ನೀರಮಾನ್ವಿ ಶ್ರೀ ಯಲ್ಲಮ್ಮದೇವಿ ಸಣ್ಣ ಜಾತ್ರೆ ಮಹೋತ್ಸವ ಸರಳ ಅಚರಣೆ ಅನುಮತಿಗೆ ಆಗ್ರಹ

ಜಿಲ್ಲಾಧಿಕಾರಿಗಳು ಕೂಡಲೇ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹ.

0
106

ನೀರಮಾನ್ವಿ ಶ್ರೀ ಯಲ್ಲಮ್ಮದೇವಿ ಸಣ್ಣ ಜಾತ್ರೆ ಮಹೋತ್ಸವ ಸರಳ ಅಚರಣೆಗೆ ಅನುಮತಿಗೆ ಆಗ್ರಹ

ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ನೀರಮಾನ್ವಿ ಗ್ರಾಮದ ಗ್ರಾ.ಪಂ.ಸದಸ್ಯ ನರಸಿಂಹ ಸುಧ್ಧಿಗಾರರೊಂದಿಗೆ ಮಾತನಾಡಿ ತಾಲ್ಲೂಕಿನಲ್ಲಿ ಪ್ರಸಿದ್ದಿ ಪಡೆದಿರುವ ನೀರಮಾನ್ವಿ ಶ್ರೀ ಯಲ್ಲಮ್ಮದೇವಿಯು ಗ್ರಾಮದೇವತೆಯಾಗಿದ್ದು ಪ್ರತಿ ವರ್ಷ ದೀಪಾವಳಿ ಪಾಡ್ಯದ ದಿನ ಸಣ್ಣ ಜಾತ್ರೆ ಮಹೋತ್ಸವ ನಡೆಯುತ್ತಿದ್ದು ಸಾವಿರಾರು ಜನರು ವಿವಿಧ ನಗರ,ಪಟ್ಟಣ ಗಳಿಂದ ಗ್ರಾಮಕ್ಕೆ ಅಗಮಿಸಿ ಶ್ರೀ ಯಲ್ಲಮ್ಮದೇವಿಯ ದರ್ಶನ ಪಡೆದು ಕೊಂಡು ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ ಹಾಗೂ ವಿವಿಧ ಸೇವೆಗಳನ್ನು ಸಲ್ಲಿಸುವುದು ವಾಡಿಕೆಯಾಗಿದ್ದು.

ದೇವಸ್ಥಾನದ ವ್ಯಾಪ್ತಿಯಲ್ಲಿನ ಆವರಣದಲ್ಲಿ ಸಗಟು ತೆಂಗಿನಕಾಯಿ ಮಾರಾಟಗಾರರಿಂದ ಬಡಜನರು ತೆಂಗಿನಕಾಯಿ ಖರೀದಿಸಿ ವ್ಯಾಪಾರ ನಡೆಸುವ ಮೂಲಕ ತಮ್ಮ ಜೀವನ ಕಂಡುಕೊಳ್ಳುತ್ತಾರೆ, ಸರಕಾರಕ್ಕೆ ಆವರಣದಲ್ಲಿನ ಜಾಗ ಹಾಗೂ ತೆಂಗಿನಕಾಯಿ ಹರಾಜು,ಮಂಗಳಾರತಿ ಟಿಕೇಟ್ ಹರಾಜು ಮಾಡುವುದರಿಂದ ಉತ್ತಮ ಆದಾಯ ಬರುತ್ತದೆ ಕೇವಲ 2ದಿನ ಇರುವಾಗ ಕೋವಿಡ್-19 ಹರಡುವ ನೆಪದಿಂದ ಸಣ್ಣ ಜಾತ್ರೆಯನ್ನು ರದ್ದು ಪಡಿಸಿ ಕೇವಲ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ನೀಡುವುದರಿಂದ ಭಕ್ತರ ಭಾವನೆಗಳಿಗೆ ದಕ್ಕೆಯಾಗುವುದರಿಂದ ಜಿಲ್ಲಾಧಿಕಾರಿಗಳು ಕೋವಿಡ್-19 ನಿಯಮ ಪಾಲಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ದೀಪಾವಳಿ ಪಾಡ್ಯದ ದಿನ ಸಣ್ಣ ಜಾತ್ರೆ ಮಹೋತ್ಸವ ಆಚರಿಸುವುದಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದರು

ಗ್ರಾಮದ ಮುಖಂಡರಾದ ವಾರಿಸ್ ಬಾಬು, ಗ್ರಾ.ಪಂ.ಉಪಾಧ್ಯಕ್ಷ ಮಲ್ಲಿಕಾರ್ಜುನ, ಗುಡ್ಡಪ್ಪ ಬಾವಿ. ರವಿ, ಶರಣಬಸವ ,ಗೂಳಪ್ಪ ,ಶಿವರಾಮ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here