ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ : ವಜ್ಜಲ್

ಮಕ್ಕಳಿಗೆ ಸಂಸ್ಕಾರ ನೀಡುವ ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು. ವಜ್ಜಲ್

0
73

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ : ವಜ್ಜಲ್

ಲಿಂಗಸುಗೂರು : ಆಧುನಿಕತೆಯ ಭರಾಟೆಯಲ್ಲಿ ಮನುಷ್ಯತ್ವ ದೂರಾಗುತ್ತಿದೆ. ಶಾಲೆಗಳಲ್ಲಿ ಶಿಕ್ಷಣ ಕಲಿಸುವ ಜೊತೆಗೆ ಇಂತಹ ಶ್ರೀಗಳ ಮಾರ್ಗದರ್ಶನ ದಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ ಕೊಡಬೇಕೆಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.

ತಾಲೂಕಿನ ಯರಡೊಣ ಕ್ರಾಸ್ ಹತ್ತಿರದ ಸಿದ್ದರಾಮೇಶ್ವರ ಗುರು ಮಠದಲ್ಲಿ ಶ್ರೀಮಠದ ಪಿಠಾಧಿಪತಿಗಳಾದ ಮುರುಘೇಂದ್ರ ಶಿವಾಚಾರ್ಯರು ಹಮ್ಮಿಕೊಂಡ ನವರಾತ್ರಿ ಅಂಗವಾಗಿ ನಡೆಯುವ ದೇವಿ ಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀಮಠದ ಬೆಳವಣಿಗೆ ಶ್ರೀಮಠದ ಶ್ರೀಗಳ ಸಮಾಜ ಮುಖಿ ಕಾರ್ಯಗಳ ಬಗ್ಗೆ ಶ್ರೀಗಳ ಸಮಾಜ ಸೇವಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಸಮಾಜದ ಸುಧಾರಣೆಗೆ ಮನುಷ್ಯ ಶರಣರತ್ವದ ಅಡಿಯಲ್ಲಿ ಜೀವಿಸಬೇಕು. ತಂದೆ ತಾಯಂದಿರು ಮಕ್ಕಳಲ್ಲಿ ಉತ್ತಮವಾದ ಸಂಸ್ಕೃತಿಯನ್ನ ನೀಡಿ ಬೇಳಸಬೇಕು. ಮಕ್ಕಳು ಸುಸಂಸ್ಕೃತರಾದರೆ ಅವರ ಭವಿಷ್ಯದೊಂದಿಗೆ ಇಡಿ ನಾಡಿನ ಭವಿಷ್ಯದ ಉತ್ತಮವಾಗಿರುತ್ತೆ. ಸೇವಾ ಮನೋಭಾವ ಎಲ್ಲರಲ್ಲಿಯು ಬೆಳೆಯಬೇಕೆಂದು ಮಾತನಾಡಿದರು.

ಬಾಲ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನ ನೇರವೇರಿದಿದರು.

ಪಕ್ಷದ ಅಧ್ಯಕ್ಷ ವೀರನಗೌಡ ಪಾಟೀಲ್, ಮುಖಂಡರಾದ ಗಿರಿಮಲ್ಲನಗೌಡ ಮಾಲಿ ಪಾಟೀಲ್, ಡಾ. ಶಿವಬಸಪ್ಪ ಹೆಸರೂರು, ಮುದಕಪ್ಪ ನಾಯಕ, ವೆಂಕನಗೌಡ ಪಾಟೀಲ್, ಅಯ್ಯನಗೌಡ, ಧ್ಯಾಮಣ್ಣ ನಾಯಕ, ಅಮರೇಶ ಮಡ್ಡಿ, ರಮೇಶ, ವೇಂಕೊಬ್ ಹಟ್ಟಿ ಸೇರಿ ಶ್ರೀ ಮಠದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here