ದೇಹ ಮತ್ತು ಮನಸ್ಸಿಗೆ ಆರೋಗ್ಯ ನೀಡುವುದೇ ಆಯುರ್ವೇದ ಶಾಸ್ತ್ರ

ನಮ್ಮ ಭಾರತೀಯ ಆಹಾರ ಪದ್ದತಿಯನ್ನು ಬಿಟ್ಟು ಪಾಶ್ಚಾತ್ಯ ಆಹಾರ ಪದ್ದತಿಯನ್ನು ಅನುಸರಿಸುತ್ತಿರುವುದರಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತಿವೆ

0
104

ದೇಹ ಮತ್ತು ಮನಸ್ಸಿಗೆ ಆರೋಗ್ಯ ನೀಡುವುದೆ ಆಯುರ್ವೇದ ಶಾಸ್ತ್ರ

ಮಾನ್ವಿ: ನಮ್ಮ ದೇಹವು ಪಂಚಭೂತಗಳಿಂದ ನಿರ್ಮಾಣವಾಗಿದ್ದು ಪ್ರಾಚೀನ ಋಷಿ ಮುನಿಗಳು ದೇಹ ಮತ್ತು ಮನಸ್ಸಿಗೆ ಆರೋಗ್ಯ ನೀಡುವ ಸಲುವಾಗಿ ನಮಗೆ ಆಯುರ್ವೇದ ಶಾಸ್ತçವನ್ನು ನೀಡಿದ್ದು ಇಂದು ವಿಶ್ವದ ಹೆಚ್ಚು ಜನರು ತಮ್ಮ ಆರೋಗ್ಯಕ್ಕಾಗಿ ಆಯುರ್ವೇದ ಪದ್ದತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕಲ್ಮಠದ ಕಲ್ಮಠ ವಿರೂಪಾಕ್ಷ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು

ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಕೆ.ಪಿ.ಎಸ್.ವಿ.ಎಸ್.ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ವತಿಯಿಂದ ಆಯುರ್ವೇದ ದಿನ ಹಾಗೂ ಧನ್ವಂತರಿ ಜಯಂತಿ ಅಂಗವಾಗಿ ಆಯೋಜಿಸಲಾದ ಆರ್ಯುವೇದ ಆರೋಗ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಚ್ಚು ಹೆಚ್ಚು ಸಸ್ಯಾ ಆಹಾರ ಸೇವಿಸುವುದರಿಂದ ಆರೋಗ್ಯವಂತ ಜೀವನ ನಡೆಸಬಹುದು

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ನಾವು ನಮ್ಮ ಭಾರತೀಯ ಆಹಾರ ಪದ್ದತಿಯನ್ನು ಬಿಟ್ಟು ಪಾಶ್ಚಾತ್ಯ ಆಹಾರ ಪದ್ದತಿಯನ್ನು ಅನುಸರಿಸುತ್ತಿರುವುದರಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತಿವೆ ಆಯುರ್ವೇದ ಶಾಸ್ತçವು ನಮ್ಮ ದಿನ ನಿತ್ಯದ ಆಹಾರ ಪದಾರ್ಥಗಳಲ್ಲಿಯೇ ಕಾಯಿಲೆಗಳನ್ನು ಗುಣ ಪಡಿಸುವ ಔಷಧಿಗಳನ್ನು ತಿಳಿಸಿಕೊಟ್ಟಿದೆ ಎಂದು ತಿಳಿಸಿದರು

ಕಲ್ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಉಚಿತ ಸಾಮಾನ್ಯ ಮತ್ತು ದಂತ ಚಿಕಿತ್ಸೆ ಶಿಭಿರಕ್ಕೆ ಚಾಲನೆ ನೀಡಿದರು ಶಿಬಿರದಲ್ಲಿ ಆರೋಗ್ಯಕರ ಆಹಾರ ಪದ್ದತಿ,ವಿಹಾರದ ಬಗ್ಗೆ,ಗರ್ಭಿಣಿ ಮಹಿಳೆಯರಿಗೆ ಮಾಸಾನು ಮಾಸಿಕ ಆಹಾರ ಪರಿಚರ್ಯ ಸೇರಿದಂತೆ ಪಂಚಕರ್ಮದ ಜ್ಞಾನ, ಹಾಗೂ ಪೌಷ್ಟಿಕ ಆಹಾರ ಕ್ರಮದ ಬಗ್ಗೆ ಕೆ.ಪಿ.ಎಸ್.ವಿ.ಎಸ್.ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ವೈದ್ಯರು ಹಾಗೂ ವೈದ್ಯಾಕೀಯ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ , ಕಾಲೇಜಿನ ಪ್ರಾಚಾರ್ಯ ವೇದಾಮೂರ್ತಿ ಹಿರೇಮಠ,ಆಡಾಳಿತಧಿಕಾರಿ ಉಮಶಂಕರ,ಉಪ ಪ್ರಾಚಾರ್ಯರಾದ ಸುಮಂಗಲ ಹಿರೇಮಠ ಅರೋಗ್ಯ ಶಿಕ್ಷಣಾಧಿಕಾರಿಗಳಾದ ಬಸಯ್ಯ,ಬಾಲಪ್ಪ ನಾಯಕ,ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here