ಪೌರತ್ವ ತಿದ್ದುಪಡಿ: ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಧರಣಿ ಮಾಡಿದ ಪ್ರಿಯಾಂಕಾ ಗಾಂಧಿ

0
237

ದೆಹಲಿ (ಡಿ.16): ಜಾಮೀಯಾ ಮಿಲಿಯಾ ಹಾಗೂ ಆಲಿಘಡ್​ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸರ ಹಲ್ಲೆ ಖಂಡಿಸಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಲ್ಲಿನ ಇಂಡಿಯಾ ಗೇಟ್​ ಬಳಿ ಪ್ರತಿಭಟನೆ ನಡೆಸಿದರು.

ವಿವಾದಿತ ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದರು. ಅದನ್ನು ಖಂಡಿಸಿ ಇಂದು ಕೋಲ್ಕತಾ,ಮುಂಬೈ,ಬೆಂಗಳೂರು,ಬನಾರಸ್,ಚೆನ್ನೈ ಮತ್ತು
ಇತರೇ ಹಲವಾರು ನಗರಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ತಮ್ಮ ಪಕ್ಷದ ನಾಯಕರೊಂದಿಗೆ ಎರಡು ಗಂಟೆಗಳ ಪ್ರತಿಭಟನೆಗೆ ಮುಂದಾದ ಪ್ರಿಯಾಂಕ, ಬಿಜೆಪಿಯ ಕೇಂದ್ರ ಸರಕಾರ ಪ್ರಜಾಪ್ರಭುತ್ವವನ್ನ ಪ್ರತಿಪಾದಿಸುವ ಸಂವಿಧಾನ ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ನಾವು ಸಂವಿಧಾನದ ರಕ್ಷಣೆಗಾಗಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ ಎಂದು ಅವರು ತಿಳಿಸಿದರು ಎಂದು ಎಎನ್​ಐ ವರದಿ ಮಾಡಿದೆ.

ನಮ್ಮ ಪ್ರತಿಭಟನೆ ಜಾಮಿಯಾ ವಿಶ್ವವಿದ್ಯಾಲಯ ಮತ್ತು ಇತರ ಸ್ಥಳಗಳ ವಿದ್ಯಾರ್ಥಿಗಳಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವುದಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರು ಬಿಜೆಪಿಯ ಆದೇಶಗಳಿಂದ ಹಿಂಸೆಗಿಳಿದಿದ್ದಾರೆ ಅವರು ಭಾನುವಾರ ತಡರಾತ್ರಿ ವಿಶ್ವ ವಿದ್ಯಾಲಯದ ಒಳಗೆ ನುಗ್ಗಿದ ಕಾರಣ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದೆ ಎಂದು ಪ್ರಿಯಾಂಕ ಗುಡುಗಿದರು.

ಹಿಂಸಾಚಾರದ ಬಗ್ಗೆ ನ್ಯಾಯಾಂಗ ವಿಚಾರಣೆಗೆ ಕರೆ ನೀಡಲಾಗುವುದು ರಾಷ್ಟ್ರಪತಿಗಳಿಗೆ ಭೇಟಿ ಮಾಡಲಾಗುವುದು ಮತ್ತು ಇತರೇ ಸಮಾನ ಮನಸ್ಕ ವೇದಿಕೆಗಳು ಪ್ರಗತಿಪರ ಚಿಂತಕರು ಮತ್ತು ಎಡ ಪಕ್ಷಗಳೊಂದಿಗೆ ಸೇರಿ ಜಂಟಿಯಾಗಿ ಡಿಸೆಂಬರ್‌ 19ರಂದು ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೇಸ್ ಹೇಳಿದೆ .

LEAVE A REPLY

Please enter your comment!
Please enter your name here