ಏಪ್ರೇಲ್ ಮಾಹೆಯಲ್ಲಿ ರಾಜ್ಯದಲ್ಲಿ ಅಧಿಕೃತವಾಗಿ NPR ಚಾಲನೆ

0
81

ಸ್ಪೆಷಲ್‌ಡೆಸ್ಕ್: ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆಗಳು ಮುಂದುವರೆದಿದ್ದರೂ ಕೂಡ ಮುಂದಿನ ವರ್ಷದ ಆರಂಭದಲ್ಲಿ ಬೆಂಗಳೂರು ನಗರದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಮಾಡಿಕೊಳ್ಳುವುದಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಅಂತಿಮ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) 2021 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ಜನಗಣತಿ ನಿರ್ದೇಶಕ ಎಸ್‌ಬಿ ವಿಜಯ್ ಕುಮಾರ್ ಖಚಿತಪಡಿಸಿದ್ದಾರೆ.

ಮೊದಲ ಹಂತವು 2020 ರ ಏಪ್ರಿಲ್ 15 ಮತ್ತು 2020 ರ ಮೇ 29 ರ ನಡುವೆ 45 ದಿನಗಳ ಅವಧಿಗೆ ನಡೆಯಲಿದ್ದು, ಮುಂದಿನ ಹಂತವು 2021 ರ ಫೆಬ್ರವರಿ 9 ರಿಂದ 28 ರವರೆಗೆ ಆಂಗ್ಲ ಪತ್ರಿಕೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

LEAVE A REPLY

Please enter your comment!
Please enter your name here