ಲಖ್ಖಿಂಪೂರ್ ಖೇರಿ ರೈತ ಹುತಾತ್ಮರ ದಿನಾಚರಣೆ; ಸಂಯುಕ್ತ ಕಿಸಾನ್ ಮೋರ್ಚಾ

ಬಿಜೆಪಿ ಸರಕಾರ ರೈತರನ್ನು ಅಮಾನುಷವಾಗಿ ಕೊಲ್ಲುತ್ತಿದೆ ಸ್ವಾರ್ಥಕ್ಕಾಗಿ ಕಾರ್ಪೊರೇಟ್ ಪರ ಕೆಲಸ ಮಾಡುತ್ತಿದೆ

0
14

ಮಾನವಿ:  ಲಕ್ಕಿಂಪುರ ಖೇರಿಯಲ್ಲಿ ಆಗಿರುವಂತಹ ಹತ್ಯಾಕಾಂಡದಲ್ಲಿ ಹುತಾತ್ಮರಾಗಿರುವ ರೈತರು ಮತ್ತು ಪತ್ರಕರ್ತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರೈತ ಕಿಸಾನ್ ಮಾರ್ಚ್ ಕರೆಗೆ ಓಗೊಟ್ಟು ವಿವಿಧ ಹೋರಾಟಗಾರರ ವತಿಯಿಂದ ರೈತ ಹುತಾತ್ಮ ದಿನಾಚರಣೆಯನ್ನ ಇಂದು ಮಾನ್ವಿಯಲ್ಲಿ ಮೊಂಬತ್ತಿ ಹಚ್ಚಿ ಹುತಾತ್ಮ ರ ಭಾವಚಿತ್ರಕ್ಕೆ ಹೂಗಳನ್ನು ಎರಚುವ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಇಡೀ ದೇಶದಲ್ಲಿ ಇಂದು ಕಿಸಾನ್ ಮೋರ್ಚಾ ವತಿಯಿಂದ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ ಆದಕಾರಣ ಮಾನ್ವಿ ತಾಲೂಕಿನ ಸಂಯುಕ್ತ ಕಿಸಾನ್ ಮಾರ್ಚ್ ದ ಕರೆಗೆ ಓಗೊಟ್ಟು ವಿವಿಧ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿ ರೈತ ಹುತಾತ್ಮರ ದಿನಾಚರಣೆ ಆಚರಿಸಿದರೆ.

ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವ ಮೂಲಕ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಹಾಕಿ ರೈತ ಮತ್ತು ಪತ್ರಕರ್ತರ ಸಾವಿಗೆ ಕಾರಣರಾಗಿರುವ ಬಿಜೆಪಿ ಸರ್ಕಾರದ ಕೇಂದ್ರ ಗ್ರಹ ಖಾತೆ ಸಚಿವ ಅಜಯ್ ಮಿಶ್ರ ರವರ ಮಗ ಆಶಿಶ್ ಮಿಶ್ರಾ ಮತ್ತು ಅವರ ಸಹಚರರನ್ನು ತಕ್ಕ ಶಿಕ್ಷೆ ನೀಡಬೇಕು ಮತ್ತು ಅಜಯ್ ಮಿಶ್ರಾರವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರುಆಗ್ರಹಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಮಾರಪ್ಪ ಹರವಿ, ವೀರನಗೌಡ, ಲಕ್ಷ್ಮಣ ಜಾನೇಕಲ್ ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಫರೀದ್ ಉಮರಿ ಹಾಗೂ ಶೇಕ್ ಬಾಬಾ ಹುಸೇನ್ ಮತ್ತು ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here