ಹಾಸ್ಟೆಲ್ ವಿದ್ಯಾರ್ಥಿಗಳ ಹಿತ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ,ರಾಮ ಚಂದ್ರ ನಾಯಕ್

0
236

ಮಾನವಿ ಜ.08- ಇಂದು ಜೆಡಿಎಸ್ ಪಕ್ಷದ ಯುವ ಮುಖಂಡರಾದ ಶ್ರೀ ರಾಮ ಚಂದ್ರ ನಾಯಕ್ ಇವರು ಪಟ್ಟಣದ   ಹಿಂದುಳಿದ ವರ್ಗದ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯಗಳನ್ನ ವೀಕ್ಷಿಸಿದರು ಹಾಸ್ಟೆಲ್ ಆವರಣದಲ್ಲಿ ಲೈಟ್ ಇಲ್ಲದೇ ರಾತ್ರಿ ಕತ್ತಲೆ ಆವರಿಸುವುದು, ಕುಡಿಯುವ ನೀರಿನ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿರುವುದು ಅಡುಗೆ ಮಾಡುವವರು ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಮಾಡದೇ ಇರುವುದು ಕಂಡು ಬಂತು ರಾಮಚಂದ್ರ ನಾಯಕ್ ಇವರು ಈ ಎಲ್ಲಾ ಸಮಸ್ಯೆಗಳನ್ನ ಸ್ಪಂದಿಸಿ ತಕ್ಷಣವೇ ಪರಿಹಾರ ಹುಡುಕಿ ಕೊಡುವ ವ್ಯವಸ್ಥೆ ಮಾಡಿದರು.

ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ಟಿಫಿನ್ ಮಾಡದೇ ಹಾಗೇ ಇದ್ದರು ಅವರಿಗೆ ಸಮಾಧಾನ ಪಡಿಸಿ ಟಿಫಿನ್ ಮಾಡಿಸುವ ಮೂಲಕ ಹಾಸ್ಟೆಲ್ ವಿದ್ಯಾರ್ಥಿಗಳ ಹಿತ ದೃಷ್ಟಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅಭಿಪ್ರಾಯ ಪಟ್ಟರು.

ಇನ್ನು ಹಾಸ್ಟೆಲ್ ವಿದ್ಯಾರ್ಥಿಗಳನ್ನ ಮಾತನಾಡಿ  ಅವರಿಗೆ ಅಧಿಕಾರಿಗಳಿಂದ ಮತ್ತು ಸಂಬಂಧ ಪಟ್ಟ ಸಿಬ್ಬಂದಿಗಳಿಂದ ಆಗುತ್ತಿರುವ ತಾರತಮ್ಯ ಮತ್ತು ತೊಂದರೆಗಳ ಸಂಪೂರ್ಣ ಮಾಹಿತಿ ಪಡೆದರು

ವಿದ್ಯಾರ್ಥಿಗಳಿಗೆ ನೀಡುತ್ತಿರುವ ಊಟ ಮತ್ತು ಅಲ್ಲಿ ನಡೆಯುತ್ತಿರುವ ಬೇಜವಾಬ್ದಾರಿತನದ ಬಗ್ಗೆ ತಿಳಿದು ಬೇಜಾರು ವ್ಯಕ್ತಪಡಿಸಿ ಸಂಬಂಧ ಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು

ನಂತರ ಅಧಿಕಾರಿಗಳಿಗೆ ಮಕ್ಕಳಿಂದ ಮನವಿ ಪತ್ರ ಕೊಡಿಸುವ ಮೂಲಕ ಮುಂದಿನ ದಿನಗಳಲ್ಲಿ  ಎಲ್ಲಾ ಸಮಸ್ಯೆಗಳಿಗೆ ಬಗೆಹರಿಸಿ ಮತ್ತು ಮೂಲ ಭೂತ ಸೌಲಭ್ಯಗಳನ್ನ ಪೂರೈಸಬೇಕು ಮತ್ತು  ಮಕ್ಕಳ ಹಿತ ಕಾಪಾಡಬೇಕು ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ  ಪುರಸಭೆ ಸದಸ್ಯ ಶರಣಪ್ಪ ಮೇಧಾ, ವೀರೇಶ ಉಪ್ಪಾರ್ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here