25ರಿಂದ 1 ರಿಂದ 5 ನೇ ತರಗತಿಯ ಭೌತಿಕ ತರಗತಿ ಆರಂಭ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಪ್ರಾಥಮಿಕ ಶಾಲೆ ಆರಂಭಿಸಿದ ಮಾದರಿಯಲ್ಲಿಯೇ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ

0
132

ಬೆಂಗಳೂರು, ಅ.18- ರಾಜ್ಯದಲ್ಲಿ ಈ ತಿಂಗಳ 25ರಿಂದ 1 ರಿಂದ 5 ನೇ ತರಗತಿಯ ಭೌತಿಕ ತರಗತಿ ಆರಂಭಕ್ಕೆ ತಜ್ಞರ ಸಮಿತಿ ಹಸಿರು ನಿಶಾನೆ ತೋರಿದೆ. ಇನ್ನೆರಡು ದಿನದಲ್ಲಿ ಸಂಬಂಧ ಹೊಸ ಮಾರ್ಗಸೂಚಿ ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

25ರಿಂದ 1 ರಿಂದ 5 ನೇ ತರಗತಿಯ ಭೌತಿಕ ತರಗತಿ ಆರಂಭ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೊಂಕು ಸಂಖ್ಯೆ ಇಳಿಕೆಯಾಗಿದೆ.ಹಲವು ತಾಲ್ಲೂಕುಗಳಲ್ಲಿ ಶೂನ್ಯ ಪ್ರಕರಣ ದಾಖಲಾಗುತ್ತಿವೆ. ಈ ಹಿ್ಙನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಶಿಪಾರಸ್ಸು ಮೇರೆಗೆ ಅಕ್ಟೋಬರ್ 25 ರಿಂದ 1 ರಿಂದ 5 ನೇ ತರಗತಿ ಆರಂಭ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆಗಳಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಶಾಲಾ ಶಿಕ್ಷಕಕರು ಕಡ್ಡಾಯವಾಗಿ ಪೇಸ್ ಮಾಸ್ಕ್ ಧರಿಸಿಬೇಕು.ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುವ ಷರತ್ತು ಹಾಕಲಾಗಿದೆ ಎಂದರು.

ಪ್ರಾಥಮಿಕ ಶಾಲೆ ಆರಂಭ ಹಿ್ಙನ್ನೆಲೆಯಲ್ಲಿ ಮೊದಲ ವಾರ ಅರ್ದ ದಿನ ಮಾತ್ರ ನಡೆಯಲಿದೆ. ನವಂಬರ್ 1 ರಂದು ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಾಥಮಿಕ ಶಾಲೆ ಆರಂಭಿಸಿದ ಮಾದರಿಯಲ್ಲಿಯೇ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಬಾಗಿಲು ಹಾಕಿದ್ದ ಪ್ರಾಥಮಿಕ ಶಾಲೆಗಳು ಸರಿ ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚೂ ಸಮಯದ ಬಳಿಕ ಅಂತೂ ಇಂತೂ ಪುನರಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ.

  • ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಮುಹೂರ್ತ ನಿಗದಿ
  • ಈ ತಿಂಗಳ 25ರಿಂದ ಶಾಲೆ ಆರಂಭ
  • 1 ರಿಂದ 5 ನೇ ತರಗತಿ ಆರಂಭಕ್ಕೆ ತಜ್ಞರ ಸಮ್ಮತಿ
  • ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರಕಟಣೆ
  • ಮೊದಲ ವಾರ ಅರ್ಧ ದಿನಗಳು ಮಾತ್ರ ಶಾಲೆ ನಡೆಸಲು ಸಮ್ಮತಿ
  • ನವಂಬರ್ ಒಂದರಿಂದ ಪೂರ್ಣಪ್ರಮಾಣದಲ್ಲಿ ಶಾಲೆಗಳು ಆರಂಭ
  • ನವಂಬರ್ ಒಂದರಿಂದ ಮದ್ಯಾಹ್ನದ ಬಿಸಿಯೂಟ ಆರಂಭ
  • ಪ್ರಾಥಮಿಕ ಶಾಲೆ ಆರಂಭದ ಮಾದರಿಯಲ್ಲಿ ಎಲ್ ಕೆಜಿ ಯುಕೆಜಿ ತರಗತಿ ಆರಂಭಕ್ಕೆ ಚಿಂತನೆ
  • ಇನ್ನು ಎರಡು ದಿನಗಳಲ್ಲಿ ಹೊಸ ಮಾರ್ಗ ಸೂಚಿ ಪ್ರಕಟ
  • ಶಾಲೆಗಳಲ್ಲಿ ಶೇ. 50 ರಷ್ಟು ವಿದ್ಯಾರ್ಥಿಗಳ ಹಾಜರಾತಿಗೆ ಅವಕಾಶ
  • ಶಾಲೆಗೆ ಬರುವ ವಿದ್ಯಾರ್ಥಿಗಳ ಪೋಷಕರ ಅನುಮತಿ ಕಡ್ಡಾಯ

LEAVE A REPLY

Please enter your comment!
Please enter your name here