ಡಿ.28 ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಾನವಿ ಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ; ಎ ಬಾಲ ಸ್ವಾಮಿ ಕೊಡ್ಲಿ.

0
303

ಮಾನ್ವಿ:ಡಿ.24 ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ ಸಿ ನೀತಿಗಳಿಂದ ದೇಶದ ಮೂಲ ನಿವಾಸಿಗಳಾದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ, ಆದಿವಾಸಿ ಬುಡಕಟ್ಟು ಜನಾಂಗಗಳ ಮೇಲೆ ಹಾಗೂ ಅನ್ಯಾಯಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರಕಾರವು ಈ ಕಾಯ್ದೆಗಳನ್ನು ಕೈಬಿಡಬೇಕೆಂದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ಸಮಿತಿ ವತಿಯಿಂದ ಡಿಸೆಂಬರ್ 28 ರಂದು ಮಾನ್ವಿಯಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎ ಬಾಲಸ್ವಾಮಿ ಕೊಡ್ಲಿ, ರಾಜಾ ರಾಮಚಂದ್ರ ನಾಯಕ್, ಬಿಕೆ ಅಮರೇಶಪ್ಪ, ಗಪೂರ್ ಸಾಬ್, ತಿಪ್ಪಣ್ಣ ಬಾಗಲವಾಡ ಹೇಳಿದರು.

ಪಟ್ಟಣದ ಗಂಗಾಮತ ಸಮುದಾಯ ಭವನದಲ್ಲಿ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿಮಾತನಾಡಿದ ಅವರು ಕೇಂದ್ರದ ಬಿಜೆಪಿ ಸರಕಾರವು ಈ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ನಾಗರಿಕತ್ವದ ಹಕ್ಕಿನ ಉಲ್ಲಂಘನೆಯಾಗಿದೆ.ಭಾರತ ಸಂವಿಧಾನದ ಅನುಚ್ಛೇದ 14 ಮತ್ತು 21ರಲ್ಲಿ ಹೇಳುವ ಸಮಾನತೆಯ ಹಕ್ಕಿನ ವಿರುದ್ಧವಾದ ಕಾಯ್ದೆ ಇದಾಗಿದೆ.ಧರ್ಮದ ಆಧಾರದಲ್ಲಿ ಕಾನೂನು ರಚನೆ ಮಾಡುವುದು ಭಾರತ ಸಂವಿಧಾನದ ಮೂಲಕ ಹೇಳಿರುವ ಮೂಲ ಸಂರಕ್ಷಣೆಯದ ಜಾತ್ಯತೀತೆಯ ವಿರುದ್ಧ ಕಾಯ್ದೆ ಆಗಿದೆ.ಮೂಲ ನಿವಾಸಿಗಳ ಪ್ರಶ್ನೆ ಇವರಲ್ಲಿ ಮುಖ್ಯವಾಗಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಹಾಗೂ ಬುಡಕಟ್ಟು ಜನರ ಅಕ್ಷರದಿಂದ ವಂಚಿತರಾದವರ ಶತ ಶತಮಾನಗಳಿಂದ ಬಡತನ ಶೋಷಣೆಗೆ ಒಳಗಾದವರು ಅವರ ಬಳಿ ಇಲ್ಲಿನವರು ಎಂದು ಹೇಳಿಕೊಳ್ಳುವ ಯಾವ ದಾಖಲೆಗಳು ಇರುವುದಿಲ್ಲ. ಈ ಕಾಯ್ದೆಯ ಮೊದಲ ಬಲಿಪಶುಗಳಾಗುತ್ತಿದ್ದಾರೆ ಈ ಕಾಯ್ದೆಯು ಮುಾಲ ನಿವಾಸಿಗಳ ವಿರುದ್ಧವಾದ ಕಾನೂನಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಕೇಂದ್ರ ಸರಕಾರವು ಎಚ್ಚೆತ್ತುಕೊಂಡು ಜನ ವಿರೋಧಿ ಕಾಯ್ದೆಯಾದ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಎನ್ಆರ್ ಸಿ ಕೈಬಿಡಬೇಕೆಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಮುಫ ಜಿಶಾನ್ ಖಾದ್ರಿ,ಸಜ್ಜಾದ್ ಮತವಾಲೆ ಗುರು,ಶರಣಯ್ಯ ನಾಯಕ್ ಕ್ಕೆ ಗುಡದಿನ್ನಿ, ಚಂದ್ರಶೇಖರ್ ಕುರ್ಡಿ, ರಾಜಾ ವಸಂತ ನಾಯಕ, ಜಿ ನಾಗರಾಜ್, ಲಕ್ಷ್ಮೀನಾರಾಯಣ ಯಾದವ್, ಗಂಗಣ್ಣ ನಾಯಕ್, ಖಾಲಿದ್ ಗುರು,ಮಹಮ್ಮದ್ ಇಸ್ಮೈಲ್,ಖಲೀಲ್ ಖುರೇಷಿ, ಎಂ ಪ್ರವೀಣ್ ಕುಮಾರ್, ಜಯ ಪ್ರಕಾಶ್, ನರಸಿಂಹ ನಾಯಕ್, ಸಂದಾನಿ ನಾಯಕ್,ಇದಾಯತ್ ನಾಯಕ್ ನಜರುದ್ದೀನ್ ಖಾದ್ರಿ,ಕಿರಿಲಿಂಗಪ್ಪ ಕವಿತಾಳ, ಪ್ರವೀಣ್ ಕುಮಾರ್ ಕೋನಾಪುರ ಪೇಟೆ, ರವಿ ಕುಮಾರ ಕೋನಾಪುರಪೇಟೆ ಹಾಗೂ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here