ರೈತ ಮತ್ತು ಬಡವರ ವಿರೋಧಿ ಕೇಂದ್ರ ಸರ್ಕಾರ; ವೆಲ್ಫೇರ್ ಪಾರ್ಟಿ ಆರೋಪ 

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 24 ಜನ ನೌಕರರು ಮೃತ ಪಟ್ಟಿದ್ದು, ಇನ್ನೂ ಯಾರಿಗೂ ಪರಿಹಾರ ಸಿಕ್ಕಿಲ್ಲ.

0
88

ರೈತ ಬಡವರ ವಿರೋಧಿ ಕೇಂದ್ರ ಸರ್ಕಾರ ವೆಲ್ಫೇರ್ ಪಾರ್ಟಿ ಆರೋಪ

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ರವರ ಆಗಮನದ ಮೇರೆಗೆ ರಾಯಚೂರು ಜಿಲ್ಲಾ ಸಮಿತಿ ಹಾಗೂ ಮಾನ್ವಿ ತಾಲೂಕ ಸಮಿತಿಯ ವತಿಯಿಂದ  ಪತ್ರಿಕಾಗೋಷ್ಠಿ ನಡೆಯಿತು.

ಅಡ್ವೊಕೇಟ್ ತಾಹೇರ್ ಹುಸೇನ್ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಜೊತೆ ಮಾತನಾಡುತ್ತಾ ಹೀಗೆ ಹೇಳಿದರು

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ರೈತರ ಮೇಲೆಯೇ ವಾಹನ ಚಲಾಯಿಸಿ ಅಮಾಯಕ ರೈತರ ಹತ್ಯೆ ಮಾಡಲಾಗಿದೆ.ಲಖೀಂಪುರ ಖೇರಿಗೆ ಸಾಂತ್ವನ ಹೇಳಲು ತೆರಳುವ ವಿರೋಧ ಪಕ್ಷದ ನಾಯಕರಿಗೆ ಶಾಂತಿಭಂಗ ಉಂಟು ಮಾಡಿದ್ದಾರೆ ಎಂದು ಬಂಧಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವರ ಪುತ್ರನೇ ರೈತರ ಮೇಲೆ ವಾಹನ ಚಲಾಯಿಸಿ ಹತ್ಯೆ ಮಾಡಿರುವ ಸಂಗತಿ ಬಹಿರಂಗವಾಗಿದ್ದರು ಆರೋಪಿ ಬಿಜೆಪಿ ಪಕ್ಷದವರಾದ ಗೃಹ ಖಾತೆ ಸಚಿವ ಅಜಯ್ ಮಿಶ್ರ ರವರ ಪುತ್ರ ಆಶಿಶ್ ಮಿಶ್ರಾ ಅಡಗಿಕೊಂಡು ಕುಳಿತು ಇನ್ನು ವಿರೋಧ ಪಕ್ಷಗಳ ಒತ್ತಡ ಜಾಸ್ತಿ ಆದಾಗ ನಿನ್ನೆ ತಾನೇ ಕೋರ್ಟ್ ಗೆ ಹಾಜರಾಗಿದ್ದಾನೆ .

ದೇಶಕ್ಕಾಗಿ ಅನ್ನ ನೀಡುವ ಅನ್ನದಾತರನ್ನು ಈ ರೀತಿಯಾಗಿ ಬಿಜೆಪಿ ಸರ್ಕಾರ ಅಮಾನುಷವಾಗಿ ಹತ್ಯೆ ಮಾಡುತ್ತಿದೆ. ದೇಶದಲ್ಲಿ ರೈತರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದೆ. ದುರಾಡಳಿತ ಮಿತಿ ಮೀರಿದೆ. ಹೀಗಾಗಿಯೇ ಜನರು ನಿತ್ಯ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಆರೋಪಿಗಳನ್ನ ತಕ್ಕ ಶಿಕ್ಷೆಗೆ ಒಳಪಡಿಸಬೇಕು ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಗೃಹ ಖಾತೆ ಸಚಿವ ಕೂಡಲೇ ರಾಜೀನಾಮೆ ನೀಡಬೇಕು ಎಂದು ವೆಲ್ಫೇರ್ ಪಾರ್ಟಿ ಆಗ್ರಹಿಸುತ್ತದೆ.

ಬೆಲೆ ಏರಿಕೆಯನ್ನು ಕಂಡರೂ ಕಾಣದ ರೀತಿಯಲ್ಲಿ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದಾರೆ. ಜನರು ಜೀವನ ಸಾಗಿಸುವುದು ಅತ್ಯಂತ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ .

