“ಪ್ರವಾದಿ ಮೊಹಮ್ಮದ್(ಸ) ಅತ್ಯುತ್ತಮ ಮಾದರಿ” ಸೀರತ್ ಅಭಿಯಾನ ; ಸಬ್ಜಲಿ ಮಾಸ್ಟರ್

ಪ್ರವಾದಿ ಜೀವನ ಸಂದೇಶವನ್ನು ಪರಸ್ಪರರು ಅರಿಯುವುದು ಸೌಹಾರ್ದತೆಯನ್ನು ಬಲಪಡಿಸುವುದು ಅಭಿಯಾನದ ಉದ್ದೇಶ.

0
52

ಪ್ರವಾದಿ ಮೊಹಮ್ಮದ್ ಅತ್ಯುತ್ತಮ ಮಾದರಿ ಸೀರತ್ ಅಭಿಯಾನ.

“ಪ್ರವಾದಿ ಮೊಹಮ್ಮದ್(ಸ) ಅತ್ಯುತ್ತಮ ಮಾದರಿ” ಸೀರತ್ ಅಭಿಯಾನ ; ಸಬ್ಜಲಿ ಮಾಸ್ಟರ್

ಮಾನವಿ: ಪ್ರವಾದಿ ಮಹಮ್ಮದ್ ಅಲೈಹಿಸಲಾಾಾಾಮಮ್ ಅವರ ಜನ್ಮದಿನದ ಅಂಗವಾಗಿ ಪ್ರವಾದಿ ಚರಿತ್ರೆಯ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲು ಜಮಾತ್ ಇಸ್ಲಾಮಿ ಹಿಂದ್ ರಾಜ್ಯವ್ಯಾಪಿ ಸೀರತ್ ಅಭಿಯಾನ ಹಮ್ಮಿಕೊಂಡಿದೆ ಎಂದು  jamaat-e-islami ಹಿಂದ್ ಮುಖಂಡ  ಸಬ್ಜಲಿ ಸತ್ತಾರ್ ಹೇಳಿದರು.

ಅವರು ಇಂದು ನಗರದ ಖುಬಾ ಮಸೀದಿ ಹತ್ತಿರ ಇರುವ ಜಮಾತ್ ಇಸ್ಲಾಂ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಅಭಿಯಾನದ ಪ್ರಯುಕ್ತ ಜಮಾತೆ ಇಸ್ಲಾಮಿನ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರವಾದಿಯ ಸಂದೇಶದ ಕರಪತ್ರಗಳನ್ನು ಪುಸ್ತಕಗಳನ್ನು ಪ್ರವಾದಿ ಚರಿತ್ರೆಯ ಕಿರು ಗ್ರಂಥಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗುವುದು ಇದೇ ರೀತಿ ನಗರ ಮತ್ತು ಗ್ರಾಮೀಣ ದಲ್ಲಿ ವಿವಿಧ ಧರ್ಮಗಳ ಅನುಯಾಯಿಗಳನ್ನು ಪ್ರವಾದಿ ಮಹಮ್ಮದ್ ಅಲೈಸಲಂ ಅವರ ಜೀವನ ಅರಿಯಲು ಅವಕಾಶ ಮಾಡಿಕೊಡಲಾಗುವುದು ಮತ್ತು ಮುಸ್ಲಿಮೇತರ ಅಪೇಕ್ಷೆಯ ಮೇರೆಗೆ ಅವರ ಮನೆಗಳಲ್ಲಿ ಪ್ರವಾದಿ ಜೀವನ ಚರಿತ್ರೆಯ ಸಂದೇಶ ಸಾರುವ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲಾಗುವುದು

ಪ್ರವಾದಿ ಜೀವನ ಸಂದೇಶವನ್ನು ಪರಸ್ಪರರು ಅರಿಯುವುದು ಸೌಹಾರ್ದತೆಯನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು

ಈ ಅಭಿಯಾನದ ಸಂದರ್ಭದಲ್ಲಿ ಪೈಗಂಬರರ ಸಂದೇಶ ಪ್ರಬಂಧ ಸ್ಪರ್ಧೆ, ವಿಚಾರಗೋಷ್ಠಿ, ಸುಚಿತ್ವ ಕಾರ್ಯಕ್ರಮ, ಆಸ್ಪತ್ರೆಗೆ ಭೇಟಿ, ರೋಗಿಗಳ ಉಪಚಾರ  ಮತ್ತು ಗಿಡ ನೆಡುವ ಕಾರ್ಯಕ್ರಮ ಮತ್ತು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

ಈ ಸಂದರ್ಭದಲ್ಲಿ jamaat-e-islami ಹಿಂದಿನ ಮಾನ್ವಿ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ಖಾನ್ ಸೈಯದ್ ಅಕ್ಬರ್ ಪಾಷಾ ಗುಲಾಮ್ ರಸೂಲ್ ಬಾಬಾ ಹುಸೇನ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here