ಭತ್ತ ಮತ್ತು ಜೊಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಶಾಸಕರಿಂದ ಒತ್ತಾಯ

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ರವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು

0
82

ಭತ್ತ ಮತ್ತು ಜೊಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಶಾಸಕರಿಂದ ಒತ್ತಾಯ
ಮಾನ್ವಿ: ಸರಕಾರ ಕೂಡಲೇ ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ಜೊಳ ಖರೀದಿ ಕೇಂದ್ರಗಳನ್ನು ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ತೆರೆಯುವುದರಿಂದ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು
ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಸುಧ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ರೈತರು ಬೆಳೆದ ಭತ್ತ ಮತ್ತು ಜೋಳ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿಲ್ಲ ಅದರಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹತ್ತಿ ಬೆಳೆಯನ್ನು ಬೆಳೆದಿರುವ ರೈತರು ಮಾರಾಟಮಾಡಲು ರಾಯಚೂರು ಗಂಜ್‌ಗೆ ಸಾಗಿಸಲು ಆಗದೆ ಸ್ಥಳೀಯವಾಗಿ ಮಾರಾಟ ಮಾಡುತ್ತಿರುವುದರಿಂದ ಉತ್ತಮ ಬೆಲೆ ದೊರೆಯುತ್ತಿಲ್ಲ ಖರೀದಿದಾರರು ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಸೂಟ್ ಹೆಸರಿನಲ್ಲಿ ಹತ್ತಿಯನ್ನು ಮುರಿಯುತ್ತಿರುವುದರಿಂದ ತೂಕದ ವೆಚ್ಚ, ಸಾಗಾಣಿಕೆ ವೆಚ್ಚದಿಂದಾಗಿ ಸರಿಯಾದ ಬೆಲೆ ದೊರೆಯುತ್ತಿಲ್ಲ ಆದರಿಂದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹತ್ತಿ ಖರೀದಿ ಪ್ರಾರಂಭಿಸಬೇಕು, ಭತ್ತ ಕಟಾವು ಯಂತ್ರದವರು ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಪಡೆಯುತ್ತಿರುವುದರ ಬಗ್ಗೆ ತಿಳಿದು ಬಂದಿದ್ದು ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಮುಂದಿನ ಐ.ಸಿ.ಸಿ.ಸಭೆಯಲ್ಲಿ ಕೆಳಭಾಗದ ಕಾಲುವೆ ವ್ಯಾಪ್ತಿಯ ಶಾಸಕರು ,ಸಂಸದರು,ರೈತರಿಗೆ ಅಗತ್ಯವಿರುವ ಪ್ರಾಮಾಣದಲ್ಲಿ ನೀರು ಬಿಡುವಂತೆ ಪಕ್ಷಾತೀತವಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು
ಮುಖಂಡರಾದ ನಾಗರಾಜ ಭೋಗವತಿ,ನಾರಾಯಣರಾವ್ ಇದ್ದರು

LEAVE A REPLY

Please enter your comment!
Please enter your name here