ಡಿಕೆಶಿ ತಾಯಿ ಗೌರಮ್ಮ ಮನೆಯಲ್ಲೇ ವಿಚಾರಣೆ ; ಇಡಿ ಅಧಿಕಾರಿಗಳಿಗೆ ಕೊರ್ಟ್ ಆದೇಶ

0
308

ನವದೆಹಲಿ/ಬೆಂಗಳೂರು ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಸಿಕ್ಕ ಎನ್ನಲಾದ ಅಕ್ರಮ ಹಣ ಪ್ರಕರಣದಲ್ಲಿ ಮನೆಯಲ್ಲಿ ತಾಯಿ ಗೌರಮ್ಮನ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ತಿಳಿಸಿದೆ.

85 ವಯಸ್ಸು ಆಗಿರುವುದರಿಂದ ಮನೆಯಲ್ಲಿಯೇ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಗೌರಮ್ಮ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಇಂದು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಗೌರಮ್ಮ ಮನವಿ ಪುರಸ್ಕರಿಸಿದ ಹೈಕೋರ್ಟ್, ಕನಕಪುರದ ಅವರ ಮನೆಯಲ್ಲಿಯೇ ವಿಚರಣೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ.

ಅಷ್ಟೇ ಅಲ್ಲದೇ ಕನ್ನಡದಲ್ಲಿಯೇ ವಿಚಾರಣೆ ನಡೆಸಬೇಕು. ಜತೆಗೆ ವಿಚಾರಣೆಯ ಆಡಿಯೋ ರೇಕಾರ್ಡ್ ಮಾಡಬೇಕೆಂದು ಇಡಿ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಇನ್ನು ಇಡಿ ಅಧಿಕಾರಿಗಳ ವಿಚಾರಣೆಗೆ ಯಾವುದೇ ಅಡ್ಡಿಪಡಿಸುವಂತಿಲ್ಲ. ಯಾವುದೇ ಪ್ರತಿಭಟನೆ ಮಾಡುವಂತಿಲ್ಲ . ಹೀಗಾಗಿ ಇಡಿ ಅಧಿಕಾರಿಗಳಿಗೆ ಭದ್ರತೆ ನೀಡುವಂತೆ ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿಗೆ ಕೋರ್ಟ್ ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here