ಮಾನವಿ ಕಸಾಪದಿಂದ ಅದ್ದೂರಿಯಾಗಿ ಜರುಗಿದ ಸಾಹಿತ್ಯ ಸಮ್ಮೇಳನ

ಇಡೀ ಪ್ರಪಂಚವೇ ಭೌತಿಕ ಮಾರುಕಟ್ಟೆಯಾಗಿ ಪರಿವರ್ತನೆಗೊಂಡು ಪ್ರಜಾಪ್ರಭುತ್ವದ ನೆಲೆ ಅಲುಗಾಡುವಂತೆ ಮಾಡಿದೆ. ಮಾನವೀಯ ಮೌಲ್ಯ ಆಧಾರಿಸಿ, ಹೊಸ ವಿಚಾರಧಾರೆ ರೂಪಿಸಿಕೊಳ್ಳುವ ಅವಶ್ಯಕತೆ ಎದ್ದು ಕಾಣುತ್ತದೆ.

0
200

ಮಾನ್ವಿ.ಫೆ.21- ಜಾಗತೀಕರಣದ ನಾಗಾಲೋಟ ಪ್ರಪಂಚವನ್ನೇ ಭೌತಿಕ ಮಾರುಕಟ್ಟೆಯನ್ನಾಗಿ ಮಾರ್ಪಡಿಸಿ, ಆರ್ಥಿಕತೆಯ ಸ್ಪರ್ಧೆಯ ಪರಿಣಾಮ ಪ್ರಜಾಪ್ರಭುತ್ವ ವ್ಯವಸ್ಥೆ ಅಳಿವಿನಂಚಿಗೆ ಬಂದು ನಿಲ್ಲುವಂತೆ ಮಾಡಿದೆ ಎಂದು  ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಂತಹ ಮಾನವಿ ತಾಲೂಕಿನ ಒಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭಾಷಣ ಮಾಡಿದ ಅವರು, ಸುಮಾರು ೩೦೦ ವರ್ಷಗಳ ಕಾಲ ಆಂಗ್ಲರ ಆಳ್ವಿಕೆಯಲ್ಲಿ ನಮ್ಮ ದೇಶ ನಲುಗಿ ಹೋಗಿತ್ತು. ಅನೇಕತೆಯಲ್ಲಿ ಏಕತೆ ಕಾಣುವ ನಮ್ಮ ಪರಂಪರೆ ಈಗಲೂ ಇದೇ ದೇಶ ಉಳಿಸಿಕೊಂಡಿದೆ. ಆದರೆ, ಜಾಗತೀಕರಣದ ನಾಗಾಲೋಟ ಈ ಬಹುತ್ವವನ್ನು ನಶಿಸಿ ಹೋಗುವಂತೆ ಮಾಡಿದೆ. ಇದನ್ನು ಹಿಡಿದಿಟ್ಟುಕೊಳ್ಳುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಇಡೀ ಪ್ರಪಂಚವೇ ಭೌತಿಕ ಮಾರುಕಟ್ಟೆಯಾಗಿ ಪರಿವರ್ತನೆಗೊಂಡು ಪ್ರಜಾಪ್ರಭುತ್ವದ ನೆಲೆ ಅಲುಗಾಡುವಂತೆ ಮಾಡಿದೆ. ಮಾನವೀಯ ಮೌಲ್ಯ ಆಧಾರಿಸಿ, ಹೊಸ ವಿಚಾರಧಾರೆ ರೂಪಿಸಿಕೊಳ್ಳುವ ಅವಶ್ಯಕತೆ ಎದ್ದು ಕಾಣುತ್ತದೆ. ಭಾರತವೊಂದು ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆಂದು ಹೇಳಿದ ಅವರು, ಭಾರತೀಯತೆ ಪುನರುತ್ಥಾನ ಪ್ರಕ್ರಿಯೆಯಲ್ಲಿ ಜ್ಞಾನಿ, ವಿಜ್ಞಾನಿ, ಸಮಾಜದ ವಿಜ್ಞಾನಿಗಳು, ಸಾಹಿತಿಗಳು ವಿದ್ವಾಂಸರು, ತತ್ವಜ್ಞಾನರು ಕೈ ಜೋಡಿಸಬೇಕಾಗಿದೆ.

