಂ. ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಆಯೋಜಿಸಿದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆಯಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು, ೧೨ನೇ ಶತಮಾನದ ಆರಂಭದಲ್ಲಿ ಕಾಯಕಯೋಗಿ ಆಗಿದ್ದ ಶಿವಯೋಗಿ ಸಿದ್ದರಾಮೇಶ್ವರ, ಅಲ್ಲಮಪ್ರಭು, ಬಸವಣ್ಣನವರಿಗೆ ಬೇಟಿ ಮಾಡಿಸಿದ ನಂತರ ತಮ್ಮನ್ನು ತಾವು ಅರಿತುಕೊಳ್ಳುವ ಮೂಲಕ ಶಿವಯೋಗಿಯಾಗಿ ಬದಲಾದರು.

ಭೋವಿ ಸಮಾಜದವರು ತಮ್ಮ ಮಕ್ಕಳನ್ನು ಕೇವಲ ದುಡಿಮೆಗೆ ಸೀಮಿತಗೊಳಿಸದೇ, ಅವರಿಗೆ ಶಿಕ್ಷಣ ಕೊಡಿಸಬೇಕು ಎಂದರು ಆರ್ಥಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ, ಬಲಿಷ್ಟರಾಗಬೇಕು, ಅವರ ಶ್ರಮ ಶ್ಲಾಘನೆಯವಾದದ್ದು ಎಂದು ಕೊಂಡಾಡಿದ್ದರು. ಕಾಯಕಯೋಗಿ ಸಿದ್ದರಾಮೇಶ್ವರ ಮೌಲ್ಯಾದಾರಿತ ವಿಚಾರಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಮತ್ತು ದುಡಿದು ತಮ್ಮ ದೇಹವನ್ನು ದಂಡಿಸಿ, ಕಾಯಕ ಮಾಡುವವರೆ, ನಿಜವಾದ ಶ್ರಮಜೀವಿಗಳು ಹಾಗೂ ನಿಮ್ಮ ಮಕ್ಕಳನ್ನು ಕೇವಲ ದುಡಿಮೆಗೆ ಸೀಮಿತಗೊಳಿಸದಿರಿ, ಶಿಕ್ಷಣಕ್ಕೆ ಒತ್ತುಕೊಡಿ ಎಂದು ಹೇಳಿದರು.

20 ವರ್ಷ ಆಡಳಿತ ಅವಧಿಯಲ್ಲಿ ಹಿಂದಿನ ರಾಜಕಾರಣಿಗಳು ಇದುವರೆಗೂ ಒಬ್ಬ ಮಹಾನ್ ನಾಯಕ ಭವನ ನಿರ್ಮಾಣ ಮಾಡುವುದಕ್ಕೆ ಆಗಿರುವುದಿಲ್ಲ, ನನ್ನ ೫ವರ್ಷದ ಅವಧಿಯೊಳಗೆ ಡಾ|| ಬಿ.ಆರ್.ಅಂಬೇಡ್ಕರ್ ಭವನ, ಸಿದ್ದರಾಮೇಶ್ವರ ಭವನ, ಬಾಬು ಜಗಜೀವನರಾಮ್ ಭವನ, ಕನಕದಾಸರ ಭವನ, ವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಿಕೊಡುತ್ತೇನೆ. ನಾನು 19 ತಿಂಗಳ ಅವಧಿಯಲ್ಲಿ ಅಭಿವೃದ್ಧಿಯತ್ತಾ ಸಾಗಿದ್ದೇನೆ. ಜನರ ಸಹಕಾರ ಅಗತ್ಯವಾಗಿದೆ ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರವನ್ನು ಅದ್ಧೂರಿ ಮೇರವಣಿಗೆ ಮೂಲಕ ಟಿಎಪಿಎಂಸಿ ಆವರಣದವರೆಗೆ ತಲುಪಿತು ಮೇರವಣಿಗೆಯಲ್ಲಿ ನರಸಿಂಹ ನಾಯ್ಕ ವಕೀಲರು, ನಾಗರಾಜ ಭೋಗಾವತಿ, ಮಹ್ಮದ್ ಇಸ್ಮಾಯಿಲ್, ರಾಜಾ ರಾಮಚಂದ್ರ ನಾಯಕ, ಖಲೀಲ್ ಖುರೇಶಿ, ಇಬ್ರಾಹಿಂ ಖುರೇಶಿ, ಹನುಮಂತ ಭೋವಿ, ಎಸ್.ವೆಂಕೋಬ, ಶರಣಪ್ಪ ಮೇದ, ಉಸ್ಮಾನ ಹುಲಿ, ನರಸಿಂಹ ನೀರಮಾನ್ವಿ, ಇನ್ನಿತರು ಭಾಗವಹಿಸಿದರು.

ಈ ಸಂಧರ್ಭದಲ್ಲಿ ತಾ.ಪಂ.ಪ್ರಾ.ಅ.ಚನ್ನಬಸವಗೌಡ ಬೆಟ್ಟದೂರು, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷಿ, ಸಿ.ಪಿ.ಐ. ದತ್ತಾತ್ರೇಯ ಕಾರ್ನಾಡ್, ಪಿ.ಎಸ್.ಐ. ಹೆಚ್.ರಂಗಪ್ಪ ದೊಡ್ಡಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ರಂಗಪ್ಪ ಮೇದ, ಇನ್ನಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here