ಒಂದು ದಿನವೂ ರಾಘವೇಂದ್ರರ ಸ್ಮರಣೆ ಮಾಡದೆ ನಾನು ದಿನ ಕಳೆಯುವುದಿಲ್ಲ; ಬಿಎಸ್​ವೈ

ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳೋದು ಮುಖ್ಯ ಹೀಗಾಗಿ ಯಾರು ಎಲ್ಲಿಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ. ನಾನು ಮನೇಲಿ ಲಸಿಕೆ ಹಾಕಿಸಿಕೊಳ್ಳಬೇಕಾ? ಅಥವಾ ಆಸ್ಪತ್ರೆಗೆ ಹೋಗಿ ಹಾಕಿಸಿಕೊಳ್ಬೇಕಾ ಎಂದು ನೋಡುತ್ತೇನೆ‌. ಇನ್ನೆರಡು ದಿನಗಳಲ್ಲಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ

0
171

ನಾನು ಒಬ್ಬ ರಾಘವೇಂದ್ರ ಭಕ್ತ. ಅದಕ್ಕಾಗಿ ನಾನು ರಾಘವೇಂದ್ರನ ಹೆಸರನ್ನು ನನ್ನಿಬ್ಬರು ಮಕ್ಕಳಿಗೆ ಇಟ್ಟಿದ್ದೇನೆ;ಬಿಎಸ್​ವೈ

ಒಂದು ದಿನವೂ ರಾಘವೇಂದ್ರರ ಸ್ಮರಣೆ ಮಾಡದೆ ನಾನು ದಿನ ಕಳೆಯುವುದಿಲ್ಲ; ಬಿಎಸ್​ವೈ

ಇಂದು ಬಿಎಸ್​ವೈ, ಪೂರ್ಣ ಪ್ರಜ್ಞ ಲೇಔಟ್‌ನ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಾನು ಒಬ್ಬ ರಾಘವೇಂದ್ರ ಭಕ್ತ. ಅದಕ್ಕಾಗಿ ನಾನು ರಾಘವೇಂದ್ರನ ಹೆಸರನ್ನು ನನ್ನಿಬ್ಬರು ಮಕ್ಕಳಿಗೆ ಇಟ್ಟಿದ್ದೇನೆ ಎಂದರು. ಒಂದು ವಿಜಯೇಂದ್ರ ಮತ್ತು ರಾಘವೇಂದ್ರ. ಒಂದು ದಿನವೂ ರಾಘವೇಂದ್ರರ ಸ್ಮರಣೆ ಮಾಡದೆ ನಾನು ದಿನ ಕಳೆಯುವುದಿಲ್ಲ. ಅವರ ಆಶೀರ್ವಾದದಿಂದಲೇ ನಾನು ಈ ಹುದ್ದೆಗೆ ಬಂದಿದ್ದೇನೆ ಎಂದು ಹೇಳಿದ್ರು.

ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳೋದು ಮುಖ್ಯ ಹೀಗಾಗಿ ಯಾರು ಎಲ್ಲಿಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ. ನಾನು ಮನೇಲಿ ಲಸಿಕೆ ಹಾಕಿಸಿಕೊಳ್ಳಬೇಕಾ? ಅಥವಾ ಆಸ್ಪತ್ರೆಗೆ ಹೋಗಿ ಹಾಕಿಸಿಕೊಳ್ಬೇಕಾ ಎಂದು ನೋಡುತ್ತೇನೆ‌. ಇನ್ನೆರಡು ದಿನಗಳಲ್ಲಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ ಎಂದು ಹೇಳಿದ್ರು.

ನಾನು ಮಾರ್ಚ್ 8 ರಂದು ಬಜೆಟ್ ಮಂಡಿಸುತ್ತಿದ್ದೇನೆ. ಈ ಬಜೆಟ್​ನ ಪೂರ್ಣ ಫಲ ರಾಜ್ಯದ ಜನರಿಗೆ ಸಿಗಲಿ. ಕೋವಿಡ್‌ನಿಂದ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಏರುಪೇರಾಗಿದೆ. ರಾಜ್ಯವು ಕೂಡ ಇದರಿಂದ ಹೊರತಾಗಿಲ್ಲ. ಇಷ್ಟಾದರೂ ಕೂಡ ಸರ್ಕಾರ ಇದನ್ನು ಸಮರ್ಥವಾಗಿ ಎದುರಿಸಿದೆ. ನಾನು ಮಂಡಿಸುವ ಬಜೆಟ್ ಎಲ್ಲ ವರ್ಗದ ಜನರ ಹಿತ ಕಾಯುವ ಬಜೆಟ್ ಆಗಿರುತ್ತದೆ ಎಂದು ಸಿಎಂ ತಿಳಿಸಿದ್ರು.

ರೈತ ಮುಖಂಡರ ಜೊತೆ ಬಜೆಟ್ ಪೂರ್ವಭಾವಿ ಸಭೆ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ,  ಸಮಯದ ಅಭಾವದಿಂದ ರೈತರ ಜೊತೆ ಯಾವುದೇ ಸಭೆ ಮಾಡುತ್ತಿಲ್ಲ. ರೈತರ ಭಾವನೆ ಅರ್ಥ ಮಾಡಿಕೊಂಡು ಒಂದು ಪೂರಕ ಬಜೆಟ್ ರೂಪಿಸುತ್ತೇವೆ ಎಂದರು.

LEAVE A REPLY

Please enter your comment!
Please enter your name here