ಮಾನವಿ ತಾಲೂಕಿನ ಒಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭಾಷಣ ಮಾಡಿದ ಅವರು ಮಾನವಿ ತಾಲೂಕಿನ ಒಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ನನಗೆ ಅತೀವ ಸಂತೋಷ ಹಾಗೂ ಹೆಮ್ಮೆ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮಾನವಿ ನನ್ನ ಹುಟ್ಟೂರು ಅಂಥದರಲ್ಲಿ ಇಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ನನ್ನನ್ನು ಭಾವುಕನನ್ನಾಗಿ ಮಾಡಿದೆ. ಇದಕ್ಕೆ ಕಾರಣರಾದ ಎಲ್ಲಾ ಮಹಾನುಭಾವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.

ಮಾನವಿ ತಾಲೂಕು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹತ್ತು ಹಲವಾರು ಅನರ್ಘ್ಯ ರತ್ನಗಳನ್ನು ನೀಡಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಹಿಂದಿನ ಪೀಳಿಗೆಯ ವೀರನಗೌಡ ನೀರಮಾನ್ವಿ, ಚನ್ನಬಸಪ್ಪ ಬೆಟ್ಟದೂರು, ಶಂಕರಗೌಡ ಬೆಟ್ಟದೂರು ಹಾಗೂ ಈಗಿನ ಪೀಳಿಗೆಯ ರಾಜಶೇಖರ ನೀರಮಾನ್ವಿ, ಡಾಕ್ಟರ್ ಬಸವಪ್ರಭು ಪಾಟೀಲ್ ಬೆಟ್ಟದೂರು, ಅಲ್ಲಮಪ್ರಭು ಪಾಟೀಲ್ ಬೆಟ್ಟದೂರು ಹಾಗೂ ಅನೇಕ ಹಿರಿಯ ಸಾಹಿತಿಗಳು ಈ ಪಟ್ಟಿಯಲ್ಲಿ ಬರುತ್ತಾರೆ. ನಮ್ಮ ಹಿರಿಯ ಸಹೋದರರಾದ ಡಾ. ಚನ್ನಬಸಪ್ಪ ಪಾಟೀಲರು ಈ ಭಾಗದ ಇತಿಹಾಸವನ್ನು ತಮ್ಮ ಅನೇಕ ಕೃತಿಗಳ ಮೂಲಕ ಜಗತ್ತಿಗೆ ಪರಿಚಯಿಸಿರುವುದನ್ನು ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ.

ಕನ್ನಡ ಭಾಷೆಯು ಜಗತ್ತಿನ ಅತ್ಯಂತ ಅಭಿವೃದ್ಧಿ ಹೊಂದಿದ ಭಾಷೆಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಕಲಿಕೆಯನ್ನು, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಅನೇಕ ಐರೋಪ್ಯ ರಾಷ್ಟ್ರಗಳಲ್ಲಿ ನೋಡುತ್ತೇವೆ. ಕರ್ನಾಟಕದ ಜನತೆ ಎಲ್ಲ ರಾಜ್ಯಗಳಲ್ಲಿ ಮಹತ್ತರ ಹುದ್ದೆಗಳಲ್ಲಿ ಇದ್ದು ನಮ್ಮ ರಾಜ್ಯದ ಪತಾಕೆಯನ್ನು ಎತ್ತರಕ್ಕೆ ಹಾರಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಕನ್ನಡಕ್ಕೆ ಬಹಳ ಎತ್ತರದ ಸ್ಥಾನವಿದೆ ನಮ್ಮ ಸಾಹಿತಿಗಳು ಹಲವು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿದ್ದಾರೆ ಹಾಗೂ ರಾಷ್ಟ್ರಕವಿ ಬಿರುದುಗಳನ್ನು ಪಡೆದಿದ್ದಾರೆ.

