CAA ಮತ್ತು NRC ಅಮಾನವೀಯ ಕಾಯಿದೆಗಳು ಇವುಗಳ ವಿರುದ್ಧ ಡಿಸೆಂಬರ್ 28 ಮತ್ತು 30ರಂದು ಮಾನವಿ ನಗರ ಹಾಗು ರಾಯಚೂರು ನಗರದಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯಸಮಿತಿ ಹಾಗು ರಾಯಚೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಂವಿಧಾನ ಹಕ್ಕುಗಳಿಗಾಗಿ ನಾಗರಿಕರ ವೇದಿಕೆ ವತಿಯಿಂದ  ನಡೆಯುತ್ತಿರುವ ಪ್ರತಿಭಟನಾ ಸಮಾವೇಶಗಳಿಗೆ  ವೆಲ್ಫೇರ್ ಪಾರ್ಟಿ ಬೆಂಬಲ; ಮೌಲಾನ ಶೇಕ್ ಫರೀದ್ ಉಮರಿ

0
306

ಮಾನವಿ : ಕೇಂದ್ರ ಸರ್ಕಾರ ಜಾರಿ ಮಾಡಿದ CAA ಮತ್ತು NRC ಅಮಾನವೀಯ ಕಾಯಿದೆಗಳು ಇವುಗಳ ವಿರುದ್ಧ ಡಿಸೆಂಬರ್ 28 ಮತ್ತು 30ರಂದು ಮಾನವಿ ನಗರ ಹಾಗು ರಾಯಚೂರು ನಗರದಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯಸಮಿತಿ ಹಾಗು ರಾಯಚೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಂವಿಧಾನ ಹಕ್ಕುಗಳಿಗಾಗಿ ನಾಗರಿಕರ ವೇದಿಕೆ ವತಿಯಿಂದ  ನಡೆಯುತ್ತಿರುವ ಪ್ರತಿಭಟನಾ ಸಮಾವೇಶಗಳಿಗೆ  ವೆಲ್ಫೇರ್ ಪಾರ್ಟಿ ರಾಯಚೂರು ಬೆಂಬಲ ನೀಡುತ್ತಿದೆ ಎಂದು ಜಿಲ್ಲಾಧ್ಯಕ್ಷ ಮೌಲಾನ ಶೇಕ್ ಫರೀದ್ ಉಮರಿ ತಿಳಿಸಿದ್ದಾರೆ.

ಇಂದು ಮಾನವಿ ನಗರದಲ್ಲಿ ನಡೆದ  ಪತ್ರಿಕಾ ಘೊಷ್ಟಿ ಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದ ನೀತಿ ಮತ್ತು ಹೊಸದಾಗಿ ಜಾರಿ ಮಾಡಿರುವ ವಿವಾದಾತ್ಮಕ ಕಾನೂನು ಮಸೂದೆಗಳ ಖಂಡಿಸಿ ಕೇಂದ್ರದ ಮೇಲೆ ವಾಗ್ದಾಳಿ ನಡೆಸುತ್ತಾ ಅವರು     ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದಆಶಯಗಳಿಗೆ ವಿರುದ್ದವಾಗಿ ನಡೆ ಆರಂಭಿಸಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿಲ್ಲ, ಕಪ್ಪುಹಣವಾಪಾಸ್ ತಂದಿಲ್ಲ, ಸ್ವಾಮಿನಾಥನ್ ವರದಿಜಾರಿಗೊಳಿಸಿಲ್ಲ, ಬೆಲೆ ಏರಿಕೆ ನಿಯಂತ್ರಿಸಿಲ್ಲ, ಬದಲಾಗಿದೇಶದ ಸಂಪತ್ತನ್ನು ಅದಾನಿ, ಅಂಬಾನಿಯಂತಹವರಿಗೆಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದಸಂಸ್ಥೆಗಳನ್ನು ಖಾಸಗೀಕರಣ ಮಾಡಲುಮುಂದಾಗಿದ್ದಾರೆ. ಇವುಗಳನ್ನು ಮರೆಮಾಚಲು ಸುಳ್ಳಿನಮೇಲೆ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.

