ಪಡಿತರ ಅಕ್ಕಿ, ರೈಸ್ ಮಿಲ್ ಮೇಲೆ ರಾಯಚೂರು ಉಪವಿಭಾಗ ಸಹಾಯಕ ಆಯುಕ್ತರ ದಾಳಿ

4 ರೈಸ್ ಮಿಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ 44 ಸಾವಿರ ಕೆ.ಜಿ.ಪಡಿತರ ಅಕ್ಕಿ ವಶ

0
83

ರಾಯಚೂರು.04/03/21: ಪಡಿತರ ಅಕ್ಕಿ ಪಾಲಿಶ್ ಮಾಡುವ ರೈಸ್ ಮಿಲ್ ಮೇಲೆ ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿಟ್ಟ ಆರೋಪದ ಮೇಲೆ 4 ರೈಸ್ ಮಿಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, 6 ಲಕ್ಷ 61 ಸಾವಿರ ರೂಪಾಯಿ ಮೌಲ್ಯದ 884 ಚೀಲ ಪಡಿತರ ಅಕ್ಕಿ ಪತ್ತೆಯಾಗಿದೆ. 44 ಸಾವಿರ ಕೆ.ಜಿ.ಪಡಿತರ ಅಕ್ಕಿಯನ್ನು ಅಕ್ರಮವಾಗಿ‌ ಸಂಗ್ರಹಿಸಿಟ್ಟಿರೋದು ಪತ್ತೆಯಾಗಿದೆ ಎನ್ನಲಾಗಿದ್ದು, ಈ ಸಂಬಂಧ ಮಿಲ್‌ಗಳ ಮಾಲೀಕರ ಮೇಲೆ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ

ನಗರದ ಮಂಚಲಾಪುರ ರಸ್ತೆಯ ಶ್ರೀಕೃಷ್ಣಸ್ವಾಮಿ ರೈಸ್ ಮಿಲ್‌ನಲ್ಲಿ 337 ಚೀಲ ಅಕ್ಕಿ, ಜಿ.ಶಂಕರ್ ಇಂಡಸ್ಟ್ರೀಸ್ ನಲ್ಲಿ 378 ಚೀಲ, ಗದ್ವಾಲ್ ರಸ್ತೆಯ ನರಸಿಂಹ ರೈಸ್ ಮಿಲ್‌ನಲ್ಲಿ 109 ಅಕ್ಕಿ ಚೀಲ, ಚಂದ್ರಿಕಾ ರೈಸ್ ಮಿಲ್‌ನಲ್ಲಿ 60 ಚೀಲ ಅಕ್ಕಿ ಪತ್ತೆಯಾಗಿದೆ. ಪಡಿತರ ಅಕ್ಕಿಯನ್ನ ಪುನಃ ಪಾಲಿಶ್ ಮಾಡಿ ಮಾರಾಟ ಮಾಡುವ ಉದ್ದೇಶಕ್ಕೆ ಸಂಗ್ರಹ ಮಾಡಲಾಗಿದೆ ಅಂತಾ ಹೇಳಲಾಗಿದೆ.

LEAVE A REPLY

Please enter your comment!
Please enter your name here