ವಿಧ್ಯಾರ್ಥಿಗಳಿಗೆ ನೈತಿಕ ಬೆಂಬಲದ ಅವಶ್ಯಕತೆ ಇದೆ – ವಿರೇಶ್ ಬೆಟ್ಟದೂರ್

ನಮ್ಮ ತಂಡ ಪ್ರತಿವರ್ಷ ಕನಸ್ಸುಗಳ ಕಟ್ಟಿದ ಪ್ರತಿಭಾನ್ವಿತ ಬಡ ವಿಧ್ಯಾರ್ಥಿಗಳಿಗೆ ಗುರುತಿಸಿ ಅವರನ್ನು ಸಾಧನೆಯತ್ತಾ ಸಾಗಲು ನಮ್ಮಿಂದಾದ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇವೆ.

0
184

ವಿಧ್ಯಾರ್ಥಿಗಳಿಗೆ ನೈತಿಕ ಬೆಂಬಲದ ಅವಶ್ಯಕತೆ ಇದೆ – ವಿರೇಶ್ ಬೆಟ್ಟದೂರ್.

ವಿಧ್ಯಾರ್ಥಿಗಳಿಗೆ ನೈತಿಕ ಬೆಂಬಲದ ಅವಶ್ಯಕತೆ ಇದೆ – ವಿರೇಶ್ ಬೆಟ್ಟದೂರ್

ಮಾನವಿ. ಮನುಷ್ಯ ಬಡವ ಶ್ರೀಮಂತ ಅನ್ನೋ ಬೇದಕ್ಕಿಂತ ಪ್ರತಿಭೆಯ ಗುರುತಿಸುವ ಕಾರ್ಯ ಬಹುಮುಖ್ಯ, ಓದುವ ಕಾಲಾದಲ್ಲಿ ನಾನಾ ಸಮಸ್ಯೆ ತೊಂದರೆಗಳು ಒಡ್ಡಿದರು ಅದನ್ನು ಮೆಟ್ಟಿ ನಿಂತು ಸಾಧನೆಯತ್ತಾ ಸಾಗಬೇಕು ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿರೇಶ್ ಬೆಟ್ಟದೂರು ಹೇಳಿದರು.

ಟಾರ್ಗೇಟ್ ಕರಿಯರ್ ಅಕಾಡೆಮಿ ಮಾನವಿ ಮತ್ತು ಸ್ನೇಹಿತರ ಬಳಗ ದಿಂದ ಪ್ರಥಮ ಮತ್ತು ದ್ವಿತೀಯ ಪಿ.ಯು. ಗ್ರಾಮಿಣ ಭಾಗದ ಬಡ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪುಸ್ತಕ ಮತ್ತು ನೋಟ್ ಬುಕ್ ಪೆನ್ ವಿತರಣಾ ಕಾರ್ಯಕ್ರಮ ಮಾನವಿ ಗಾಂಧಿ ಕಾಲೇಜನಲ್ಲಿ ಜರುಗಿತು.

ಪ್ರಾಸ್ತಾವಿಕವಾಗಿ ಟಾರ್ಗೇಟ್ ನಿರ್ಧೇಶಕ ಆಂಜನೇಯ ನಸಲಾಪುರ ಮಾತನಾಡಿ “ನಮ್ಮ ತಂಡ ಪ್ರತಿವರ್ಷ ಕನಸ್ಸುಗಳ ಕಟ್ಟಿದ ಪ್ರತಿಭಾನ್ವಿತ ಬಡ ವಿಧ್ಯಾರ್ಥಿಗಳಿಗೆ ಗುರುತಿಸಿ ಅವರನ್ನು ಸಾಧನೆಯತ್ತಾ ಸಾಗಲು ನಮ್ಮಿಂದಾದ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇವೆ. ಕಾಲೇಜುಗಳಲ್ಲಿ ಗ್ರಾಮಿಣಾ ಭಾಗದಿಂದ ನಾನಾ ಸಂಕಷ್ಟದಲ್ಲಿದ್ದರೂ ಓದುವ ಗುರಿ ಇಟ್ಟುಕೊಂಡ ವಿಧ್ಯಾರ್ಥಿಗಳನ್ನು ಗುರುತಿಸಿ ಪುಸ್ತಕ ವಿತರಣೆ ಮಾಡುತ್ತಾ ಬಂದಿದ್ದೇವೆ.

ವೇಧಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯರು ಈರಣ್ಣ ಮರ್ಲಟ್ಟಿ, ಗ್ರಾ.ಪಂ. ಸದಸ್ಯ ಈರಣ್ಣ ನಾಯಕ,ಜನಜಾಗೃತಿ ಸಂಘದ ಅಧ್ಯಕ್ಷ ರಮೇಶ್ ಕೋನಪೂರ್ ಪೇಟ್, ಕನ್ನಡ ಉಪನ್ಯಾಸಕ ರುದ್ರಪ್ಪ ಪುಲದಿನ್ನಿ, ಚಂದ್ರ ಶೇಕರ್, ಬಿಲಾಲ್, ಅಮರೇಶ್,ಸಿದ್ದೇಶ್ ಜಾಲವಾಡಗಿ, ಇದ್ದರು.

ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಪುಸ್ತಕ, ನೋಟ್ ಬುಕ್ ಮತ್ತು ಪೆನ್ ವಿತರಿಸಲಾಯಿತು.

ನಿರೂಪಣೆಯನ್ನು ಟಾರ್ಗೆಟ್ ನಿರ್ದೇಶಕ ಮಹಿಬೂಬ್ ಮದ್ಲಾಪೂರು, ಸ್ವಾಗತವನ್ನು ದೇವೇಂದ್ರ ಹೂಗಾರ್, ವಂದನಾರ್ಪಣೆಯನ್ನು ಬಸವರಾಜ್ ಜಾಲವಾಡಗಿ ಮಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚನ್ನಬಸವ ಬ್ಯಾಗವಾಟ್, ವಿಜಯ್, ಪ್ರಭಾಕರ್, ಮಂಜುನಾಥ, ಸುರೇಶ್ ಮತ್ತು ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here