ಪ್ರಾಥಮಿಕ ಕೃಷಿ ಸಹಕಾರಿ ಚುನಾವಣೆ ಅಭ್ಯರ್ಥಿಗಳ ಗೆಲುವು ವಿಜಯೋತ್ಸವ

0
181

ಮಸ್ಕಿ : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೆಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೆಶಕರು ಗೆಲುವಿನ ನಗೆ ಬೀರಿದ್ದಾರೆ. ೯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಸಂಘದ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ ಮತದಾನ ನಡೆಯಿತು.
ಮತದಾನ ಮಾಡಲು ಮತದಾರರಲ್ಲಿ ಆಸಕ್ತಿವಹಿಸಲಿಲ್ಲ ಕೇವಲ ೩೬ ಜನ ಮತದಾರರು ಹೊಂದಿರುವ ಸಾಲಗಾರರಲ್ಲದ ಕ್ಷೇತ್ರಕ್ಕೆ ದೇವಣ್ಣ ನಾಯಕ ಹಾಗೂ ಮಲ್ಲಯ್ಯ ನಡುವೆ ತುರುಸಿನ ಪೈ ಪೋಟಿ ಏರ್ಪಟ್ಟಿತು, ಒಟ್ಟು ೩೬ ಮತದಾರರ ಪೈಕಿ ೩೩ ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಸಾಲಗಾರರ ಕ್ಷೇತ್ರದಿಂದ ೬ ಜನ ಸ್ಪರ್ಧಿಸಿದ್ದರು ಒಬ್ಬ ಅಭ್ಯರ್ಥಿ ಚುನಾವಣೆ ಕಣದಿಂದ ನಾಮಪತ್ರ ವಾಪಸ್ ಪಡೆದರೂ ಮತದಾನ ನಡೆಯಿತು ಒಟ್ಟು ೧೯೯ ಮತಗಳ ಪೈಕಿ ೯೦ ಜನ ಹಕ್ಕು ಚಲಾಯಿಸಿದರು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತ ಎಣಿಕೆ ಕೆಲಸ ನಡೆಯಿತು.
ಸಾರ್ವಜನಿಕರ ಗಮನ ಸೆಳೆದಿದ್ದ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ದೇವಣ್ಣ ನಾಯಕ ೨೧ ಮತ ಪಡೆದು ಗೆಲುವಿನ ನಗೆ ಬೀರಿದರು ೧೨ ಮತಪಡೆದ ಮಲ್ಲಯ್ಯ ಸೋಲು ಕಂಡರು. ಮಹಿಳಾ ಕ್ಷೇತ್ರದಿಂದ ವಿಜಯ ಲಕ್ಷಿ, ಖಾದರಬಿ ಆಯ್ಕೆ ಯಾದರು ಎಸ್ಸಿ ಕ್ಷೇತ್ರದಿಂದ ದುರುಗಪ್ಪ, ವೆಂಕಪ್ಪ ಗೆಲುವಿನ ನಗೆ ಬೀರಿದರು.
ಸಾಲಗಾರರ ಕ್ಷೇತ್ರದಿಂದ ಬಸವರಾಜ ಮಿಟ್ಟಿಮನಿ, ಪಂಪಾಪತಿ ಹೂವಿನಬಾವಿ, ಅಬ್ದುಲ್ ರಜಾಕ್, ಅಡಿವೆಪ್ಪ, ಲಿಂಗಪ್ಪ ಭರ್ಜರಿ ಗೆಲುವು ಸಾಧಿಸಿದರು ಒಟ್ಟು ೧೧ ಸ್ಥಾನಗಳಲ್ಲಿ ಎಸ್ಟಿ ಕ್ಷೇತ್ರದಿಂದ ಮಲ್ಲಯ್ಯ ಮಲ್ಕಾಪೂರ, ಬಿಸಿಎ. ಕ್ಷೇತ್ರದಿಂದ ಗ್ಯಾನಪ್ಪ ಪೂಜಾರಿ ಅವಿರೋಧ ಆಯ್ಕೆ ಯಾಗಿದ್ದಾರೆ. ೯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಚುನಾವಣಾಧಿಕಾರಿಗಳಾದ ಬಸ್ಸಪ್ಪ ತನಿಖೆದಾರ, ಬಿಜಿ. ನಾಯಕ ಫಲಿತಾಂಶ ಪ್ರಕಟಿಸಿದರು ಫಲಿತಾಂಶ ಪ್ರಕಟಗೊಂಡ ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಪರಸ್ಪರ ಬಣ್ಣ ಎರಚಿ ಕೊಂಡು ಸಂಭ್ರಮಿಸಿದರು.

೦೭ಎAಎಸ್‌ಕೆ೦೧: ಮಸ್ಕಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೆಶಕರ ಚುನಾವಣೆಯಲ್ಲಿ ಫಲಿತಾಂಶ ಪ್ರಕಟಗೊಂಡ ನಂತರ ಜಯಗಳಿಸಿದ ಅಭ್ಯರ್ಥಿಗಳು ವಿಯೋತ್ಸವವನ್ನು ಭಾನುವಾರ ಸಂಜೆ ಆಚರಿಸಿದರು.

LEAVE A REPLY

Please enter your comment!
Please enter your name here