ಗಣಿ ಅಧ್ಯಕ್ಷರ ನಿವಾಸದಲ್ಲಿ ದಸರಾ ವಿಶೇಷ ಪೂಜೆ*

ನಾಡಹಬ್ಬ ದಸರಾ ನಮ್ಮೆಲ್ಲರ ಬದುಕಿನಲ್ಲೂ ಹೊಸ ಸ್ಪೂರ್ತಿಯನ್ನು ದಸರಾ

0
12

*ದಸರಾ : ಚಿನ್ನದ ಗಣಿ ಅಧ್ಯಕ್ಷರ ನಿವಾಸದಲ್ಲಿ ವಿಶೇಷ ಪೂಜೆ*

ಲಿಂಗಸುಗೂರು : ದಸರಾ, ವಿಜಯದಶಮಿ ಹಬ್ಬದ ನಿಮಿತ್ಯ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರ ನಿವಾಸದಲ್ಲಿ ಕುಟುಂಬಸ್ಥರು ಸೇರಿ ವಿಶೇಷ ಪೂಜೆ ಸಲ್ಲಿಸಿದರು.

ಕುಟುಂಬದ ಹಿರಿಯರು-ಕಿರಿಯರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಾಡದೇವತೆಯಲ್ಲಿ ನಾಡಿನ ಶಾಂತಿ ಸಮೃದ್ಧಿ ನೆಲೆಸುವಂತೆ ಪ್ರಾರ್ಥಿಸಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಧಿಗ್ಧತೆಯಲ್ಲಿ ಜನರ ಜೀವನ ಅಸ್ಥವ್ಯಸ್ತಗೊಂಡಿತ್ತು. ಇತ್ತೀಚೆಗೆ ಆರ್ಥಿಕ ಸುಧಾರಣೆಯತ್ತ ಜನರು ಒಗ್ಗಿಕೊಳ್ಳುತ್ತಿರುವುದು ಸಮಾಧಾನದ ಸಂಗತಿ. ನಾಡಹಬ್ಬ ದಸರಾ ನಮ್ಮೆಲ್ಲರ ಬದುಕಿನಲ್ಲೂ ಹೊಸ ಸ್ಪೂರ್ತಿಯನ್ನು ನೀಡಲಿ ಎಲ್ಲರೂ ಕ್ಷೇಮದಿಂದ ಇರಲು ದೇವಿ ಆಶೀರ್ವದಿಸಲಿ ಎಂದು ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ನಾಡಿನ ಜನತೆಗೆ ಶುಭಾಶಯ ಕೋರಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಕರಿಯಪ್ಪ ವಜ್ಜಲ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ್ ವಜ್ಜಲ್ ಸೇರಿ ವಜ್ಜಲ್ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here