ಒಣಗುತ್ತಿರುವ ಬೇವಿನ ಮರಗಳಿಗೆ ಅರಣ್ಯ ಇಲಾಖಾವತಿಯಿಂದ ಔಷಧಿ ಸಿಂಪಡಣೆ

ಬೇವಿನ ಮರಗಳು ಒಣಗಲು ಕಾರಣವಾದ ಟೀ ಮಾಸ್ಕಿಟೋ ಬಗ್ (tea mosquito bug) ಎಂಬ ಕೀಟವು ಪರಿಶೀಲನಾ ಸಮಯದಲ್ಲಿ ಕಂಡು ಬಂದಿದ್ದು,

0
81

ಒಣಗುತ್ತಿರುವ ಬೇವಿನ ಮರಗಳಿಗೆ ಅರಣ್ಯ ಇಲಾಖಾವತಿಯಿಂದ ಔಷಧಿ ಸಿಂಪಡಣೆ

ಸೆಪ್ಪೆಂಬರ್ ತಿಂಗಳಲ್ಲಿ ಬೇವಿನ ಮರಗಳು ಒಣಗುತ್ತಿರುವುದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯ ರಾಯಚೂರು ಇವರಿಗೆ ಬೇವಿನ ಮರಗಳು ಒಣಗಲು ಕಾರಣ ಹಾಗೂ ನಿರ್ವಹಣಾ ಕ್ರಮಗಳ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡುವ ಬಗ್ಗೆ ಅರಣ್ಯ ಇಲಾಖೆಯಿಂದ ಪತ್ರ ಬರೆದ ಮೇರೆಗೆ ದಿನಾಂಕ: 04-09-2021 ರಂದು ಕೃಷಿ ವಿಶ್ವವಿದ್ಯಾಲಯ ರಾಯಚೂರುವತಿಯಿಂದÀ ಸಹಾಯಕ ಪ್ರಾಧ್ಯಾಪಕರಾದ ಶ್ರೀ.ಶಂಕರಮೂರ್ತಿ.ಎಮ್ ಇವರೊಂದಿಗೆ ಶ್ರೀ ರಾಜೇಶ ನಾಯಕ ವಲಯ ಅರಣ್ಯ ಅಧಿಕಾರಿಗಳು ಮಾನವಿ ಹಾಗೂ ಸಿಬ್ಬಂದಿಗಳು ಕಪಗಲ್ ಕ್ರಾಸ್, ಪೋತ್ನಾಳ, ಸಿಂಧನೂರು, ಮಸ್ಕಿ ರಸ್ತೆಯ ಬದಿಯಲ್ಲಿ ಒಣಗುತ್ತಿರುವ ಬೇವಿನ ಮರಗಳನ್ನು ಪರಿಶೀಲಿಸಲಾಯಿತು.

ಬೇವಿನ ಮರಗಳು ಒಣಗಲು ಕಾರಣವಾದ ಟೀ ಮಾಸ್ಕಿಟೋ ಬಗ್ (tea mosquito bug) ಎಂಬ ಕೀಟವು ಪರಿಶೀಲನಾ ಸಮಯದಲ್ಲಿ ಕಂಡು ಬಂದಿದ್ದು, ಸದರಿ ಕೀಟವು ಬೇವಿನ ಮರದ ರೆಂಬೆಯ ಚಿಗುರಿಗೆ ದಾಳಿ ಮಾಡಿ ರಸ ಹೀರುವುದರಿಂದ ಫಂಗಸ್ ಅಟ್ಯಾಕ್ ಆಗಿ ಬೇವಿನ ಮರದ ರೆಂಬೆಯು ಹಿಮ್ಮುಖವಾಗಿ ಒಣಗುತ್ತಿರುವುದನ್ನು ಗಮನಿಸಲಾಯಿತು. ಟೀ ಮಾಸ್ಕಿಟೋ ಬಗ್ ಕೀಟವನ್ನು ನಾಶ ಮಾಡಲು ಕೀಟ ನಾಶಕ ಹಾಗೂ ಫಂಗಸ್ ಆಗಿ ಒಣಗುತ್ತಿರುವುದರಿಂದ ಫಂಗಿಸೈಡ್ ಒಟ್ಟಾರೆಯಾಗಿ ಸಿಂಪಡಣೆಗೆ ಸಾಧ್ಯತೆ ಇರುವ ಸ್ಥಳಗಳಲ್ಲಿ ಕೀಟನಾಶಕ ಹಾಗೂ ಫಂಗಿಸೈಡ್ ಎರಡು ಮಿಶ್ರಣ ಮಾಡಿ ಒಣಗುತ್ತಿರುವ ಬೇವಿನ ಮರಗಳಿಗೆ ಮುಂಜಾಗೃತಾ ಕ್ರಮದೊಂದಿಗೆ ಪ್ರಾಥಮಿಕವಾಗಿ ಸಿಂಪಡಿಸಬಹುದಾಗಿರುತ್ತದೆ.