೧೨ನೇ ಶತಮಾನದ ಕವಿರಾಜಮಾರ್ಗದಿಂದ ಆರಂಭಗೊಂಡು ಹತ್ತು ಹಲವಾರು ಆಯಾಮಗಳನ್ನು ಪಡೆಯುತ್ತಾ ಕನ್ನಡ ಭಾಷೆ ಹಾಗೂ ಸಾಹಿತ್ಯ ನಿರಂತರವಾಗಿ ಬೆಳೆಯುತ್ತಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರ ಜೊತೆಗೆ ಸುಂದರವಾದ ಸಮಾಜವನ್ನು ಕಟ್ಟುವಲ್ಲಿ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ, ಕರ್ನಾಟಕದ ಏಕೀಕರಣದಲ್ಲಿ ಕನ್ನಡ ಸಾಹಿತಿಗಳ ಕೊಡುಗೆ ಅವಿಸ್ಮರಣೀಯ. ಕರ್ನಾಟಕವನ್ನು ರಾಷ್ಟ್ರದ ಒಂದು ಅತ್ಯಂತ ಅಭಿವೃದ್ಧಿಶೀಲ ರಾಜ್ಯವನ್ನಾಗಿ ರೂಪಿಸುವಲ್ಲಿ ಸಾಹಿತಿಗಳ ಪಾತ್ರ ಅಭಿನಂದನಾರ್ಹವಾಗಿದೆ.

ಸಾಮಂಡರ ಜುರಿಸುಡನ್ ಗ್ರಂಥವನ್ನು ಆಧರಿಸಿ ರಚಿಸಿದ್ದು ನನ್ನ ಬರವಣಿಗೆಯ ಇತಿಹಾಸದಲ್ಲಿ ಒಂದು ದೊಡ್ಡ ಮೈಲಿಗಲ್ಲು ತದನಂತರ ಹಲವಾರು ಕಾನೂನು ಪುಸ್ತಕಗಳನ್ನು ಕನ್ನಡದಲ್ಲಿ ರಚಿಸುವ ಪ್ರಯತ್ನವನ್ನು ಮಾಡಿದ್ದೇನೆ, ಈ ಸಂದರ್ಭದಲ್ಲಿ ಕಾನೂನು ಮತ್ತು ಸಾಹಿತ್ಯಕ್ಕೆ ಇರುವ ಅವಿನಾಭಾವ ಸಂಬಂಧವನ್ನು ನಾನು ಕಂಡುಕೊಂಡೆ, ಇದರಿಂದಾಗಿಯೇ ಭಾರತೀಯ ನ್ಯಾಯ ಶಾಸ್ತ್ರಕ್ಕೆ ಬಸವಣ್ಣನವರ ಕೊಡುಗೆ” ಎಂಬ ಮಹಾಪ್ರಬಂಧವನ್ನು ಪಿಎಚ್ಚಿ ಪದವಿಗಾಗಿ ಬರೆಯಲು ಸಾಧ್ಯವಾಯಿತು ಬಸವಣ್ಣನ ಅನುಭವ ಮಂಟಪ, ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಮಹಿಳೆಯರ ಸ್ಥಾನಮಾನ, ಕಾಯಕ ಮತ್ತು ದಾಸೋಹದಂತಹ ವಿಚಾರಗಳನ್ನು ಇತರ ನ್ಯಾಯಶಾಸ್ತ್ರಜ್ಞರ ಕೃತಿಗಳೊಂದಿಗೆ ತುಲನಾತ್ಮಕವಾಗಿ ಅಧ್ಯಯನ ಮಾಡುವ ಪ್ರಯತ್ನವನ್ನು ನನ್ನ ಈ ಪ್ರಬಂಧದಲ್ಲಿ ಮಾಡಿದ್ದೇನೆ ಈ ಸಂಶೋಧನೆಯಿಂದ ನಾನು ಅರಿತ ಒಂದು ಸತ್ಯಾಂಶ ಏನೆಂದರೆ ೧೨ ನೇ ಶತಮಾನದಲ್ಲಿಯೇ ಬಸವಣ್ಣ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಅತ್ಯಂತ ಮಾರ್ಮಿಕವಾಗಿ ನಮ್ಮ ಸಮಾಜಕ್ಕೆ ಕೊಡಮಾಡಿದ್ದು ಅವರ ಬರಹಗಳು. ಕನ್ನಡದಲ್ಲಿ ಇದ್ದದ್ದರಿಂದ ಅವು ಜಗತ್ತಿನಲ್ಲಿ ಗಮನಕ್ಕೆ ಬರಲಿಲ್ಲ.