ಪೆಟ್ರೋಲ್ ಡೀಸೆಲ್ ಬೆಲೆ ನಿಯಂತ್ರಿಸಲು ಸಾಧ್ಯವಾಗದೆ ಜನರಿಗೆ ನಿತ್ಯವೂ ಬೆಲೆ ಏರಿಕೆಯ ಹೊರೆಯನ್ನು ಹೊರಿಸುವ ಮೂಲಕ ಕೇಂದ್ರ ಸರ್ಕಾರ ಬೇಜವಬ್ದಾರಿಯಾಗಿ ವರ್ತಿಸುತ್ತಿದೆ.

ಇನ್ನು ಎಲ್ ಪಿಜಿ ದರದಲ್ಲಿ ಪ್ರತಿ ತಿಂಗಳಿಗೆ 25 ರೂ ನಂತೆ ಹತ್ತು ತಿಂಗಳಿನಲ್ಲಿ 250 ರೂ ಏರಿಕೆ ಆದರೂ ಅದನ್ನು ತಡೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ, ಇಂದೂ ಸಹ ಮತ್ತೆ ಎಲ್.ಪಿ.ಜಿ ದರ₹ 15 ರೂ ಏರಿಕೆಯಾಗಿದೆ

ಪೆಟ್ರೋಲ್ ಡೀಸೆಲ್ ಪ್ರತಿ ಲೀಟರ್ ಗೆ ನಿತ್ಯವೂ ಮೂವತ್ತು ಮೂವತ್ತೈದು ಪೈಸೆಯಷ್ಟು ಏರಿಕೆಯಾಗಿದೆ ಡೀಸೆಲ್ 97 ರೂ ಪೆಟ್ರೋಲ್ 106 ರೂ ಗಡಿ ದಾಟಿದೆ ಇನ್ನು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಂತೂ ಗಗನಕ್ಕೇರಿದೆ .

ಇದನ್ನು ನಿಯಂತ್ರಿಸುವ ಪ್ರಯತ್ನವನ್ನ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ನಡೆಸದೆ ರೈತರ ಹೋರಾಟವನ್ನು ಹತ್ತಿಕ್ಕಲು ರೈತರ ಮೇಲೆ ವಾಹನ ಹರಿಸಿ ಕೊಲ್ಲುವ ಮೂಲಕ ಅತ್ಯಂತ ಹೇಯ ಕೃತ್ಯವನ್ನು ನಡೆಸುತ್ತಿದೆ. ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಮೋದಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 276 ಜನ ನೌಕರರು ಕೋವಿಡ್ ನಿಂದ ಮೃತ ಪಟ್ಟ ಬಗ್ಗೆ ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಗೆ ವಿವರಣೆ ಬಹಿರಂಗವಾಗಿದ್ದು, ಇವರಲ್ಲಿ ಕೇವಲ 11 ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದ ಕುಟುಂಬಗಳು ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುವಂತಾಗಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 24 ಜನ ನೌಕರರು ಮೃತ ಪಟ್ಟಿದ್ದು, ಇನ್ನೂ ಯಾರಿಗೂ ಪರಿಹಾರ ಸಿಕ್ಕಿಲ್ಲ.

ಹೀಗೆ ಒಟ್ಟು ನಾಲ್ಕು ಸಾರಿಗೆ ನಿಗಮದಲ್ಲಿ ಮೃತಪಟ್ಟ ಸಂಖ್ಯೆ 276 ಜನ ಸಿಬ್ಬಂದಿಗಳು ಮಹಾಮಾರಿಗೆ ತುತ್ತಾಗಿದ್ದು, ಕೇವಲ 11 ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದ 265 ಕುಟುಂಬಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.

ಖುದ್ದು ಸಾರಿಗೆ ಸಂಸ್ಥೆ ಯವರೆ ನೀಡಿರುವ ಅಧಿಕೃತಿ ಮಾಹಿತಿ ಇದಾಗಿದ್ದು, ಸರಕಾರ ಕೇವಲ ಕಣ್ಣೊರೆಸುವ ತಂತ್ರವನ್ನು ಉಪಯೋಗಿಸುತ್ತಿರುವು ಖೇದಕರ ಸಂಗತಿಯಾಗಿದೆ.

