CAA,NRC.NPRವಿರುದ್ಧ ಬೃಹತ್ ಪ್ರತಿಭಟನೆ ಜಾಥಾ ಮತ್ತು ಸಮಾವೇಶ; ಮಾನವಿ.

0
247

ಮಾನ್ವಿ, ಡಿ.28: ಬಿಜೆಪಿಯವರು ಸಿಎಎ, ಎನ್‌ಆರ್‌ಸಿ ಎನ್ ಆರ್ ಪಿ, ಜಾರಿಗೆ ತರುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಹೊರಟಿದ್ದು, ಇಂತಹ ಅನಿಷ್ಟ ನೀತಿಗಳನ್ನು ವಿರೋಧಿಸಿ ತೀವ್ರ ಸ್ವರೂಪದ ಹೋರಾಟ ಮಾಡಬೇಕಾಗಿದೆ. ಸಂವಿಧಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಕಾಂಗ್ರೇಸ್ ಮುಖಂಡ ದಲಿತ  ನಾಯಕ ಬಾಲಸ್ವಾಮಿ ಕೊಡ್ಲಿ ಮತ್ತು ದಲಿತ,ಅಲ್ಪಸಂಖ್ಯಾತ,ಹಿಂದುಳಿದವರ್ಗ ಸಮನ್ವಯ ಸಮಿತಿ ಹಾಗು ಸಂವಿದಾನ ಉಳುವಿಗಾಗಿ ನಾಗರಿಕ ವೇದಿಕೆ ಮತ್ತು ಇತರೇ ಸಂಘಟನೆಗಳ ಎಲ್ಲಾ ಮುಖಂಡರು ಒಕ್ಕೊರಲಿನಿಂದ ಕರೆ ನೀಡಿದರು.

ನಗರದ ಗಂಗಾ ಮತಸ್ಥ ಸಮುದಾಯ ಭವನದಿಂದ ಟಿ ಎ ಪಿ ಏಮ್ ಏಸ್ ಆವರದ ವರೆಗೆ ನಡೆದ ಬೃಹತ್ ಪ್ರಮಾಣದ  ಜಾಥಾ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರುಗಳು, ಕೇಂದ್ರದಲ್ಲಿ ಮೊದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಗಳನ್ನೇ ಜಾರಿಗೆ ತಂದಿದೆ. ಈಗ ಮತ್ತೆ ಸಿಎಎ, ಎನ್‌ಆರ್‌ಸಿಯನ್ನು ಜಾರಿಗೆ ತರುವ ಮೂಲಕ ಧರ್ಮಗಳನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ. ಇಂತಹ ಅನಿಷ್ಟ ನೀತಿಗಳನ್ನು ವಿರೋಧಿಸಿ ಹೋರಾಟ ಮಾಡಬೇಕಾಗಿದೆ ಕರೆ ನೀಡಿದರು.

ರಜಾಕ್ ಉಸ್ತಾದ್ ಮಾತನಾಡಿ ಅನಕ್ಷರಸ್ಥರು, ಪಂಚೇರ್ ಹಾಕುವವರು ಈ ದೇಶದ ಸ್ವಾಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು ಆದರೇ ಜಂಬಕೊಚ್ಚಿಕೊಳ್ಳುವ ಆರೆಸೆಸ್ಸ್, ಬಿಜೆಪಿಯ ಯಾವೊಬ್ಬ ವ್ಯಕ್ತಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಇರಲೇ ಇಲ್ಲ ಬದಲಾಗಿ ಇವರ ಪೂರ್ವಜರು ಬ್ರಿಟೀಶರ ಚಪ್ಪಲಿ ನೆಕ್ಕುತ್ತಿದ್ದರು  ದೇಶದಲ್ಲಿ ಸಾಮಾಜಿಕ,ಆರ್ಥಿಕ ಬೆಳವಣಿಗೆ ಆಗಿದ್ದರೆ ಅದಕ್ಕೆ ಅನಕ್ಷರಸ್ಥ ಸಾಮಾನ್ಯ ಜನರೇ ಕಾರಣ ಹೊರತು ಬೇರಾರೂ ಅಲ್ಲ ಎಂದು ಹೇಳಿದರು.

