ನೀಟ್ ಫಲಿತಾಂಶ : ಲಿಂಗಸುಗೂರು ಸಮ್ ಕಾಲೇಜು ಜಿಲ್ಲೆಗೇ ಪ್ರಥಮ..!

ನೀಟ್‌ನಲ್ಲಿ ೫೦೦ಕ್ಕೂ ಹೆಚ್ಚು ಅಂಕ ಪಡೆದ ಸಮ್ ಕಾಲೇಜು ವಿದ್ಯಾರ್ಥಿಗಳು.

0
123

ಲಿಂಗಸುಗೂರು : ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಡೆದ ನೀಟ್ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು, ಸ್ಥಳೀಯ ಶ್ರೀ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ರಾಯಚೂರು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸಾಧನೆ ಮಾಡಿದ ಕೀರ್ತಿ ಸಮ್ ಕಾಲೇಜು ಪಾಲಾಗಿದೆ ಎಂದು ಕಾಲೇಜು ಆಡಳಿತಾಧಿಕಾರಿ ವಿನಯಕುಮಾರ ಗಣಾಚಾರಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ನೀಟ್-೨೦೨೧ರ ಪರೀಕ್ಷೆಯಲ್ಲಿ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡಿದ್ದು ೫ ವಿದ್ಯಾರ್ಥಿಗಳು ೫೦೦ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ೧೫ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉಚಿತವಾಗಿ ಸರಕಾರಿ ಮೆಡಿಕಲ್ ಕಾಲೇಜಿಗೆ ಪ್ರವೇಶಾತಿ ಪಡೆಯಲಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳೆAದು ಗಣಾಚಾರಿ ಹೇಳಿದರು

ಶಿವರಾಜ ಪಾಟೀಲ್(೫೮೯), ಶರಣಬಸವ(೫೫೯), ಹಬೀಬ್ ಮುಲ್ಲಾ(೫೩೬), ಹೆಚ್. ರಾಮ(೫೧೫), ಶಾಹಿಸ್ತಾ ಪರ್ವೀನ್(೫೦೪) ೫೦೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಉಳಿದಂತೆ ಬಾಲರಾಜ(೪೮೫), ನಿಂಗನಗೌಡ(೪೮೫), ಲಕ್ಷಿö್ಮ ಸಿ.(೪೭೫), ಪೂಜಾ(೪೭೩), ವೆಂಕಟೇಶ(೪೬೩), ನಾಗರಾಜ(೪೬೦), ನಾಗರತ್ನ(೪೫೬), ಶರತ್‌ಕುಮಾರ ಮೇಟಿ(೪೩೭), ದೇವರಾಜ(೪೩೧), ಪ್ರಿಯಾ(೪೨೯), ತರುಣಯಾದವ್(೪೨೫), ಅಮೃತ್ ಸಾಗರ್(೪೧೯), ಸಚಿನ್ ಕೊಪ್ಪಲ್(೪೧೮), ನಾಗಿಣಿ(೪೦೬), ಸಲೀಂಸಾಬ(೪೦೬), ಕಿರಣ್ ಚಂದಪ್ಪ(೪೦೪) ಅಂಕಗಳನ್ನು ಪಡೆದು ಕಾಲೇಜು ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂಧಿ ವರ್ಗದವರು ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here