ದೆಹಲಿ ವಿಧಾನ ಸಭೆಗೆ ಫೆಬ್ರವರಿ 8 ರಂದು ಒಂದೇ ಹಂತದಲ್ಲಿ ಮತದಾನ

0
272

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟ ಮಾಡಿದ್ದು, ದೆಹಲಿ ವಿಧಾನ ಸಭೆಗೆ ಫೆಬ್ರವರಿ 8 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಕೇಂದ್ರ ಚುನಾವಣಾ ಆಯೊಗ ಹೇಳಿದೆ .

ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ  ದೆಹಲಿಯ ಆರನೇ ವಿಧಾನಸಭಾ ಚುನಾವಣೆಗೆ ಕೇಂದ್ರ ಮುಖ್ಯ ಚುನಾವಣಾಧಿಕಾರಿ ಸುನೀಲ್ ಅರೋರಾ ಅವರು ಇಂದು ವೇಳಾಪಟ್ಟಿ ಪ್ರಕಟಗೊಳಿಸುವ ಮೂಲಕ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರದ ಅವಧಿ ಫೆಬ್ರವರಿ 22ಕ್ಕೆ ಕೊನೆಗೊಳ್ಳಲಿದ್ದು, 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯ ದಿನಾಂಕ ಪ್ರಕಟಿಸುವ ಮೂಲಕ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದರು.

ತಕ್ಷಣದಿಂದಲೇ ನೀತಿಸಂಹಿತೆ ಜಾರಿಯಾಗಲಿದ್ದು,

ಜನವರಿ 14 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಜನವರಿ 21 ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು, ಜನವರಿ 24 ಕ್ಕೆ ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ ಎಂದು ಸುನಿಲ್ ಅರೋರಾ ವಿವರಿಸಿದರು.

ಫೆಬ್ರವರಿ 8 ರಂದು 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಘೋಷಿಸಿದರು. ಫೆ.11 ರಂದು ಮತಎಣಿಕೆ ನಡೆಯಲಿದೆ ಎಂದರು.

ದೆಹಲಿಯಲ್ಲಿ ಮತದಾನಕ್ಕೆ ಒಟ್ಟು13,750 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಿದ್ದು, 1.46 ಕೋಟಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here