ಅರ್ಧ ನಗರ ಕೇಳುವಂತೆ ಮಂತ್ರಗಳ ಉದ್ಘೋಷ

ಶ್ರೀ ಪ್ರತ್ಯಂಗಿರಾ ದೇವಿ ಹೋಮ ಕಾರ್ಯಕ್ರಮ ಭಾರೀ ಸಂಖ್ಯೆಯಲ್ಲಿ ಜನ

0
20

ರಾಯಚೂರು.ಅ.14 – ನಗರದ ಬಾಲಮಾರೆಮ್ಮ ದೇವಸ್ಥಾನದ ಮುಂಭಾಗದಲ್ಲಿ ಶಾರದಾಂಬೆ ಜ್ಯೋತಿಷ್ಯಾಲಯದ ಕೆ.ನಾರಾಯಣ ಗೂರೂಜೀ ಅವರ ನೇತೃತ್ವದಲ್ಲಿ ಇಂದು ಶ್ರೀ ಪ್ರತ್ಯಂಗಿರಾ ದೇವಿ ಹೋಮ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಯಿತು.

ಬಾಲ ಮಾರೆಮ್ಮ ದೇವಸ್ಥಾನದ ಮುಂಭಾಗದ ರಸ್ತೆಯ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿ ಬೃಹತ್ಕಾರಾದ ಹೋಮ ಕುಂಡ ರಚಿಸಿ, ನಿರ್ಮಿಸಿ, ಹೋಮ ಕಾರ್ಯ ನಡೆಸಲಾಯಿತು. ಈ ಪ್ರತ್ಯಂಗಿರಾ ದೇವಿ ಹೋಮ ಕಾರ್ಯಕ್ರಮಕ್ಕೆ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗುರುಗಳು ಮತ್ತು ಶಿಷ್ಯವೃಂದರ ನಿರೀಕ್ಷೆಯಂತೆ ಭಾರೀ ಸಂಖ್ಯೆಯಲ್ಲಿ ಇಂದು ಜನ ನೆರೆದಿದ್ದರು. ಮಹಿಳೆಯರು ನೀಲಿ ಸೀರೆ, ಪುರುಷರು ನೀಲಿ ಪಂಚೆ ಧರಿಸಿ ಈ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗೂರೂಜೀಯವರ ನೇತೃತ್ವದಲ್ಲಿ ಮಂತ್ರಗಳ ಉದ್ಘೋಷ ಇಡೀ ಅರ್ಧ ನಗರ ಕೇಳುವಂತೆ ವ್ಯವಸ್ಥೆ ಮಾಡಲಾಗಿತ್ತು.
ಶಿಷ್ಯವೃಂದವೂ ಮಂತ್ರೊಚ್ಚಾರ ಇಡೀ ಅಲ್ಲಿಯ ವಾತಾವರಣವನ್ನು ಧಾರ್ಮಿಕ ಪರಿಸರವನ್ನಾಗಿ ಪರಿವರ್ತನೆಗೊಂಡಿತು. ಲೋಕ ಕಲ್ಯಾಣಾರ್ಥಕ್ಕಾಗಿ ಈ ಹೋಮವನ್ನು ಗೂರೂಜೀ ನಿರ್ವಹಿಸಿದರು. ಹೋಮದ ನಂತರ ಆಗಮಿಸಿದ ಎಲ್ಲಾ ಭಕ್ತರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಮತ್ತು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಸೇರಿದಂತೆ ಇನ್ನಿತರರು ಮುಖಂಡರು ಈ ಹೋಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು. ಹೋಮ ಕಾರ್ಯದಲ್ಲಿ ಶಿಷ್ಯವೃಂದದ ತಿಮ್ಮಾರೆಡ್ಡಿ, ಕರಿಯಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here