ಲಂಕ್ಷಾಂತರ ಬೆಂಗಳೂರಿಗರಿಂದ CAA,NRC ವಿರುದ್ಧ ಬೃಹತ್ ಪ್ರತಿಭಟಣೆ

0
100

ಇಂದು ಬೆಂಗಳೂರಿನ ಖುದ್ದೂಸ್ ಸಾಬ್ ಈದ್ಗಾ ಮೈದಾನ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಯಿತು.

ಸುಮಾರು 02 ಲಕ್ಷಕ್ಕೂ ಅಧಿಕ ಮುಸ್ಲಿಮರು ಬೆಂಗಳೂರಿನ ವಿವಿಧ ಕಡೆಗಳಿಂದ ಬಂದು NRC, CAA ವಿರುದ್ಧ ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟಿಸಿದರು. ಸುಮಾರು ಮೂವತ್ತೈದು ಮುಸ್ಲಿಮ್ ಸಂಘನೆಗಳು ಜಂಟಿಯಾಗಿ ಪ್ರತಿಭಟಿಸಿದರು. ಈ ಪ್ರತಿಭಟನೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಧರ್ಮಗುರುಗಳು ಮತ್ತು ಕೆಲ ಪ್ರಗತಿಪರ ನಾಯಕರು ಮಾತನಾಡಿ ಕೇಂದ್ರ ತಂದಿರುವ CAA ಮತ್ತು NRC ಅಡಿಯಲ್ಲಿ ಅಧಿಕಾರಿಗಳಿಗೆ ಯಾವುದೇ  ಕಾಗದ ಪತ್ರ ತೊರಿಸುವುದಾಗಲಿ ಕೊಡುವದಾಗಲಿ ಮಾಡಬೇಡಿ ಎಂದು ಕರೆ ನೀಡಿದರು.  ಈಗಾಗಲೆ ಕೇಂದ್ರದ ಬಿಜೆಪಿ ಸರಕಾರದ ನೀತಿಗಳಿಂದ ಬೇಸತ್ತು ತನ್ನ ಉನ್ನತ ಹುದ್ದೆಗೆ ರಾಜೀನಾಮೆ ಕೊಟ್ಟಿರುವ ಶ್ರೀ ಶಶಿಕಾಂತ ಸೇಂಥಿಲ್ ಮತ್ತು ಮಾನವ ಹಕ್ಕು ಹೊರಾಟಗಾರ ಹರ್ಷಮಂದರ್ ಮಾತನಾಡಿದರು. ಪ್ರತಿಭಟನೆಯಲ್ಲಿ ವಿವಿಧ ದಲಿತ ಮುಖಂಡರು ನ್ಯಾಯವಾದಿಗಳು ಮತ್ತು ಲಕ್ಷಾಂತರ ಜನರು ಭಾಗವಹಿಸಿ ಕೇಂದ್ರ ನಡೆ ವಿರುದ್ಧ, ವಿವಾದಾತ್ಮಕ ಕಾನೂನು ವಿರುದ್ಧ ಘೊಷಣೆಗಳು ಕೂಗಿ ಪ್ರತಿಭಟಿಸಿದರು. ಅರ್ಧ ಬೆಂಗಳೂರು ಸ್ತಬ್ದವಾಗಿತ್ತು ಟ್ರಾಫಿಕ್ ಜಾಮ್ ಕಂಡುಬಂತು ಪೊಲಿಸರು ಬೆಳಿಗ್ಗೆಯಿಂದಲೇ ಜಾಗೃತಿವಹಿಸಿ ಬಂದೊಬಸ್ತ್ ಯಶಸ್ವಿಯಾಗಿ ಮಾಡಿದ್ದರು.

LEAVE A REPLY

Please enter your comment!
Please enter your name here