ಶಾಸಕರ “ಮೈ ಬಾದಶಾ ಹೂ” ಹೇಳಿಕೆಗೆ ಖಂಡನೆ; ಫರೀದ್ ಉಮರಿ

ಶಾಸಕರಾಗಿ ಆಯ್ಕೆಯಾಗಿ 9 ವರ್ಷ ಕಳೆದರು ನಗರದ ಚರಂಡಿ ವ್ಯವಸ್ಥೆ,ರಸ್ತೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಕುಂಠಿತವಾಗಿವೆ

0
33

ರಾಯಚೂರು: ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಜನ ಸೇವೆ ಮಾಡುವುದನ್ನು ಬಿಟ್ಟು ಮೈ ರಾಯಚೂರು ಕಾ ಬದಶಾಹ ಎಂದು ಹೇಳುತ್ತಿದ್ದಾರೆ ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಜಿಲ್ಲಾ ಅಧ್ಯಕ್ಷ ಫರೀದ್ ಉಮರಿ ಹೇಳಿದರು.

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಶಾಸಕರು ರಾಯಚೂರು ಕಾ ಬಾದಶಹ ಅಗಲು ಅವರೇ ಆಯ್ಕೆಯಾಗಿಲ್ಲ ಜನರು ಆಯ್ಕೆ ಮಾಡಿದ್ದಾರೆ ಇವರು ಶಾಸಕರಾಗಿ ಆಯ್ಕೆಯಾಗಿ 9 ವರ್ಷ ಕಳೆದರು ನಗರದ ಚರಂಡಿ ವ್ಯವಸ್ಥೆ,ರಸ್ತೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಕುಂಠಿತವಾಗಿವೆ ಇದನ್ನು ಮಾಡೋದು ಬಿಟ್ಟು ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿರುವುದು ಖಂಡನೀಯ .

09 ವರ್ಷಗಳ ನಂತರ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುವ ಸಂದರ್ಭದಲ್ಲಿ ಸ್ಲಮ್ಮು ಬಡಾವಣೆಯ ಮಹಿಳೆಯರು ತಮ್ಮ ಅಹವಾಲುಗಳನ್ನು ಹೇಳಿಕೊಂಡ ಸಂದರ್ಭದಲ್ಲಿ ಮೈ ರಾಯಚೂರು ಕಾ ಬಾದ್ಷಾ ಹೂ (ನಾನು ರಾಯಚೂರಿನ ರಾಜ ನಾಗಿದ್ದೇನೆ) ಏನು ಮಾಡಬೇಕು ಅನ್ನೋದು ನನಗೆ ಗೊತ್ತಿದೆ ಎಂದು ಉತ್ತರ ಕೊಡುತ್ತಾರೆ ಮಾನ್ಯ ಶಾಸಕರು ಇಂತಹ ಹೇಳಿಕೆ ಕೊಟ್ಟಿರುವುದು ಅಹಂಕಾರದ ಪರ್ವ ಎಂದೇ ನಾವು ನಂಬಿದ್ದೇವೆ ಇದು ಸಂವಿಧಾನ ವಿರೋಧಿ ಹೇಳಿಕೆ ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವಂತಹ ಸಂವಿಧಾನದ ಅಡಿಯಲ್ಲಿ ಸಾರ್ವಜನಿಕರ ಮತಗಳನ್ನು ಪಡೆದು ಆಯ್ಕೆ ಯಾಗುವ ಶಾಸಕರು,ಸಂಸದರು, ಜನಪ್ರತಿನಿಧಿಗಳು ಜನಸಾಮಾನ್ಯರ ಸೇವಕರೇ ಹೊರತು ಅವರ ಮೇಲೆ ಆಳ್ವಿಕೆ ಮಾಡುವ ರಾಜ ಮತ್ತು ಬಾದ್ಷಾಹ್ ಅಲ್ಲ ಮಾನ್ಯ ಶಾಸಕರ ಹೇಳಿಕೆಯನ್ನ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ ರಾಯಚೂರು ನಗರ ಮತ್ತು ಜಿಲ್ಲೆ ಬಹಳಷ್ಟು ಅಭಿವೃದ್ಧಿ ಆಗುವ ಅಗತ್ಯವಿದೆ ನಗರ ಮತ್ತು ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಬದಲಾಗಿ ನಾನು ಬಾದ್ಷಾ ಅಂತ ಹೇಳಿ ಮೆರೆಯುವಂತಹ ಶಾಸಕರ ನಡೆ ಖಂಡನಿಯ ಈಗಾಗಲೇ ರಾಯಚೂರು ಜಿಲ್ಲೆಗೆ ಆಯಿತು ಕೈತಪ್ಪಿ ಹೋಗಿದೆ ಈಗ ಏಮ್ಸ್ ತಪ್ಪಬಾರದು ರಾಯಚೂರು ಜಿಲ್ಲೆಯಲ್ಲೇ ಏಮ್ಸ್ ಅನ್ನು ಸ್ಥಾಪನೆ ಮಾಡುವ ಕುರಿತು ಎಲ್ಲಾ ಜನಪ್ರತಿನಿಧಿಗಳು ಹೋರಾಟ ಮಾಡುವ ಅಗತ್ಯವಿದೆಅಗತ್ಯವಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here