ಈಗ ಸಂವಿಧಾನ ಪರಿಚ್ಛೇದ 14,15 ಮತ್ತು 21ರಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಸರಕಾರ ಪೌರತ್ವತಿದ್ದುಪಡಿ ಮತ್ತು ಪೌರತ್ವ ನೊಂದಣಿ ಕಾಯ್ದೆಜಾರಿಗೊಳಿಸಿ ಜಾತಿ, ಧರ್ಮದ ಹೆಸರಿನಲ್ಲಿವಿಭಜಿಸಲಾಗುತ್ತಿದೆ.

ಕೇಂದ್ರ ಸರಕಾರ ಈಮಸೂದೆಯನ್ನ ಜಾರಿ ಮಾಡುವ ಮೂಲಕ ದೇಶವನ್ನವಿಭಜಿಸುವ ಕೆಲಸಕ್ಕೆ ಕೈ ಹಾಕಿದೆ ಮುಸ್ಲಿಮ್ ವಿರೊಧಿನೀತಿ ಅನುಸರಿಸುತ್ತಿದೆ

ಕೇಂದ್ರ ಸರಕಾರದ ಧೊರಣೆಒಂದು ಸಮುದಾಯಕ್ಕೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಹಚ್ಚುವ ರೀತಿಯಲ್ಲಿದೆ,

ಮೊದಿ ಸರಕಾರ ಹಿಟ್ಲರ್ ಸಂಸ್ಕೃುತಿಯನ್ನೇ ಮೀರಿಸಿದೆ, ಮೂದಿ ಸರಕಾರ ಬ್ರಿಟೀಷ್ ಸರಕಾರಕ್ಕಿಂತಲೂ ಅಧಿಕ ಕ್ರೂರಿಯಾಗಿದೆ,

ಸರಕಾರ ಈ ಮಸೂದೆ ಜಾರಿಮಾಡಿ ಮುಸ್ಲಿಮ್ಮ ಸಮುದಾಯವನ್ನ ಕೊಲ್ಲುವ ಪ್ರಯತ್ನದಲ್ಲಿದೆ, ಈ ಸರಕಾರ ದೇಶದ ಪ್ರಗತಿಗೆ ಮಾರಕವಾಗಿದೆ ,ತನ್ನ ನ್ಯೂನ್ಯತೆಗಳನ್ನ ಮುಚ್ಚಿಹಾಕಲು ಪದೇ ಪದೇ ಇಂತಹವಿಷಯಗಳನ್ನ ತಂದು ಜನರ ಗಮನ ಬೇರೆಡೆಗೆ ಸೆಳೆಯುವ ಕುತಂತ್ರ ಇದಾಗಿದೆ ಅಸ್ಸಾಮ್ ನ NRC ಮೂಲಕ ತಾನು ಮಾಡಿದ ತಪ್ಪಿನಿಂದ ಹೊರಗುಳಿದ19 ಲಕ್ಷ ಜನರ ಪೈಕಿ 05 ಲಕ್ಷ ಮುಸಲ್ಮಾನರನ್ನ ಹೊರತು ಪಡಿಸಿ 14 ಲಕ್ಷ ಬಂಗಾಳಿ ಹಿಂದೂಗಳನ್ನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಂವಿಧಾನ ವಿರೊಧಿ ಧರ್ಮಾಧಾರಿತ ಮಸೂದೆ ತಂದಿರುವುದು ಖಂಡನೀಯ ರಾಷ್ಟ್ರಪತಿಗಳು ಅಂಕಿತ ಹಾಕಬಾರದಿತ್ತು ಆದರೂ ಅವರುಗಳು ಬಿಜೆಪಿಯ ಒತ್ತಡಕ್ಕೆ ಮಣಿದುಅಂಕಿತ ಹಾಕಿರುವುದು ದುರದುಷ್ಟಕರ,

ಪ್ರಜಾಪ್ರಭುತ್ವದ ದೇಶ ಭಾರತದಲ್ಲಿ ಸಂವಿಧಾನದ ಮೂಲ ಅಂವಶಗಳಿಗೆ ಧಕ್ಕೆ ತರುವ ಮೂಲಕ ಪ್ರಜಾಪ್ರಭತ್ವ ವ್ಯವಸ್ಥೆಯನ್ನ ಮುಗಿಸಿ ಹಿಂದುತ್ವವನ್ನ