ಹೊರಾಟಗಾರ ಆರ್ ಮಾನಸಯ್ಯ ಮಾತನಾಡಿ  ನೆಹರು ಅವರು ಮಿಶ್ರ ಆರ್ಥಿಕ ನೀತಿಗೆ ಒತ್ತು ನೀಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಸಂಸ್ಥೆಯನ್ನೂ ಖಾಸಗಿಯವರಿಗೆ ಮಾರಾಟ ಮಾಡಿ, ಸಾಮಾಜಿಕ ನ್ಯಾಯಕ್ಕೆ ದೊಡ್ಡ ಕೊಡಲಿ ಪೆಟ್ಟು ಕೊಟ್ಟಿದ್ದಾರೆ .

ಇತಿಹಾಸ ತಿರುಚುವುದೇ ಬಿಜೆಪಿಯ ಕೆಲಸವಾಗಿದ್ದು, ದೇಶದ ಯುವಕರಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ಮೋದಿ ಒಬ್ಬ ಸುಳ್ಳುಗಾರ, ದೇಶದ ಜನರ ದಾರಿ ತಪ್ಪಿಸುವ ಕಾರ್ಯ ಬಿಜೆಪಿ ನಾಯಕರಿಂದ ಆಗುತ್ತಿದೆ. ದೇಶದ ಜಿಡಿಪಿ ಕುಸಿದಿದ್ದು, ಖಾಸಗಿ ಕ್ಷೇತ್ರದ ಕಂಪೆನಿ, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ಕಡಿಮೆ ಆಗುತ್ತಿದೆ, ಬಿಜೆಪಿ ಯವರು ಧರ್ಮದ ಆಧಾರದ ಮೇಲೆ ಕಾನೂನುಗಳನ್ನ ಜಾರಿಮಾಡುವುದು ಯಾವತ್ತೂ ಸಹಿಸಲು ಸಾಧ್ಯವಿಲ್ಲ ನಾವು ನಿರಂತರ ಹೊರಾಟ ಮಾಡಲಾಗುವುದು ಎಂದು ಹೇಳಿದರು.

ಮುಖ್ಯ ಭಾಷಣಗಾರ ತೊಸೀಫ್ ಮಡಿಕೇರಿ ಮಾತನಾಡಿ, ಬಿಜೆಪಿ ಆಡಳಿತದ ಅಂತ್ಯದ ಆರಂಭವಾಗಿದೆ. ಮುಖ್ಯಮಂತ್ರಿ ಯಡಿಯಪ್ಪನವರು ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಮಂಗಳೂರಿನ ಗೊಲಿಬಾರ್ ಗೆ ಕಾರಣರಾದ ಪೊಲಿಸ್ ಕಮಿಷ್ನರ್ ಹರ್ಷಾಕುಮಾರ್ ನ ವಜಾಗೊಳಿಸಿ ಮೃತರರ ಮನೆಯವರಿಗೆ ನ್ಯಾಯವದಗಿಸಬೇಕು ನಾವು ಯಾರೂ ಹೆದರಬೇಕಿಲ್ಲ. ನಮ್ಮ ಶಕ್ತಿ ಏನೆಂದು ತೋರಿಸಬೇಕಾಗಿದೆ ಎಂದು ಹೇಳಿದರು.

ಇನ್ನಿತರೇ ಸಂಘ ಸಂಸ್ಥೆಗಳ ಮುಖಂಡರುಗಳು ಮಾತನಾಡಿ  ಜನಪರ ಆಡಳಿತ ನೀಡುವುದನ್ನು ಮೋದಿ ಮರೆತಿದ್ದು, ಬಿಜೆಪಿ ದೇಶವನ್ನು ಹಿಂದೂರಾಷ್ಟ್ರ ಮಾಡಲು ಹೊರಟಿದೆ.

ಸಿಎಎ, ಎನ್‌ಆರ್‌ಸಿ ವಿರೋಧಿಸಿದ ವಿದ್ಯಾರ್ಥಿಗಳನ್ನು ಹೊಡೆದಿದ್ದು, ಕೊಂದಿದ್ದನ್ನು ಇಡೀ ವಿಶ್ವವೇ ನೋಡುತ್ತಿದೆ. ವಿಶ್ವದ ವಿವಿಧ ರಾಷ್ಟ್ರದ ವಿವಿಗಳ ವಿದ್ಯಾರ್ಥಿಗಳು ಖಂಡಿಸಿದ್ದಾರೆ. ದೇಶ ಬಡತನಕ್ಕೆ ಬಂದಿದೆ. ರೈತ, ಬಡವ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾನೆ.

