ಇ-ತ್ಯಾಜ್ಯದಿಂದ ಪರಿಸರಕ್ಕೆ ಹಾನಿ; ಉಪನ್ಯಾಸಕ ಮಂಜುನಾಥ.

ಮಣ್ಣಿನಲ್ಲಿ ಪ್ಲಾಸ್ಟಿಕ್ ಬೆರೆಯಲು ನೂರಾರು ವರ್ಷಗಳೇ ಬೇಕಾಗುತ್ತದೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಟ್ಟು ಹಾಕುವ ಮೂಲಕ, ವಿಲೇವಾರಿ ಮಾಡಬೇಕು

0
85

ಇ-ತ್ಯಾಜ್ಯದಿಂದ ಪರಿಸರಕ್ಕೆ ಹಾನಿ
ಮಾನ್ವಿ: ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಕಂಪ್ಯೂಟರ್ ಸೇರಿದಂತೆ ಮೊಬೈಲ್ ಗಳನ್ನು ಬಳಸುತಿದ್ದು ಅವುಗಳ ತಯಾರಿಕೆಯಲ್ಲಿ ಬಳಸುತ್ತಿರುವ ಎಲೇಕ್ಟಾçನಿಕ್ಸ್ ಬಿಡಿ ಭಾಗಗಳು ಸೇರಿದಂತೆ ಇ-ತ್ಯಾಜ್ಯ ಕೂಡ ಪರಿಸರಕ್ಕೆ ಅತ್ಯಂತ ಹಾನಿಯನ್ನುಂಟುಮಾಡುತ್ತವೆ ಎಂದು ಉಪನ್ಯಾಸಕ ಮಂಜುನಾಥ ತಿಳಿಸಿದರು

ಪಟ್ಟಣದ ಹೈ-ಟೆಕ್ ಕಂಪ್ಯೂಟರ್ ಇನ್ಫೋಸಿಟಿ ತರಬೇತಿ ಕೇಂದ್ರದಲ್ಲಿ ಭಾರತ ಸ್ವಾತಂತ್ರ‍್ಯತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ರಾಯಚೂರು ಸಂಯುಕ್ತಾಶ್ರಯದಲ್ಲಿ ನಡೆದ ಇ-ತ್ಯಾಜ್ಯದ ಸರಿಯಾದ ನಿರ್ವಹಣೆ ಕುರಿತು ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದುರಸ್ತಿಯಾಗದ ಬಿಡಿ ಭಾಗಗಳನ್ನು ಮಣ್ಣಿಗೆ ಸೇರಿಸದೆ ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಅಗತ್ಯವಿದೆ ಎಂದು ತಿಳಿಸಿದರು

ಒಂದೇ ಸಲ ಉಪಯೋಗಿಸುವ ಪ್ಲಾಸ್ಟಿಕ್ ತ್ಯಾಜ್ಯಗಳ ಕುರಿತು ಡಾ. ಮಹಿಬೂಬ್ ಮದ್ಲಾಪುರ ಮಾತನಾಡಿ ಮಣ್ಣಿನಲ್ಲಿ ಪ್ಲಾಸ್ಟಿಕ್ ಬೆರೆಯಲು ನೂರಾರು ವರ್ಷಗಳೇ ಬೇಕಾಗುತ್ತದೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಟ್ಟು ಹಾಕುವ ಮೂಲಕ, ವಿಲೇವಾರಿ ಮಾಡಬೇಕು ಹಾಗೂ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಮಣ್ಣಿನಲ್ಲಿ ಬೇಗನೆ ಕೊಳೆಯುವ ಸಾವಯವ ವಸ್ತುಗಳಿಂದ ತಯಾರಿಸಿದ ವಸ್ತುಗಳನ್ನು ಬಳಸಬೇಕು ಎಂದು ತಿಳಿಸಿದರು

ಕೌಶಲ್ಯ ಕರ್ನಾಟಕ ಸಂಸ್ಥೆಯ ಉಪನ್ಯಾಸಕರಾದ, ಚನ್ನಬಸವ, ರುದ್ರಗೌಡ ಇದ್ದರು

LEAVE A REPLY

Please enter your comment!
Please enter your name here