ವಕೀಲರ ಸಂಘದ ಅದ್ಯಕ್ಷರಿಗೆ ಗೌರವ ಸನ್ಮಾನ

ನ್ಯಾಯವಾದಿ ಆಶಿಕ್ ಅಹಮದ್ ಬಡವರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಶ್ರಮಿಸುವ ವ್ಯಕ್ತಿ ಯಾರಿದ್ದಾರೆ; ಹಾಜೀಬಾಬು.

0
23

ಎಸ್‌ಆರ್‌ಕೆ ಕರೊಕೆ : ವಕೀಲರ ಸಂಘದ ಅದ್ಯಕ್ಷರಿಗೆ ಗೌರವ ಸನ್ಮಾನ

ಲಿಂಗಸುಗೂರು : ಹಿರಿಯ ನ್ಯಾಯವಾದಿ ಆಶಿಕ್‌ಅಹ್ಮದ್ ಗುರುಗುಂಟಾ ಇವರು ಇತ್ತೀಚೆಗೆ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಂಘಕ್ಕೆ ಆಯ್ಕೆಯಾಗಿ ಅದ್ಯಕ್ಷರಾಗಿದ್ದು, ಇವರಿಗೆ ಸ್ಥಳೀಯ ಎಸ್‌ಆರ್‌ಕೆ ಸರಗಮ್ ಕರೋಕೆಯಲ್ಲಿ ಗಾಯಕರು ಸೇರಿ ಗೌರವ ಸನ್ಮಾನ ಮಾಡಿದರು.

ಜಾತ್ಯಾತೀತ ಮನೋಭಾವನೆಯನ್ನು ಮೈಗೂಡಿಸಿಕೊಂಡಿರುವ ಆಶಿಕ್‌ಅಹ್ಮದ್ ಅವರು ತಮ್ಮಲ್ಲಿಗೆ ನ್ಯಾಯಕ್ಕಾಗಿ ಸಹಾಯ ಕೋರಿ ಬರುವ ಅಸಹಾಯಕರಿಗೆ ತಮ್ಮದೇ ಆದ ವಿಶೇಷ ಧಾಟಿಯಲ್ಲಿ ಅವರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗುತ್ತಾರೆ. ದಶಕಗಳ ಸೇವೆಗೆ ದಕ್ಕಿದ ಗೌರವ ಇದಾಗಿದ್ದು, ಅದ್ಯಕ್ಷರಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯದೇವತೆಯ ಆಶೀರ್ವಾದದಿಂದ ಬಡವರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಶ್ರಮಿಸುವ ಇವರ ಕಾರ್ಯ ಸಾಂಗವಾಗಿ ಮುನ್ನಡೆಯಲಿ ಎಂದು ಸಮಾಜಸೇವಕ ಮಹ್ಮದ್ ಹಾಜಿಹಾಬು ಕರಡಕಲ್ ಮಾತನಾಡಿದರು.

ಹಿರಿಯ ನ್ಯಾಯವಾದಿ ಹಾಗೂ ಗಾಯಕರಾದ ಗುರುರಾಜ ಮುತಾಲಿಕ್, ಗಾಯಕ ಹಾಗೂ ಕರೋಕೆ ಮಾಲೀಕರಾದ ಮಹ್ಮದ್ ರಫಿ ಹಟ್ಟಿ, ಗಾಯಕರಾದ ಜಾಫರ್, ಅಬ್ದುಲ್, ಮುನವರುದ್ದೀನ್ ಖಾಜಿ, ಮಹ್ಮದ್ ಖಲೀಲ್ ಅಹ್ಮದ್ ಹಟ್ಟಿ, ಸುಧೀರ್ ಶ್ರೀವಾಸ್ತವ್, ಗುರುರಾಜ ಜನಾದ್ರಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

 

LEAVE A REPLY

Please enter your comment!
Please enter your name here