ಪೌರತ್ವ ತಿದ್ದುಪಡಿ ಮಸೂದೆ CAB ವಿರುದ್ದ ಸುಪ್ರೀಮ್ ಕೊರ್ಟ್ ಗೆ ಮುಖ ಮಾಡಿದ ಅಸದುದ್ದೀನ್ ಓವೈಸಿ

0
211

ನವದೆಹಲಿ: ದೇಶದ ಪ್ರಜಾ ಪ್ರಭುತ್ವ ಮತ್ತು ಸಮಾನತೇ ಕಾಪಾಡುವ ಸಂವಿಧಾನಕ್ಕೆ ಧಕ್ಕೆ ತರುವ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ದ ವಿವಿಧ ಸಂಘಟನೆಗಳು ವಿವಧ ರಾಜಕೀಯ ಪಕ್ಷಗಳು ಸುಪ್ರೀಮ್ ಕೊರಟ್ ಮೆಟ್ಟಿಲೇರಿವೆ ಅದೇ ರೀತಿ ಇದೀಗ ಸಂಸದ ಎ ಐ ಏಮ್ ಐ ಎಮ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಂಸದ ಅಸಾದುದ್ದೀನ್ ಓವೈಸಿ ಸರ್ವೊಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈ ಕಾಯಿದೆಯು ಸಂವಿಧಾನ ಬಾಹಿರವಾಗಿದ್ದು ಧರ್ಮಾಧರಿತವಾಗಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಿದ್ದಾರೆ. ಈ ಕಾಯಿದೆಯ ಸಂವಿಧಾನ ಮಾನ್ಯತೆಯನ್ನು ಅವರು ಪ್ರಶ್ನಿಸಿದ್ದಾರೆ.
ಲೊಕಸಭೆಯಲ್ಲಿ ಮಸೂದೆ ಮಂಡನೆಯ ಸಂದರ್ಭದಲ್ಲಿ ಓವೈಸಿ ಮಸೂದೆಯ ಪ್ರತಿ ಹರಿದು ಹಾಕಿ ಪ್ರತಿಭಟಿಸಿದ್ದರು.

ಕಾರಣಗಳು: ಈ ಮಸೂದೆ ದೇಶವನ್ನ ವಿಭಜಿಸುವ ಮುಸ್ಲಿಮ್ ವಿರೊಧಿ ನೀತಿ ಅನುಸರಿಸುವ ಸಂವಿಧಾನದ ಮೂಲ ಅಂವಶಗಳಿಗೆ ಧಕ್ಕೆ ತರುವ ಮಸೂದೆಯಾಗಿದೆ ಪ್ರಜಾ ಪ್ರಭತ್ವ ವ್ಯವಸ್ಥೆಯ ಬದಲಾಗಿ ಹಿಂದುತ್ವ ಜಾರಿಗೆತರಲು ಅವಕಾಶ ಕಲ್ಪಿಸುವ ಮಸೂದೆ ಇದಾಗಿದೆ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಪೌರತ್ವ ಮಸೂದೆ ಜಾರಿಯಾಗಿದೆ ಇದು ಖಂಡನೀಯವಾಗಿದೆ

LEAVE A REPLY

Please enter your comment!
Please enter your name here