ಯೋಗಿ ಸರಕಾರ ಸಂಪೂರ್ಣ ವಿಫಲವಾಗಿದೆ; ಅಖಿಲೇಶ್ ಯಾದವ್.

ರಸಗೊಬ್ಬರ ಕಳವು ಹಾಗೂ  ಕೀಟನಾಶಕಗಳ ಬೆಲೆ ಏರಿಕೆಯ ಹಿಂದೆ ಸರಕಾರವಿದೆ.

0
81

ಲಕ್ನೊ: ಲಖಿಂಪುರ ಹತ್ಯಾಕಾಂಡದ ಕುರಿತು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ  ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಅಖಿಲೇಶ್ ಯಾದವ್ ‘ಬಿಜೆಪಿ ಸರಕಾರ ಬಡ ಜನ ಮತ್ತು ರೈತರ ವಿರೋಧಿ ಸರಕಾರ’ ಎಂದು ಆರೋಪಿಸಿದರು ಹಾಗೂ  ರಾಜ್ಯದಲ್ಲಿ ಶೀಘ್ರದಲ್ಲೇ ಬಿಜೆಪಿ ಸರಕಾರ ತೊಲಗಲಿದೆ ಎಂದು ಪ್ರತಿಪಾದಿಸಿದರು.

“ಬಿಜೆಪಿ ಕಾರ್ಯಕರ್ತರು ರೈತರನ್ನು ತಮ್ಮ ವಾಹನಗಳಡಿ  ತುಳಿದು ಕೊಂದರೂ ಸಹ ಸುಮ್ಮನೆ ಕುಳಿತು ತಮಾಷೆ ನೊಡುತ್ತಿದೆ. ಈ ಸರಕಾರ ರೈತ ವಿರೋಧಿ, ರಸಗೊಬ್ಬರ ಕಳವು ಹಾಗೂ  ಕೀಟನಾಶಕಗಳ ಬೆಲೆ ಏರಿಕೆಯ ಹಿಂದೆ ಸರಕಾರವಿದೆ

ಡೊಂಗೀ ಬಾಬಾ ನನ್ನು ಶೀಘ್ರವೇ ತೆಗೆದುಹಾಕಲಾಗುವುದು” ಎಂದು 2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ  ರಥ ಯಾತ್ರೆಯಲ್ಲಿ ಮಾತನಾಡುತ್ತಾ ಯಾದವ್ ಆರೋಪಿಸಿದರು.

ಈ ಸರಕಾರ ಸಾರ್ವಜನಿಕರಿಗೆ ಮೋಸ ಮಾಡಿದೆ. ಈ ಸರಕಾರದ ಅಡಿಯಲ್ಲಿ ಹಣದುಬ್ಬರ ಹೆಚ್ಚಾಗಿದೆ, ನಿರುದ್ಯೋಗ ಹೆಚ್ಚಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ, ಅಪರಾಧ ಹೆಚ್ಚಾಗಿದೆ, ಕಾನೂನು ಸುವ್ಯವಸ್ಥೆ ಕುಸಿದಿದೆ ಒಟ್ಟಾರೆಯಾಗಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

LEAVE A REPLY

Please enter your comment!
Please enter your name here