*ನಾಯಿ ಮರಿಗಳಿಗೆ ಹಾಲುಣಿಸುವ ಮಾತೃ ಹೃದಯಿ ಗೋವು..!*

ತಾಯ್ತನ ಎನ್ನುವುದು ಯಾವುದೇ ಆಮಿಷವಿಲ್ಲದ, ನಿಸ್ವಾರ್ಥ ಸಂಬಂಧ ಎನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ

0
18
Lingsure

*ನಾಯಿ ಮರಿಗಳಿಗೆ ಹಾಲುಣಿಸುವ ಮಾತೃ ಹೃದಯಿ ಗೋವು..!* 

ಲಿಂಗಸುಗೂರು : ಮತ್ತೊಬ್ಬರ ಮಕ್ಕಳನ್ನು ಕಂಡರೆ ಆಗದ ಮನುಷ್ಯ ಜೀವಿ ಒಂದೆಡೆಯಾದರೆ, ತನಗೆ ಸಂಬಂಧವೇ ಇಲ್ಲದ ಬೇರೊಂದು ಪ್ರಾಣಿಯ ಮರಿಗಳಿಗೆ ಹಾಲುಣಿಸುವ ಮೂಲಕ ಮಾತೃ ಹೃದಯಿ ಎನಿಸಿಕೊಂಡ ಗೋವಿನ ಕಥೆ ಇದು. ವಿಚಿತ್ರವಾದರೂ ಸತ್ಯ.

ತಾಲೂಕಿನ ಜಾಲಿಬೆಂಚಿ ಗ್ರಾಮದ ಹನುಮಂತ ಸಾಲಿ ಎನ್ನುವ ರೈತನ ಮನೆಯಲ್ಲಿರುವ ಹಸುವೊಂದು ಸುಮಾರು ದಿನಗಳಿಂದ ಪುಟ್ಟ ಪುಟ್ಟ ನಾಯಿ ಮರಿಗಳಿಗೆ ತನ್ನ ಕೆಚ್ಚಲು ಹಾಲು ಕುಡಿಸುವ ಮೂಲಕ ತಾಯ್ತನಕ್ಕೆ ಮಾದರಿಯಾಗಿದೆ.

ವಿಚಿತ್ರವೆಂದರೆ ಪ್ರತಿದಿನವೂ ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ನಾಲ್ಕಾರು ನಾಯಿ ಮರಿಗಳು ಅಕ್ಕರೆಯಿಂದ ಬಂದು ಹಸುವಿನ ಹಾಲನ್ನು ಹೀರುತ್ತವೆ. ಈ ಮರಿಗಳಿಗೆ ಹಸುವು ಅಷ್ಟೇ ಕಕ್ಕುಲಾಯಿತಿಯಿಂದ ಹಾಲುಣಿಸುವ ದೃಶ್ಯ ಗ್ರಾಮಸ್ಥರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದೆ.

ತಾಯಿ ಮಕ್ಕಳ ಪ್ರೀತಿಗೆ ಪಾತ್ರವಾಗಿರುವ ಈ ಅನ್ಯ ಜಾತಿಯ ಪ್ರಾಣಿಗಳು, ಮನುಷ್ಯತ್ವಕ್ಕೆ ಸವಾಲೆಸೆಯುವಂತಿದೆ. ತಾಯ್ತನ ಎನ್ನುವುದು ಯಾವುದೇ ಆಮಿಷವಿಲ್ಲದ, ನಿಸ್ವಾರ್ಥ ಸಂಬಂಧ ಎನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ ಎನ್ನುವುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.

ನಾಯಿ ಮರಿಗಳಿಗೆ ಹಾಲುಣಿಸುವ ಹಸುವಿನ ದೃಶ್ಯ ನೋಡಲು ಜನ ಸೇರುತ್ತಿರುವುದು ವಿಶೇಷವಾಗಿದೆ..

LEAVE A REPLY

Please enter your comment!
Please enter your name here