ಪೌರತ್ವ ತಿದ್ದುಪಡಿ ಕಾಯ್ದೆ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಸುಪ್ರೀಂಕೋರ್ಟ್ ಇದನ್ನು ರದ್ದು ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ದೇಶದ ಜನರು ನಾಲ್ಕಾರು ವರ್ಷದಿಂದ ಹಿಂಸೆ ಅನುಭವಿಸುತ್ತಿದ್ದಾರೆ. 19 ಲಕ್ಷ ಜನ ಪೌರತ್ವ ಕಳೆದುಕೊಳ್ಳುತ್ತಿದ್ದು, ಬಿಜೆಪಿಯವರು ಇದರಲ್ಲಿ ಹೆಚ್ಚಿನವರು ಮುಸಲ್ಮಾನರು ಎಂದು ಕೊಂಡಿದ್ದರು. ಆದರೆ 15 ಲಕ್ಷ ಜನ ಹಿಂದುಗಳು ಇದ್ದಾರೆ ಎಂಬ ಮಾಹಿತಿ ಇದೆ. 25 ಮಂದಿ ಸಾವನ್ನಪ್ಪಿದ್ದಾರೆ. ಜನ ಬೀದಿಗೆ ಬಂದಿದ್ದಾರೆ. ಮಂಗಳೂರಿನ ಲ್ಲಿ 200 ಮಂದಿ ಪ್ರತಿಭಟನೆ ನಡೆಸಿದ್ದನ್ನು ತಡೆಯದೇ ಹಿಂಸೆಗೆ ದೂಡಿ ಇಬ್ಬರು ಅಮಾಯಕರನ್ನು ಸಾಯಿಸಿದ್ದಾರೆ. ಇದರಿಂದ ಲಾಭ ಪಡೆಯಲು ಮುಂದಾದರೆ, ಇದೇ ತಿರುಗಿ ಬೀಳಲಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಮುಕ್ತ ಭಾರತ ಆಗಲಿದೆ. ಸಂವಿಧಾನ ಉಳಿಸುವ ಸಂಕಲ್ಪಮಾಡೊಣ. ಈ ಮೂಲಕ ದೇಶ ಉಳಿಸುವ ಕಾರ್ಯ ಮಾಡೊಣ ಎಂದು ಭಾಷಣಕಾರರು ಹೇಳಿದರು.

 

ಮಾನ್ವಿ ತಾಲೂಕಿನ ದಂಡಾಧಿಕಾರಿ ಬಿರಾದರ್ ಅವರು ಸಮಾವೇಶದ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವಿಕರಿಸಿದರು.

ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ಹಳ್ಳಿಗಳಿಂದ  ಮುಸ್ಲಿಮ್ ,ದಲಿತ, ನಾಯಕ, ಹಿಂದುಳಿದ ವರ್ಗದ ಸಾವಿರಾರು ಜನ ಭಾಗವಹಿಸಿದರು

ಪೊಲಿಸ್ ಇಲಾಖೆ ಶಾಂತಿಯನ್ನ ಕಾಪಾಡಲಿಕ್ಕಾಗಿ ಉತ್ತಮ ರೀತಿಯಲ್ಲಿ ಬಂದೊಬಸ್ತ್ ಮಾಡಿತ್ತು

ಈಸಂದರ್ಭದಲ್ಲಿ ಜೆಡಿಎಸ್ ಮುಖಂಡ ರಾಮಚಂದ್ರ ನಾಯಕ, ಕಾಂಗ್ರೇಸ್ ಮುಖಂಡ ರವಿ ಭೊಸರಾಜು,ರಾಜಾ ವಸಂತ ನಾಯಕ, ಸಿರಾಜ್ ಜಾಪರಿ, ಅಸ್ಲಮ್ ಪಾಶ ,ವಸಂತ ಕೊಡ್ಲಿ, ಕಲೀಲ್ ಕುರೇಶಿ, ಗಫೂರ್ ಸಾಬ್ ,ಅಕ್ಬರ್ ಪಾಶ ಸಾಬ್, ಇಬ್ರಾಮ್ ಕುರೇಶಿ, ಸಿದ್ರಾಮಪ್ಪ ನೀರ್ಮಾನ್ವಿ, ಆಕಿಲ್ ಜೀಶಾನ್, ಖಾಲಿದ್ ಗುರು ,ಆದಮ್ ಬೇಗ್, ಮತ್ತು ಇತರೇ ಮುಖಂಡರು ಮತ್ತು ಧಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here