ಜಾಲಹಳ್ಳಿ ಮುಖಂಡರ ಬಂಧನ ಬಹುದೊಡ್ಡ ರಾಜಕೀಯ ಅಣಕು; ಶರ್ಫುದ್ದೀನ್ ಪೋತ್ನಾಳ 

ಪಂಚಾಯಿತಿ ಗಳಿಗೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿಸುವುದು ರಾಜಕೀಯ ಹುನ್ನಾರ

0
34

ಜಾಲಹಳ್ಳಿ ಮುಖಂಡರ ಬಂಧನ ಬಹುದೊಡ್ಡ ರಾಜಕೀಯ ಅಣಕು ಶರ್ಫುದ್ದೀನ್ ಪೋತ್ನಾಳ 

ಮಾನವಿ: ಈಗಾಗಲೇ ಜಾಲಹಳ್ಳಿ ಚಿಂಚೋಡಿ ಕರಿಗುಡ್ಡ ಚುನಾಯಿತ ಆಡಳಿತ ಅವಧಿ ಮುಗಿದಿದ್ದು ಈ ಕೂಡಲೇ ಚುನಾವಣೆ ನಡೆಸಲು ಮತ್ತು ಈ ಸಂದರ್ಭದಲ್ಲಿ ಆಡಳಿತ ರಹಿತ ಅವಧಿಯಲ್ಲಿ ಪಂಚಾಯಿತಿ ಗಳಿಗೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿಸುವುದು ರಾಜಕೀಯ ಹುನ್ನಾರವೂ ಆಗಿದೆ ಮತ್ತು ನ್ಯಾಯಾಲಯದ ತೀರ್ಪಿನ ನಿಂದನೆ ಯಾಗಿದೆ ಈ ಕೂಡಲೇ ಪಂಚಾಯಿತಿ ಚುನಾವಣೆ ನಡೆಸಲು ಮತ್ತು ಗ್ರಾಮೀಣ ಉದ್ಯೋಗ ಗಳನ್ನು ಉಳಿಸಲು ಸತ್ಯಾಗ್ರಹದ ಮೂಲಕ ಆಗ್ರಹಿಸಿದ ಕರ್ನಾಟಕ ರೈತ ಪ್ರಾಂತ ಸಂಘದ ಜಾಲಹಳ್ಳಿ ಮುಖಂಡರನ್ನು ಬಂಧಿಸಿರುವುದು ರಾಜಕೀಯ ಅಣಕವಾಗಿದೆ ಈ ಕೃತ್ಯವನ್ನು ಸಿಐಟಿಯು ಉಗ್ರವಾಗಿ ಖಂಡಿಸುತ್ತದೆ ಎಂದು ಶರ್ಫುದ್ದೀನ್ ಪೊತ್ನಾಳ ಹೇಳಿದರು.

ಅವರು ಇಂದು ಸಿಐಟಿಯು ಕಾರ್ಯಕರ್ತರ ಜೊತೆಗೆ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ತಹಸೀಲ್ದಾರ್ ಕಾರ್ಯಾಲಯಕ್ಕೆ ಬಂದು ದಂಡಾಧಿಕಾರಿ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕೊಟ್ಟರು

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here