ಜನ ಸೇವಾ ಯುವ ವೇದಿಕೆ (ರಿ ) ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸದೆ ಪುನೀತ್ ರಾಜಕುಮಾರ್ ರವರಿಗೆ ಶ್ರದಾಂಜಲಿ.

ಪುನೀತ್ ರಾಜಕುಮಾರ್ ರವರು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಆಗಲಿರುವುದು ಕನ್ನಡ ನಾಡಿಗೆ ಭರಿಸಲಾಗದ ನಷ್ಟ; ರವಿಕುಮಾರ್

0
73

ಜನ ಸೇವಾ ಯುವ ವೇದಿಕೆ (ರಿ ) ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸದೆ ಪುನೀತ್ ರಾಜಕುಮಾರ್ ರವರಿಗೆ ಶ್ರದಾಂಜಲಿ.

ಮಾನವಿ : ಕನ್ನಡನಾಡಿನ ಸಂಸ್ಕೃತಿಯ ರಾಯಭಾರಿ ಪುನೀತ್ ರಾಜಕುಮಾರ್ ರವರ ಮರಣದ ನಿಮಿತ್ಯವಾಗಿ ಇಂದು ಪಟ್ಟಣದ ಬಸವ ಸರ್ಕಲ್ ನಲ್ಲಿ ಜನ ಸೇವಾ ಯುವ ವೇದಿಕೆ (ರಿ ) ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸದೆ ಪುನೀತ್ ರಾಜಕುಮಾರ್ ರವರಿಗೆ ಶ್ರದಾಂಜಲಿ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಜನ ಸೇವಾ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪಾಟೀಲ್ ವಕೀಲರು ಕನ್ನಡ ಸಂಸ್ಕೃತಿ ಲೋಕದ ರಾಯಭಾರಿ ಕರ್ನಾಟಕ ಸರಕಾರದ ಹಲವಾರು ಇಲಾಖೆಯ ರಾಯಭಾರಿಯಾಗಿ ಅನಾಥ ಆಶ್ರಮಗಳನ್ನು ಸ್ಥಾಪಿಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತಿದ್ದ ಪುನೀತ್ ರಾಜಕುಮಾರ್ ರವರು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಆಗಲಿರುವುದು ಕನ್ನಡ ನಾಡಿಗೆ ಭರಿಸಲಾಗದ ತುಂಬಾ ನಷ್ಟ ಎಂದು ಹೇಳಿದರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜನಸೇವಾ ಯುವ ವೇದಿಕೆಯಿಂದ ಮೌನಚರಣೆ ಮಾಡಲಾಯಿತು,

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ನಾಗಭೂಷಣ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪಾಟೀಲ್ ವಕೀಲರು, ಪದಾಧಿಕಾರಿಗಳಾದ ಗುರುಪಾದ ಸ್ವಾಮಿ, ಎಂ ಜಗದೀಶ್, ವಿರುಪಣ್ಣ ಪಾಟೀಲ್, ಕಿರಣ್ ಪಾಟೀಲ್, ಬಿಷ್ಟಪ್ಪ ಅಬ್ಬಿಗೇರಿ, ಬಸವರಾಜ್ ಪಾಟೀಲ್. ಚನ್ನಬಸವ. ಶರಣ ಬಸವ ನಾಯಕ್, ಉರಕುಂದ ಯಾದವ್, ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here