ದೀಪಿಕಾ ಪಡುಕೊನಣೆ ಕಾಂಗ್ರೇಸ್ ನ್ನ ಸಮರ್ಥಿಸುವವಳು; ಸ್ಮೃತಿ ಇರಾನಿ

0
195

ನವದೆಹಲಿ, ಜ 10- ದೆಹಲಿಯ ಜೆಎನ್‌ಯು ಕ್ಯಾಂಪಸ್ ಭೇಟಿ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ವಿರುದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಟ್ವೀಟ್‌ರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸ್ಮೃತಿ ಇರಾನಿ…. 2011ರಿಂದಲೂ ಆಕೆಯ ರಾಜಕೀಯ ಸಂಬಂಧ ಎಲ್ಲರಿಗೂ ಗೊತ್ತಿದೆ, ಆಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳುವುದು ಕೇಳಿಸುತ್ತದೆ. ಜೆಎನ್‌ಯು ವಿದ್ಯಾರ್ಥಿಗಳಿಗೆ ಒಬ್ಬ ಸಿನಿಮಾ ಕಲಾವಿದೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುದು ಸಾಮಾನ್ಯರ ಜನರ ವಾದವಾಗಿದೆ. ಆದರೆ ಸತ್ಯಾಂಶ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾಳೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಇರಾನಿ ಹೇಳಿದ್ದಾರೆ.
ದೀಪಿಕಾ ಪಡುಕೋಣೆ ಜೆಎನ್‌ಯು ಕ್ಯಾಂಪಸ್ ಭೇಟಿ ನೀಡಿದ ನಂತರ ಕಳೆದ ಕೆಲ ದಿನಗಳಿಂದ ಹಲವು ಬಿಜೆಪಿ ನಾಯಕರು ಬಾಲಿವುಡ್ ನಟಿಯ ಮೇಲೆ ಮುಗಿಬಿದ್ದಿದ್ದು, ತಮ್ಮ ಹೊಸ ಸಿನಿಮಾ ಛಪಕ್ ಪ್ರಚಾರಕ್ಕಾಗಿ ಕ್ಯಾಂಪಸ್‌ಗೆ ತೆರಳಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುವ ನಾಟಕ ವಾಡಿದ್ದಾರೆ ಎಂದು ಟೀಕಿಸುತ್ತಿದ್ದಾರೆ.
ಆದರೆ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಕೇವಲ ಸಿನಿಮಾ ತಾರೆಯರು ಮಾತ್ರವಲ್ಲ, ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿ ಅಥವಾ ಮಹಿಳೆ ಎಲ್ಲಿಗೆ ಬೇಕಾದರೂ ತೆರಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ. ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಬೇಕಾದ ಆಗತ್ಯವಿಲ್ಲ ಎಂದು ಹೇಳಿದ್ದರು.
ದೀಪಿಕಾಗೆ ಭಾರಿ ಹೊಡೆತ
ಇದರ ಬೆನ್ನಲೇ ದೀಪಿಕಾರಿಗೆ ಕೇಂದ್ರದಿಂದ ಬಹುದೊಡ್ಡ ಆಫರ್ ಕಳೆದುಕೊಂಡು ಭಾರಿ ಹೊಡೆತ ಬಿದ್ದಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಯೋಜನೆಯ ಪ್ರಚಾರ ವಿಡಿಯೋದಲ್ಲಿ ದೀಪಿಕಾರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ವಿವಾದದ ಬಳಿಕ ಸ್ಕಿಲ್ ಇಂಡಿಯಾ ಯೋಜನೆಯ ವಿಭಾಗ ಇದನ್ನು ಕೈಬಿಟ್ಟಿದೆ ಎನ್ನಲಾಗಿದೆ. ಛಪಕ್ ಚಿತ್ರದ ಅಭಿನಯದಿಂದ ದೀಪಿಕಾರನ್ನು ಈ ವಿಡಿಯೋದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ವಿವಾದದ ಬಳಿಕ ಕೇಂದ್ರ ದೀಪಿಕಾರನ್ನು ಕೈ ಬಿಡಲು ಚಿಂತನೆ ನಡೆಸಿದೆ.

LEAVE A REPLY

Please enter your comment!
Please enter your name here