ಸಾರಿಗೆ ನೌಕರರನ್ನು ಕೋವಿಡ್ ವಾರಿಯರ್ ಎಂದು ಸರಕಾರ ಘೋಷಣೆ ಮಾಡಿತ್ತು. ಮಹಾಮಾರಿ ಸೋಂಕಿನಿಂದ ಮೃತಪಟ್ಟವರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಬೆಂಗಳೂರಿನಲ್ಲಿ ಪ್ರಸನ್ನಕುಮಾರ್ ಎನ್ನುವ ಬಿಎಂಟಿಸಿ ಸಿಬ್ಬಂದಿ ಕೊರೋನಾ ದಿಂದ ಸಾವಿಗೀಡಾಗಿದ್ದರು. ಆದರೆ ಅವರ ಕುಟುಂಬಕ್ಕೆ ಇನ್ನೂ ತನಕ ಯಾವುದೇ ಪರಿಹಾರ ಬಾರದೇ ಇದ್ದ ಕಾರಣ ಸಿಬ್ಬಂದಿಯ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವ್ಯವಸ್ಥೆಯ ಕರಾಳತೆಗೆ ಸಾಕ್ಷಿಯಾಗಿದೆ.

ಕೂಡಲೇ ಸಾರಿಗೆ ಸಚಿವರು ಎಚ್ಚೆತ್ತುಕೊಂಡು ಆರ್ಥಿಕವಾಗಿ ತೊಂದರೆಗೀಡಾಗಿರುವ ಮೃತ ಸಿಬ್ಬಂದಿಗಳ ಕುಟುಂಬಗಳಿಗೆ ಪರಿಹಾರ ವಿತರಿಸಬೇಕು ಇಲ್ಲವಾದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಈ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ.

ಅತ್ಯಾಚಾರ; ಕಠಿಣ ಶಿಕ್ಷೆಗೆ ಆಗ್ರಹ

ದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದ ಪರಿಶಿಷ್ಟ ಸಮುದಾಯದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆ ಒಪ್ಪದಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಗಂಗಪ್ಪ ಅಳ್ಳಳ್ಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಅನಾಗರಿಕ ಜನರು ಇರುವ ಕಡೆ ಮಾತ್ರ ಇಂತಹ ದುರಂತಗಳು ನಡೆಯುತ್ತವೆ. ಅಪರಾಧಿ ಯಾವುದೇ ವರ್ಗಕ್ಕೆ ಸೇರಿರಲಿ ಎಷ್ಟೇ ಪ್ರಭಾವಿಯಾಗಿರಲಿ ಶಿಕ್ಷೆ ತಪ್ಪದು ಎನ್ನುವ ಭಾವನೆಯನ್ನು ಸರ್ಕಾರ ಮೂಡಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಿದ್ದರೂ ಇವುಗಳಿಗೆ ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿರುವುದು ಖೇದಕರ ಯಂದು ಅವರು ಹೇಳಿದರು.

ಬಿಜೆಪಿ ಸರ್ಕಾರ ರಾಜ್ಯ ಮತ್ತು ದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ, ಕೊಲೆ ಘಟನೆಗಳು ಹೆಚ್ಚಾಗುತ್ತಿದ್ದು, ರಕ್ಷಣೆಯಲ್ಲಿ ಎರಡೂ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ರಾಜ್ಯ ಅಧ್ಯಕ್ಷ ತಾಹೀರ್ ಹುಸೇನ್ ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಫರೀದ್ ಉಮರಿ, ಕಾರ್ಯ ಅಧ್ಯಕ್ಷ ಅಬ್ದುಲ್ ಲತೀಫ್ ರಾಯಚೂರು, ಮಾನವಿ ತಾಲೂಕು ಅಧ್ಯಕ್ಷ ಶೇಕ್ ಬಾಬಾ ಹುಸೇನ್ ಸಿಂಧನೂರು ತಾಲೂಕ ಅಧ್ಯಕ್ಷ ಮೆಹಬೂಬ್ ಖಾನ್, ರಾಯಚೂರು ನಗರ ಅಧ್ಯಕ್ಷ ಫಾರೂಕ್ ಮನಿಯಾರ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಗನಿ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಸಂಘಟನಾ ಕಾರ್ಯದರ್ಶಿ ಎಂ ಎ ಎಚ್ ಮುಖೀಮ್, ಮಾನವಿ ತಾಲೂಕ ಪ್ರಧಾ ಕಾರ್ಯದರ್ಶಿ ನಾಸಿರ್ ಅಲಿ, ಖಜಾಂಚಿ ಗುಲಾಮ್ ರಸೂಲ್, ಪದಾಧಿಕಾರಿಗಳಾದ ಮಹಿಬೂಬ್ ಫ್ರೂಟ್, ಮಸೂದ್ ಸಿಂಧನೂರು, ಹಾಫಿಜ್ ಮಹಿಮೂದ್ ರಾಯಚೂರು, ಜಿಲಾನಿ ಜಸ್ವಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here