ಜಾರಿಗೆ ತರುವ ದುಷ್ಟ ಯೊಚನೆ ಸರಕಾರದ್ದಾಗಿದೆ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಪೌರತ್ವ ಮಸೂದೆಜಾರಿಯಾಗಿರುವುದು ನಮ್ಮೆಲ್ಲರ ಪಾಲಿಗೆ ಕರಾಳ ದಿನವಾಗಿದೆ  ಪೌರತ್ವ ಮಸೂದೆ ತಿದ್ದುಪಡಿಯ ಹೆಸರಿನಲ್ಲಿ  ಈ ದೇಶದಲ್ಲಿರುವ ಮುಸಲ್ಮಾನರಿಗೆ ದೇಶದ ಹೊರಗೆ ದಬ್ಬುವ ಉದ್ದೇಶ ಇವರದ್ದಾಗಿದೆ  ಮಸೂದೆ NRC ಜಾರಿ ಮಾಡುವ ಮೋದಲನೇ ಮೆಟ್ಟಿಲು ಎಂದೇ ಹೇಳಲಾದ NPR ಪ್ರಾರಂಭ ಮಾಡುತ್ತಿರುವುದು ಸಹ ತಕ್ಷಣವೇ ನಿಲ್ಲಿಸಬೇಕು

ಇದೇ ಡಿಸೆಂಬರ್ 19 ಗುರುವಾರ ಮಂಗಳೂರಿನಲ್ಲಿ  ನಡೆದ ಪೊಲೀಸ್ ಗೋಲಿಬಾರ್ ಪ್ರಕರಣದಲ್ಲಿ ಮೃತರಾದ ಇಬ್ಬರು ಅಮಾಯಕರ ಕುಟುಂಬಕ್ಕೆ ಘೋಷಣೆ ಮಾಡಿದ 10 ಲಕ್ಷ ಪರಿಹಾರ ವಾಪಸ್ ಪಡೆದಿರುವ ರಾಜ್ಯ ಬಿಜೆಪಿ ಸರಕರದ ಕ್ರಮ ಖಂಡನೀಯ ಮೃತರ ಮೇಲೆ ಎಫ್ ಐ ಆರ್ ಮಾಡಿರುವುದು ಮತ್ತು ಅವರ ಮೇಲೆ ರಾಜಕೀಯಮಾಡುವುದು ಕೂಡಲೆ ನಿಲ್ಲಿಸ ಬೇಕೆಂದು ಆಗ್ರಹಿಸುವ ಮೂಲಕ ಮೃತ ಕುಟುಂಬಗಳಿಗೆ  ತಲಾ ರೂ.25 ಲಕ್ಷ ಪರಿಹಾರ ನೀಡಬೇಕಾಗಿ  ವೆಲ್ಫೇರ್ ಪಾರ್ಟಿಆಫ್ ಇಂಡಿಯಾ ಒತ್ತಾಯಿಸುತ್ತದೆ ಪ್ರಕರಣದಲ್ಲಿ ಮೃತರಾದ ನೌಶೀನ್ ಮತ್ತು ಜಲೀಲ್ ನ ಕುಟುಂಬಕ್ಕೆ ಭೇಟಿಯಾದ ಪಕ್ಷದ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಕುಟುಂಬದ ಸದಸ್ಯರಿಗೆ ಸರಕಾರಿಉದ್ಯೋಗ ಕೊಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜಿಲ್ಲಾಧಿಕಾರಿ ಮೂಲಕ ಪತ್ರಬರೆದು ಕಳುಹಿಸಿದ್ದಾರೆ

 ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಗುಂಪೊಂದರಮೇಲೆ ಗೋಲಿಬಾರ್‍ಗೆ ಆದೇಶಿಸಿ ಇಬ್ಬರು ಅಮಾಯಕರ ಸಾವಿಗೆ ಕಾರಣರಾದ ಮಂಗಳೂರು ಜಿಲ್ಲೆಯಪೊಲೀಸ್ ಅಧಿಕಾರಿಗಳ ಕ್ರಮವನ್ನು ವೆಲ್ಫೇರ್ಪಾರ್ಟಿಈ ಸಂದರ್ಭದಲ್ಲಿ ಖಂಡಿಸುತ್ತದೆ. ಅಲ್ಲದೆ, ಮಂಗಳೂರು ಕಮೀಷನರ್ ಹರ್ಷ ಕುಮಾರ್ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಸರಕಾರವನ್ನು ಒತ್ತಾಯಿಸುತ್ತದೆ ಸದ್ಯ ಸರಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದರೂ, ಮಂಗಳೂರು ಜಿಲ್ಲೆಯ ಉನ್ನತ ಪೊಲೀಸ್ಅಧಿಕಾರಿಗಳು ಇದರಲ್ಲಿ ನೇರವಾಗಿ ಶಾಮೀಲಾಗಿದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ವೆಲ್ಫೇರ್ ಪಾರ್ಟಿ ಒತ್ತಾಯಿಸುತ್ತದೆ.

ಈ ಕೇಂದ್ರ ಸರಕಾರದ ಈ ಮಸೂದೆ ಮತ್ತು ಸರಕಾರದ  ನೀತಿಗಳನ್ನು ರದ್ದು ಪಡಿಸಲು ಒತ್ತಾಯಿಸಿಮಾನವಿ ನಗರದಲ್ಲಿ ದಿನಾಂಕ 28/12/19 ರಂದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯಸಮಿತಿ ವತಿಯಿಂದ ನಡೆಯುವ ಪ್ರತಿಭಟನಾ ರ್ಯಾಲಿ,ಸಮಾವೇಶಕ್ಕೆ ಮತ್ತು ರಾಯಚೂರಿನಲ್ಲಿಡಿ.30 ರಂದು ರಾಯಚೂರಿನ

ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಂವಿಧಾನ ಹಕ್ಕುಗಳಿಗಾಗಿ ನಾಗರಿಕರ ವೇದಿಕೆ ವತಿಯಿಂದ ನಡೆಯುವ ಬಹೃತ್ ಪ್ರತಿಭಟನಾ ಸಮಾವೇಶಕ್ಕೆ ವೆಲ್ಫೇರ್ ಪಾರ್ಟಿ ಸಂಪೂರ್ಣ ಬೆಂಬಲ ಘೋಷಿಸಿದೆ ಜೊತೆಗೆ ಈ ಪ್ರತಿಭಟನಾ ಸಮಾವೇಶಗಳನ್ನ ಯಸಸ್ವಿಗೋಳೆಸಲು ಹೆಚ್ಚಿನ ಸಂಖ್ಯಯಲ್ಲಿ ಸಾರ್ವಜನಿಕರು ಭಾಗವಹಿಸ ಬೇಕೆಂದು ಕರೆ ನೀಡುತ್ತದೆ.

ಈಗಾಗಲೆ ಸಿ ಏ ಏ ವಿರುದ್ಧ ವೆಲ್ಫೇರ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರು ಖಾಸಿಮ್ಸು ರಸೂಲ್ ಇಲಿಯಾಸ್ ಸುಪ್ರೀಮ್ ಕೊರ್ಟ್ ನಲ್ಲಿ ದಾವೆ ಹೂಡಿದ್ದಾರೆ

ಈ ಸಂದರ್ಭದಲ್ಲಿ   ಜಿಲ್ಲಾ ಸಮಿತಿ ಸದಸ್ಯ ಎಂ ಏ ಏಚ್ ಮುಖೀಮ್, ಪ್ರೆಟರ್ ನಿಟಿ ಅಧ್ಯಕ್ಷ ಅಬ್ದುಲ್ ಕೈಯ್ಯೂಮ್ ಮತ್ತು ಪಕ್ಷದ ಕಾರ್ಯಕರ್ತರಾದ  ರಫೀ ಬಾಗಲ್ಕೊಟ್,ಇರ್ಫಾನ್,ಅತೀಕ್,ಸಮೀರ್,ಯಾಸಿನ್ ಸಿದ್ದೀಕಿ,ಮಹೆಮೂದಿ,ಮುಸ್ತಫಾ,ಹುಸೇನ್ಬಾಷ, ದಾದೇ ಸಾಬ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here