300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕೋಟಿಗೊಬ್ಬ-3 ಅಬ್ಬರ

ನಿನ್ನೆ ಪ್ರದರ್ಶನ ರದ್ದಾದ ಹಿನ್ನೆಲೆ ನಿರಾಸೆಯಿಂದ ತೆರಳಿದ್ದ ಅಭಿಮಾನಿಗಳು, ಇಂದು ಕೋಟಿಗೊಬ್ಬ-3 ವೀಕ್ಷಣೆಗೆ ಕಾತುರದಿಂದ ಕಾದು ಕುಳಿತಿದ್ದರು.

0
69

ಬೆಂಗಳೂರು: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ ಶುರುವಾಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಚಿತ್ರ ನಿನ್ನೆ ರಿಲೀಸ್ ಆಗಬೇಕಿತ್ತು. ಆದರೆ ವಿತರಕರ ತೊಂದರೆಯಿಂದಾಗಿ ಕಿಚ್ಚನ ಸಿನಿಮಾ ಇಂದು ತೆರೆಗೆ ಬಂದಿದೆ. ಇಂದು 7 ಗಂಟೆಗೆ ಶೋ ಶುರುವಾಗಿದೆ.

ದಾವಣಗೆರೆ ಮತ್ತು ಚಿತ್ರದುರ್ಗದ ಚಿತ್ರಮಂದಿರಗಳಿಗೆ ಸುದೀಪ್ ಅಭಿಮಾನಿಗಳು ಮುಂಜಾನೆ 3 ಗಂಟೆಗೆ ತೆರಳಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಶೋ ಹಿನ್ನೆಲೆ ಥಿಯೇಟರ್ ಗೆ ಬಂದು ಕಾದು ಕುಳಿತಿದ್ದರು. ಚಿತ್ರಮಂದಿರಗಳ ಗೇಟ್ ಬಳಿ ಅಭಿಮಾನಿಗಳು ಕುಂಬಳಕಾಯಿ ಹೊಡೆದು ಸಂಭ್ರಮಿಸಿದರು.

ನಿನ್ನೆ ಪ್ರದರ್ಶನ ರದ್ದಾದ ಹಿನ್ನೆಲೆ ನಿರಾಸೆಯಿಂದ ತೆರಳಿದ್ದ ಅಭಿಮಾನಿಗಳು, ಇಂದು ಕೋಟಿಗೊಬ್ಬ-3 ವೀಕ್ಷಣೆಗೆ ಕಾತುರದಿಂದ ಕಾದು ಕುಳಿತಿದ್ದರು.

 

LEAVE A REPLY

Please enter your comment!
Please enter your name here