ತೊಂಡಿಹಾಳ ಜಾತ್ರೆಯಲ್ಲಿ ಅನಿಷ್ಠ ಪದ್ಧತಿ ತಡೆಯಲು 5 ತಂಡಗಳ ರಚನೆ; ಸಹಾಯಕ ಆಯುಕ್ತ ಡಾ|| ದಿಲೀಶ್ ಶಶಿ

0
379

ಲಿಂಗಸುಗೂರು.ಜ.04- ತಾಲೂಕಿನ ತೊಂಡಿಹಾಳ ಜಾತ್ರೆಯಲ್ಲಿ ಅನಿಷ್ಠ ಪದ್ಧತಿ ತಡೆಗಟ್ಟಲು ೫ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ಡಾ|| ದಿಲೀಶ್ ಶಶಿ ತಿಳಿಸಿದರು.
ಪಟ್ಟಣದ ಸಹಾಯಕ ಆಯುಕ್ತರ ಕಛೇರಿಯಲ್ಲಿ ಜಾತ್ರೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವದಾಸಿ ಬೀಡುವ ಪದ್ಧತಿ, ಪ್ರಾಣಿಬಲಿ ಸೇರಿದಂತೆ ಇನ್ನಿತರ ಅನಿಷ್ಠ ಪದ್ಧತಿಗಳನ್ನು ತಡೆಗಟ್ಟಲು ಆಯಾಕಟ್ಟಿನ ಸ್ಥಳಗಳಲ್ಲಿ 5 ಕಡೆ ವಿಶೇಷ ತಂಡಗಳನ್ನು ರಚನೆ ಮಾಡಲಾಗುವುದು. ದೇವಸ್ಥಾನದ ಬಳಿ ಪ್ರಾಣಿಬಲಿಯನ್ನು ತಡೆಯಲು ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗುವುದು.

ಹಲ್ಕಾವಟಗಿ ಮತ್ತು ತೊಂಡಿಹಾಳ ಗ್ರಾಮದಬಳಿ ಚೆಕ್‌ಪೋಸ್ಟ್ಗಳನ್ನು ನಿರ್ಮಿಸಲಾಗುವುದು. ಜಾತ್ರೆಯಲ್ಲಿ ಮಧ್ಯನಿಷೇದಿಸಲಾಗಿದೆ. ಒಂದು ವೇಳೆ ಅಕ್ರಮವಾಗಿ ಮಧ್ಯಮಾರಾಟ ಮಾಡುವುದು ಕಂಡು ಬಂದರೆ ಮಾರಾಟಗಾರರು ಹಾಗೂ ಸರಬರಾಜುದಾರರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಜನೇವರಿ 18 ರಂದು ಸಂಜೆ 6 ಗಂಟೆಯಿAದ ಬೆಳಿಗ್ಗೆ 6 ಗಂಟೆಯವರೆಗೆ ಅನಿಷ್ಠ ಪದ್ಧತಿಗಳು ನಡೆಯುವುದು ಹೆಚ್ಚು ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ತುಂಬ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಜನೇವರಿ 9 ರಂದು ತೊಂಡಿಹಾಳ ಗ್ರಾಮದ ಶಾಲೆಯಲ್ಲಿ ಮತ್ತೊಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಕಾರಣ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಹಾಗೂ ಸುತ್ತಾಮುತ್ತಲಿನ ಗ್ರಾಮಸ್ಥರು ಈ ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಅನಿಷ್ಠ ಪದ್ಧತಿಗಳನ್ನು ತಡೆಯಲು ಸಹಕರಿಸಬೇಕೆಂದು ಮನವಿ ಮಾಡಿದರು.

ಡಿವೈಎಸ್‌ಪಿ ಹರೀಶ್, ತಹಶೀಲ್ದಾರ ಚಾಮರಾಜ ಪಾಟೀಲ್, ಮಸ್ಕಿ ಸಿಪಿಐ, ಮುದಗಲ್ ಪಿಎಸ್‌ಐ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ದಲಿತ ಸಂಘಟನೆಯ ಮುಖಂಡರಾದ ಶರಣಪ್ಪ ಕಟ್ಟಿಮನಿ, ರಮೇಶ ಗೋಸ್ಲೆ, ನಾಗರಾಜ, ಬಸವರಾಜ ಬಂಕದಮನಿ, ಶಿವಪ್ಪ ಭಟ್ಟರ್, ತಿಪ್ಪಣ್ಣ ಕರಡಕಲ್, ಹುಲಗಪ್ಪ ಕೆಸರಟ್ಟಿ, ಹುಸೇನಪ್ಪ ಯರಡೋಣ ಸೇರಿ ಇತರರು ಇದ್ದರು.

LEAVE A REPLY

Please enter your comment!
Please enter your name here