CAA,NRC ಬೆಂಬಲಿಸಿ ಮಾನ್ವಿಯಲ್ಲಿ ಬಿಜೆಪಿ ರ್ಯಾಲಿ.

0
261

ಮಾನ್ವಿ:ಜ.09 ಪೌರತ್ವ ಕಾಯ್ದೆ ಜಾರಿಯಾದರೆ ನಮ್ಮ ದೇಶದಲ್ಲಿ ಯಾವುದೇ ಜನರಿಗೆ ಏನೂ ತೊಂದರೆ ಆಗುವುದಿಲ್ಲ ಅಲ್ಪಸಂಖ್ಯಾತರಿಗೆ ಆಗಿರಬಹುದು ಕ್ರಿಶ್ಚಿಯನ್ನರಿಗೆ ಆಗಿರಬಹುದು ಹಿಂದೂಗಳಿಗೆ ಏನು ತೊಂದರೆ ಆಗುವುದಿಲ್ಲ ಪೌರತ್ವ ಕಾಯ್ದೆಯನ್ನು ಎಲ್ಲರೂ ಬೆಂಬಲಿಸೋಣ ಎಂದು ಲೋಕಸಭೆ ಸದಸ್ಯರಾದ ರಾಜಾ ಅಮರೇಶ್ವರ ನಾಯಕ್ ಹೇಳಿದರು.

ಅವರಿಂದು ಮಾನವಿ ನಗರದ ಟಿಎಪಿಎಂಸಿ ಆವರಣದಲ್ಲಿ ಬಿಜೆಪಿ ತಿಯಿಂದ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ತಿದ್ದುಪಡಿ ಪರ ಹಮ್ಮಿಕೊಂಡಿದ್ದ ಜನಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ. ವಿರೋದ ಪಕ್ಷ ಆಗಿರುವ ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಚರ್ಚಿಸಲು ಯಾವುದೇ ವಿಷಯ ಇಲ್ಲದೆ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿದೆ ಮತ್ತು ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.
ಅರವತ್ತು ವರ್ಷಗಳ ಕಾಲ ಭಾರತವನ್ನು ಆಳಿದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಇಲ್ಲಿನ ಅಲ್ಪಸಂಖ್ಯಾತರ ಸ್ಪಷ್ಟೀಕರಣ ಮಾಡುವುದಕ್ಕೆ ಕೊಟ್ಟ ಆದ್ಯತೆಯನ್ನು ನೆರೆ ರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸಿ ನಿರಾಶ್ರಿತರಾಗಿ ಬಂದ ಅಲ್ಪಸಂಖ್ಯಾತರ ಸಂಕಷ್ಟಗಳ ನಿವಾರಣೆಗೆ ಏನೂ ಮಾಡಲಿಲ್ಲ ಮೊದಲಿನಿಂದಲೂ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಮತ ಯಾಚಿಸಿದ ಬಿಜೆಪಿ ತನಗೆ ಬಹುಮತ ಬರುತ್ತಲೇ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಸಾರಥ್ಯದಲ್ಲಿ ಪೌರತ್ವ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತಂದಿದೆ.ಆದರೆ ಇದನ್ನು ಸಹ ವಿರೋಧ ಪಕ್ಷಗಳು ಅಪಪ್ರಚಾರ ಮಾಡುವ ಮೂಲಕ ದೇಶದ ಜನತೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ಬಿಜೆಪಿ ಸರಕಾರ ಜಾರಿಗೆ ತಂದಿರುವ ಈ ವಿಧೇಯಕವನ್ನು ಅರಿತು ಪ್ರತಿ ಮನೆಗೂ ಹಾಗೂ ಪ್ರತಿ ವ್ಯಕ್ತಿಗುಾ ಮನಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಎಬಿವಿಪಿ ರಾಜ್ಯ ಮುಖಂಡರಾದ ವಿನಯ್ ಬಿದರಿ ಅವರು ವಿಶೇಷ ಉಪನ್ಯಾಸ ನೀಡಿದರು
ಈ ಸಂದರ್ಭದಲ್ಲಿ ಅಶೋಕ್ ಗಸ್ತಿ ರಾಯಚೂರು,ಗಂಗಾಧರ್ ನಾಯ್ಕ್, ಬ್ಯಾಗವಾಟ್ ಬಸನಗೌಡ, ತಿಮ್ಮರಡ್ಡಿ  ಭೊeಗವತಿ ಶರಣಪ್ಪಗೌಡ ನಕ್ಕುಂದಿ, ಕೊಟ್ರೇಶಪ್ಪ ಕೋರಿ, ಗಿರಿಯ ಪಾಟೀಲ್ ,ಮಲ್ಲನಗೌಡ ನಕ್ಕುಂದಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಅಯ್ಯಪ್ಪ ಮ್ಯಾಕಲ್, ಮಾನಪ್ಪ ನಾಯಕ,ಕುಮಾರಸ್ವಾಮಿ ಪೋತ್ನಾಳ್, ಜಯರಾಜ ಬಾದರದಿನ್ನಿ, ಉಮೇಶ್ ಸಜ್ಜನ್,ವೀರೇಶ್ ನಾಯಕ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here