ಮಾನವಿ ಮುಸ್ಲಿಂ ಯುವಕರ ವತಿಯಿಂದ ಆಕ್ಟೊಬರ್ 21 ರಂದು ರಕ್ತದಾನ ಶಿಬಿರ; ಆಖಿಲ್ ಜೀಶಾನ್

ಪ್ರವಾದಿ ಮೂಹಮ್ಮದರು ತಮ್ಮ ಜೀವನದ ಮುಖಾಂತರ ಏಕತೆ ಮತ್ತು ಸಮಾನತೆಯನ್ನು ಸಾಧಿಸಿದರು.

0
276

ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಯುವಕರ ವತಿಯಿಂದ ಆಕ್ಟೊಬರ್ 21 ರಂದು ರಕ್ತದಾನ ಶಿಬಿರ ;

ಇಸ್ಲಾಮ್ ಧರ್ಮದ ಪರಮೋಚ್ಚ ಧರ್ಮಗುರುಗಳಾದ ಪ್ರವಾದಿ ಮುಹಮ್ಮದರ(ಸ) ಜನ್ಮ ದಿನದ ಅಂಗವಾಗಿ ಮುಸ್ಲಿಂ ಯುವಕರಿಂದ ನಗರದ ಆರೋಗ್ಯ ಅಸ್ಪತ್ರೆಯಲ್ಲಿ ಆಕ್ಟೊಬರ್ 21 ರಂದು ಬೆಳಿಗ್ಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳ ಲಾಗುತ್ತಿದೆ ಎಂದು ಯುವ ಮುಖಂಡ ಹಾಗೂ ಎಸ್.ಐ.ಓ ರಾಜ್ಯ ಸಮಿತಿ ಸದಸ್ಯ ಜಿಶಾನ್ ಆಖಿಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಾನವಿ ಮುಸ್ಲಿಂ ಯುವಕರ ವತಿಯಿಂದ ಆಕ್ಟೊಬರ್ 21 ರಂದು ರಕ್ತದಾನ ಶಿಬಿರ; ಆಖಿಲ್ ಜೀಶಾನ್

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರವಾದಿ ಮೂಹಮ್ಮದರು ತಮ್ಮ ಜೀವನದ ಮುಖಾಂತರ ಏಕತೆ ಮತ್ತು ಸಮಾನತೆಯನ್ನು ಸಾಧಿಸಿದರು. ನಿಮ್ಮ ಪೈಕಿ ಮಾನವ ಕುಲಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿರುವವನು ಅತ್ಯುತ್ತಮನಾಗಿದ್ದಾನೆ ಎಂಬ ಪ್ರವಾದಿ ಬೋಧನೆಗೆ ಅನ್ವಯವಾಗಿ ನಾವು ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಮತ್ತು ಇದು ಕೇವಲ ಸಾಂಕೇತಿಕ ಮಾತ್ರವಲ್ಲ ಹೊರತಾಗಿ ಸಮುದಾಯದಲ್ಲಿ ರಕ್ತದಾನ ಮನೋಭಾವವನ್ನು ಸೃಷ್ಟಿಸಲಿಕ್ಕೂ ಕೂಡ ಈ ಶಿಬಿರ ಸಹಾಯಕಾರಿವಾಗಲಿದೆ ಎಂದು ಹೇಳಿದರು.

ಇನ್ನೊಬ್ಬ ಮುಖಂಡ ಮುಹಮ್ಮದ್ ಬೇಗ್ ಮಾತನಾಡಿ ಪ್ರವಾದಿಯವರ ಜೀವನ ನಮಗೆ ತ್ಯಾಗವನ್ನು ಕಲಿಸಿಕೊಡುತ್ತದೆ ಆದ್ದರಿಂದ ಪ್ರೇರಿತರಾಗಿ ನಾವು ರಕ್ತದಾನ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ರಕ್ತದಾನ ಶಿಬಿರದಲ್ಲಿ 60 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಲಿದ್ದಾರೆ. ಸಿಂಧನೂರಿನ ಬಾದರ್ಲಿ ಬ್ಲಡ್ ಬ್ಯಾಂಕ್ ಮತ್ತು ನಗರದ ಆರೋಗ್ಯ ಅಸ್ಪತ್ರೆಯವರ ಸಹಕಾರದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಪತ್ರಿಕಾ ಘೋಷ್ಟ್ರಿಯಲ್ಲಿ ಜಮಾ ಮಿರ್ಜಾ, ಸಲ್ಮಾನ್ ಫಾರ್ಸಿ, ಮುಸ್ತಾಕ್ ಖಾದ್ರಿ, ಸುಹೆಲ್ ಖುರೇಶಿ, ಶೋಎಬ್ ಖುರೇಶಿ, ರಿಜ್ವಾನ್ ನೈಕ್, ಫರಾಜ್ ಬೇಗ್, ಸೈಯ್ಯದ್ ಮುಸಾಯಿಬ್, ಜಿಯಾರುಲ್ ಇಸ್ಲಾಮ್ ಸೇರಿದಂತೆ ಇನ್ನು ಹಲವಾರು ಯುವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here