ಪ್ರಸ್ತುತ ಮಾನವಿ ತಾಲೂಕು, ಸಿಂಧನೂರು ತಾಲೂಕು ಹಾಗೂ ಸಿರವಾರ ತಾಲೂಕುಗಳಲ್ಲಿರುವ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಹಾಗೂ ಅರಣ್ಯ ಇಲಾಖೆ ವತಿಯಿಂದ ನೆಟ್ಟ ಬೆವಿನ ಗಿಡಗಳಿಗೆ ಮುಂಜಾಗ್ರತಾ ಕ್ರಮದೊಂದಿಗೆ ಕೀಟನಾಶಕ ಹಾಗೂ ಫಗಿಸೈಡ್ ಮಿಶ್ರಣ ಮಾಡಿ ಅರಣ್ಯ ಇಲಾಖೆಯಿಂದ ಸಿಂಪಡಿಸಲಾಗುತ್ತಿದೆ.
ಈ ರೋಗದ ತಾತ್ಕಾಲಿಕ ನಿರ್ವಹಣೆಗೆ ಸೂಕ್ತ ಸಲಹೆಗಳನ್ನು ಈ ಕೆಳಗೆ ತಿಳಿಸಿದ್ದು, ಸದರಿ ರೋಗವನ್ನು ಸ್ಥಳೀಯ ಪರಸ್ಥಿತಿಗನುಗುಣವಾಗಿ ಈ ಕೆಳಗೆ ಹೇಳಲಾದ ಕ್ರಮಗಳಲ್ಲಿ ಯಾವುದೋ ಅಗತ್ಯ ಅಥವಾ ಸುಲಭವೋ ಸದರಿ ಕ್ರಮದಿಂದ ಮುಂಜಾಗೃತೆಯೊಂದಿಗೆ ನಿರ್ವಹಣೆ ಮಾಡಬಹುದಾಗಿದೆ ಎಂದು ಕೃಷಿ ವಿಶ್ವ ವಿದ್ಯಾಲಯ ರಾಯಚೂರು ವತಿಯಿಂದ ತಿಳಿಸಿರುತ್ತಾರೆ.

1. ಪ್ರಾರಂಭಿಕ ಹಂತದಲ್ಲಿ ರೋಗಪೀಡಿತ ಎಲೆಯ ತುದಿ, ರೆಂಬೆಗಳು ಅಥವಾ ಎಲೆಗಳಿರುವ ಮುಖ್ಯ ಹಾಗೂ ಇನ್ನಿತರ ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು.
2. ಮುಂಜಾಗೃತಾ ಕ್ರಮದೊಂದಿಗೆ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಸಹಯೋಗದಲ್ಲಿ ಕೀಟನಾಶಕ ಹಾಗೂ ಫಂಗಿಸೈಡ್ ಮಿಶ್ರಣ ಮಾಡಿ ಒಣಗುತ್ತಿರುವ ಬೇವಿನ ರೆಂಬೆಗಳಿಗೆ ಸಿಂಪಡಿಸುವುದು.
3. ಶಿಲೀಂಧ್ರನಾಶಕಗಳಾದ ಕಾಪರ್ ಆಕ್ಸಿಕ್ಲೋರೈಡ್ 50 ಡಬ್ಲೂಪಿ @ 2.5 ಗ್ರಾಂ. ಮತ್ತು ಪ್ರೋಪಿಕೊನಜೋಲ್ 25 ಇ.ಸಿ. @ 1.5 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ರೋಗಪೀಡಿತ ಭಾಗಗಳಿಗೆ ಸಿಂಪಡಿಸಬೇಕು ಅಥವಾ ಕಾರ್ಬೆಂಡೈಜಿಮ್ 50ಡಬ್ಲೂಪಿ @ 1 ಗ್ರಾಂ/ಲೀ. ನೀರಿನ ದ್ರಾವಣವನ್ನು ಪ್ರತಿ ಮರದ ಬುಡಗಳಿಗೆ 10 ಲೀ ನಂತೆ ಹಾಕುವುದು ಸೂಕ್ತ.
4. ರೋಗಪೀಡಿತ ಮರಗಳಿಗೆ ಟ್ರೈಕೊಡೆರ್ಮಾ ಬೆರೆಸಿದ ಕೊಟ್ಟಿಗೆ ಗೊಬ್ಬರವನ್ನು (1 ಕೆ.ಜಿ. ಟ್ರೈಕೊಡೆರ್ಮಾ + 100 ಕೆ.ಜಿ. ಸಗಣಿ ಗೊಬ್ಬರ) ಪ್ರತಿ ಗಿಡಕ್ಕೆ 5 ಕೆ.ಜಿ. ಯಂತೆ ಹಾಗೂ ಡಿ.ಎ.ಪಿ. ಗೊಬ್ಬರವನ್ನು (1 ಕೆ.ಜಿ. ಪ್ರತಿ ಮರಗಳಿಗೆ) ಮರದ ಬುಡಗಳಿಗೆ ಹಾಕಬೇಕು.

ವಲಯ ಅರಣ್ಯಾಧಿಕಾರಿಗಳು
ಪ್ರಾದೇಶಿಕ ಅರಣ್ಯ ವಲಯ
ಮಾನವಿ

LEAVE A REPLY

Please enter your comment!
Please enter your name here