0
450

ಇಸ್ಲಾಮಾಬಾದ್, ಡಿಸೆಂಬರ್ 17: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ಮು ಷರಫ್ ಗೆ ಮಂಗಳವಾರ ಲಾಹೋರ್‌ನ ವಿಶೇಷ ನ್ಯಾಯಾಲಯವು ದೇಶದ್ರೋಹಕ್ಕೆ ಗಲ್ನೆಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ

ಪರ್ವೇಜ್ ಮುಷರಫ್ ಅವರು 1999 ರಿಂದ 2008ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ಅವರ ಮೇಲೆ 2007ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನ ರದ್ದುಪಡಿಸುವ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮತ್ತು ದೇಶದ್ರೋಹ ಎಸಗಿದ ಆರೋಪವಿದೆ.

ಆರೋಪ ಸಾಬೀತಾದ ಹಿನ್ನಲೆಯಲ್ಲಿ ನವೆಂಬರ್ 19ರಂದು ವಿಚಾರಣೆ ಅಂತ್ಯಗೊಂಡು ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಲಾಗಿತ್ತು, ಡಿಸೆಂಬರ್ 17ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ.

2007ರಲ್ಲಿ ಪಾಕಿಸ್ತಾನ ಮೇಲೆ ತುರ್ತು ಪರಿಸ್ಥಿತಿ ಹೇರಿದ ಬಳಿಕ ತಮ್ಮ ಆದೇಶದ ಅನ್ವಯ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮುಹಮದ್ ಚೌಧರಿ ಸೇರಿದಂತೆ 60 ನ್ಯಾಯಾಧೀಶರನ್ನು ಮುಷರ‌್ರಫ್ ವಜಾಗೊಳಿಸಿ ಜೈಲಿಗೆ ಕಳುಹಿಸಿದ್ದರು. ಈ ಬಗ್ಗೆ 2009ರ ಆ.11ರಂದು ಮುಷರ‌್ರಫ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನ್ಯಾಯಾಲಯಕ್ಕೆ ಆಗಮಿಸಿ ವಿವರಣೆ ನೀಡುವಂತೆ ಆದೇಶಿಸಿದ್ದ ನ್ಯಾಯಾಲದ ಸೂಚನೆಯನ್ನು ಮುಷರ‌್ರಫ್ ಲಘುವಾಗಿ ಪರಿಗಣಿಸಿದ್ದರು. ಆದ್ದರಿಂದ ಅವರನ್ನು ಬಂಧಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಸ್ವಯಂ ಗಡಿಪಾರಿಗೆ ಒಳಗಾಗಿ ದುಬೈ, ಲಂಡನ್ ನಲ್ಲಿ ಆಶ್ರಯ ಬಯಸಿದ್ದರು

ದೇಶಕ್ಕಾಗಿ ಯುದ್ಧಗಳನ್ನು ಎದುರಿಸಿದ ನನ್ನ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರೆಸಿರುವುದು ಎಷ್ಟು ಸರಿ” ಎಂದು ಈ ಹಿಂದೆ ಪರ್ವೇಜ್ ಪ್ರಶ್ನಿಸಿದ್ದರು.

ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಲು ಪರ್ವೇಜ್ ಲಾಹೋರ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ದೇಶಭ್ರಷ್ಟ ಎನಿಸಿ ಕೋರ್ಟ್ ವಿಚಾರಣೆಗೆ ಹಾಜರಾಗದ ಕಾರಣ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎಫ್ ಐಎ) ಗೆ ಬಂಧಿಸಿ ಕರೆ ತರುವಂತೆ ಸೂಚಿಸಿತ್ತು. ಮತ್ತೊಂದು ಭ್ರಷ್ಟಾಚಾರ ಪ್ರಕರಣದಲ್ಲಿ 7ವರ್ಷ ಶಿಕ್ಷೆ ಎದುರಿಸಿದ್ದ ಪರ್ವೇಜ್ ಸದ್ಯ ಜಾಮೀನು ಪಡೆದು ಲಂಡನ್ನಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮುಷರಫ್ ಅವರು “ವೈದ್ಯಕೀಯ ಚಿಕಿತ್ಸೆ”ಗಾಗಿ ಮಾರ್ಚ್ 2016 ರಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here