ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋದಿಂದ ನಮ್ಮ ಪಕ್ಷಕ್ಕೆ ತೀವ್ರ ಮುಜುಗರ ಆಗಿದೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ನಮ್ಮದು ಶಿಸ್ತಿನ ಪಕ್ಷ. ನಾಯಕರಾದವರು ಸ್ವಂತ ಬದುಕಿನಲ್ಲಿ ಹಾಗೂ ಸಾರ್ವಜನಿಕವಾಗಿ ಶುದ್ಧಹಸ್ತರಾಗಿರಬೇಕು ಎಂದರು. ಸಿಡಿ ವಿಚಾರವಾಗಿ ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡುತ್ತೇನೆ. ದೆಹಲಿಯಲ್ಲೂ ನಾಳೆ ಈ ಬಗ್ಗೆ ಮಾತನಾಡುತ್ತೇನೆ. ತಪ್ಪಿತಸ್ಥರಾಗಿದ್ದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

0
83

ಬೆಂಗಳೂರು : ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ರಾಸಲೀಲೆ ವಿಡಿಯೋದಿಂದ ನಮ್ಮ ಪಕ್ಷಕ್ಕೆ ತೀವ್ರ ಮುಜುಗರ ಆಗಿದೆ. ಆದರೆ ಈ ವಿಡಿಯೋ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ನಮ್ಮದು ಶಿಸ್ತಿನ ಪಕ್ಷ. ನಾಯಕರಾದವರು ಸ್ವಂತ ಬದುಕಿನಲ್ಲಿ ಹಾಗೂ ಸಾರ್ವಜನಿಕವಾಗಿ ಶುದ್ಧಹಸ್ತರಾಗಿರಬೇಕು ಎಂದರು. ಸಿಡಿ ವಿಚಾರವಾಗಿ ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡುತ್ತೇನೆ. ದೆಹಲಿಯಲ್ಲೂ ನಾಳೆ ಈ ಬಗ್ಗೆ ಮಾತನಾಡುತ್ತೇನೆ. ತಪ್ಪಿತಸ್ಥರಾಗಿದ್ದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

# ಸಂತ್ರಸ್ತೆ ಹಾಗೂ ಆಕೆಯ ಕುಟುಂಸ್ಥರನ್ನು ಸಂಪರ್ಕಿಸಿ ಮುಂದಿನ ಕ್ರಮ :
ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅವರು, ದಿನೇಶ ಕಲ್ಲಹಳ್ಳಿ‌ ಎನ್ನುವರು ಯುವತಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ ಕೆಲವೊಂದು ಪ್ರಕ್ರಿಯೆ ಇದೆ. ಸಂತ್ರಸ್ತೆ ಹಾಗೂ ಆಕೆಯ ಕುಟುಂಸ್ಥರನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತವೆ ಎಂದು ಹೇಳಿದ್ದಾರೆ.

ಸಚಿವರ ಹೇಳಿಕೆ ಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಅದನ್ನು ಮುಂದಿನ ದಿನಗಳಲ್ಲಿ ಪಡೆಯುತ್ತೇವೆ. ಅದರ ಮೂಲಕವೇ ತನಿಖೆ ನಡೆಸುತ್ತೇವೆ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

# ದೂರಿನಲ್ಲೇನಿದೆ..?
ಕೆಲಸ ಕೊಡಿಸುವುದಾಗಿ ಯುವತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ ಸಚಿವರ ಸಿ.ಡಿ ಯೊಂದು ಬಹಿರಂಗವಾಗಿದ್ದು ಈ ಕುರಿತು ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷರಾದ ದಿನೇಶ್ ಕಲ್ಲಹಳ್ಳಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದಿನೇಶ್ ನೀಡಿದ ದೂರಿನ ಪ್ರತಿಯಲ್ಲಿ ಉತ್ತರ ಕರ್ನಾಟಕ ಮೂಲದ ಬಡ ಕುಟುಂಬದ ಯುವತಿಯೊಬ್ಬಳು ಕೆಲಸದ ವಿಚಾರವಾಗಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಳಿ ಕೇಳಿದ್ದು ಅದಕ್ಕೆ ಸಚಿವರು ಕೆಪಿಟಿಸಿಎಲ್ ನಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನು ನೀಡಿ ಯುವತಿಯ ಜೊತೆ ಸಲುಗೆಯಿಂದ ವರ್ತಿಸಿ ಲೆಂಗಿಕ ಸಂಪರ್ಕ ಹೊಂದಿ ಬಳಿಕ ಉದ್ಯೋಗವನ್ನು ನೀಡದೆ ವಂಚಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಯುವತಿಯ ಜೊತೆ ಸಚಿವರು ಲೈಂಗಿಕ ಸಂಪರ್ಕ ಬೆಳೆಸಿದ್ದ ವಿಡಿಯೋ ಇರುವುದು ತಿಳಿಯುತ್ತಿದ್ದಂತೆ ಯುವತಿ ಮತ್ತು ಯುವತಿಯ ಕುಟುಂಬಕ್ಕೆ ಸಚಿವರು ಜೀವ ಬೆದರಿಕೆ ಒಡ್ಡಿದ್ದಾರೆ.

ನಾನು ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿರುವ ಕಾರಣ ಯುವತಿ ಕುಟುಂಬದವರು ನನ್ನ ಬಳಿ ಬಂದು ಸಚಿವರು ಯುವತಿಯ ಜೊತೆ ನಡೆಸಿದ ಲೈಂಗಿಕ ಸಂಪರ್ಕದ ವಿಡಿಯೋ ಸಿ.ಡಿ ಒಂದನ್ನು ನೀಡಿದ್ದು ಅದರ ಆದರದ ಮೇಲೆ ದೂರು ದಾಖಲಿಸುತ್ತಿದ್ದೇನೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಬರೆದಿದ್ದಾರೆ

LEAVE A REPLY

Please enter your comment!
Please enter your name here