ಅಧ್ಯಯನದಲ್ಲಿ ಆಸಕ್ತಿ, ಶ್ರದ್ಧೆ ಅಗತ್ಯ: ರಾಜಾ ಮಹೇಂದ್ರನಾಯಕ ಹಿರಿಯ ಸದಸ್ಯರು ಪುರಸಭೆ ಮಾನವಿ

ಪ್ರಗತಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

0
107

ಮಾನ್ವಿ: ಪ್ರಗತಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಅಧ್ಯಯನದಲ್ಲಿ ಆಸಕ್ತಿ, ಶ್ರದ್ಧೆ ಅಗತ್ಯ: ರಾಜಾ ಮಹೇಂದ್ರನಾಯ

ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಹಾಗೂ ಶ್ರದ್ಧೆ ರೂಢಿಸಿಕೊಳ್ಳಬೇಕು ಎಂದು ಪುರಸಭೆಯ ಹಿರಿಯ ಸದಸ್ಯ ರಾಜಾ ಮಹೇಂದ್ರ ನಾಯಕ ಹೇಳಿದರು. ಮಂಗಳವಾರ ಪಟ್ಟಣದ ಬಸವರಡ್ಡಿ ಶಿಕ್ಷಣ ಸಂಸ್ಥೆಯ ಪ್ರಗತಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಮುಖಂಡ ಡಾ.ಯಂಕನಗೌಡ ಬೊಮ್ಮನಾಳ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಭವಿಷ್ಯದ ಉತ್ತಮ ನಾಗರಿಕನ್ನಾಗಿ ರೂಪಿಸಲು ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಆಚಾರ ಮತ್ತು ವಿಚಾರಗಳಲ್ಲಿ ಭಿನ್ನತೆ ಇರಬಾರದು. ಉನ್ನತ ಭವಿಷ್ಯಕ್ಕಾಗಿ ಉತ್ತಮ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ’ ಎಂದು ಹೇಳಿದರು.

ಪೋತ್ನಾಳದ ಜ್ಞಾನಭಾರತಿ ವಿದ್ಯಾಮಂದಿರದ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ ಮಾತನಾಡಿ, ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸಮಾಜ ಎಲ್ಲಾ ರಂಗಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ. ವಿದ್ಯಾರ್ಥಿಗಳು ಆಸಕ್ತಿ ಹಾಗೂ ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಪಡೆಯಬೇಕು. ಹೆತ್ತ ತಂದೆ ತಾಯಿಗಳಿಗೆ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು’ ಎಂದು ಸಲಹೆ ನೀಡಿದರು.

ಪೋತ್ನಾಳದ ಜ್ಞಾನ ಭಾರತಿ ವಿದ್ಯಾರ್ಥಿ ಮಂದಿರದ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ನಾಗಲಿಂಗ ಹಾಗೂ ಕಾವ್ಯ ಅವರಿಗೆ ಬೆಳ್ಳಿ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಿದರು. ಮಾಜಿ ಸಂಸದ ರಾಜಾ ಅಂಬಣ್ಣ ನಾಯಕ ಫೌಂಡೇಶನ್ ವತಿಯಿಂದ ರಾಜಾ ಮಹೇಂದ್ರ ನಾಯಕ ಅವರು ರೂ20ಸಾವಿರ ಮೌಲ್ಯದ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ವಿತರಿಸಿದರು. ಬೊಮ್ಮನಾಳ ಬಾಲನಗೌಡ ಪ್ರಾರ್ಥನಾ ಟ್ರಸ್ಟ್ ವತಿಯಿಂದ ಬಡ ಮಕ್ಕಳ ವ್ಯಾಸಂಗಕ್ಕಾಗಿ ರೂ10ಸಾವಿರ ಪ್ರೋತ್ಸಾಹ ಧನ ನೀಡಿದರು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಬಸವರಡ್ಡಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಾಂಶುಪಾಲ ಬಸವರಾಜ ಭೋಗಾವತಿ, ಉಪನ್ಯಾಸಕರಾದ ಸುಮಾ ಟಿ.ಹೊಸಮನಿ, ರವಿಶರ್ಮಾ, ಶರಣುಕುಮಾರ, ಪವನಕುಮಾರ, ನಾಗರಾಜ, ಮಲ್ಲಮ್ಮ, ಚಂದ್ರಶೇಖರ ಎಚ್, ಪ್ರಸಾದ ಕುಮಾರ, ಪ್ರಶಾಂತಿ, ದೀಪಾ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

LEAVE A REPLY

Please enter your comment!
Please enter your name here