ಸಾನ್ನಿಧ್ಯ ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಜನಾಬ್ ಮುಫ್ತಿ ಮೌಲಾನ ಅನ್ವರ್ ಪಾಶ್ಚಾತ್ಯ ಉಮರಿ, ಫಾದರ್ ಜ್ಞಾನಪ್ರಕಾಶಂ ವಹಿಸಿಕೊಂಡಿದ್ದರು. ರಾಜಾ ವೆಂಕಟಪ್ಪ ನಾಯಕ ಶಾಸಕರು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಗತ ಸಮಿತಿಯ ಅಧ್ಯಕ್ಷರು ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಮಹ್ಮದ್ ಮುಜೀಬ್ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಮಾತನಾಡಿದರು,

ಡಾ.ಶೀಲಾದಾಸ್ ಸಾಹಿತಿಗಳು ರಾಯಚೂರು ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಆಶಯ ನುಡಿ ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ಜಿಲ್ಲಾ ಕಸಾಪ ಅಧ್ಯಕ್ಷರು ನುಡಿದರು, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರು ಅಲ್ಲಮಪ್ರಭು ಪಾಟೀಲ್ ಬೆಟ್ಟದೂರು ಬಂಡಾಯ ಸಾಹಿತಿಗಳು ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಯನ್ನು ಬಸನಗೌಡ ದದ್ದಲ್ ಶಾಸಕರು ರಾಯಚೂರು ಗ್ರಾಮೀಣ ಕ್ಷೇತ್ರ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿ ಹಂಪಯ್ಯ ನಾಯಕ ಮಾಜಿ ಶಾಸಕರು ಮಾನ್ವಿ, ಬಸನಗೌಡ ಬ್ಯಾಗವಾಟ್ ಮಾಜಿ ಶಾಸಕರು ಮಾನ್ವಿ, ರಾಜಾ ಮಹೇಂದ್ರ ನಾಯಕ ಹಿರಿಯ ಸದಸ್ಯರು ಪುರಸಭೆ ಮಾನ್ವಿ, ರಾಜಾರಾಮಚಂದ್ರ ನಾಯಕ ರಾಜ್ಯ ಉಪಾಧ್ಯಕ್ಷರು ಯುವ ಜೆಡಿಎಸ್, ಎಸ್ ತಿಮ್ಮಾರೆಡ್ಡಿ ಭೋಗಾವತಿ,ವೀರೇಶ್ ನಾಯಕ ಬೆಟ್ಟದೂರು, ಕೆ ಬಸವಂತಪ್ಪ, ಎ ಬಾಲಸ್ವಾಮಿ ಕೊಡ್ಲಿ, ಫಕೀರಪ್ಪ ಓಲೇಕಾರ್, ಶ್ರೀಶೈಲಗೌಡ, ಸುರೇಶ ಕುರ್ಡಿ,ಮೂಕಪ್ಪ ಕಟ್ಟಿಮನಿ, ನಾಗರಾಜ ಭೋಗಾವತಿ, ಜಂಬುನಾಥ ಯಾದವ್,ಜಗದೀಶ್ ಭಂಡಾರಿ ಪುರಸಭೆ ಮುಖ್ಯಾಧಿಕಾರಿ, ಎ ಬಿ ಉಪ್ಪಳಮಠ ವಕೀಲರು,ರೇವಣಸಿದ್ದಯ್ಯ,ಸುವರ್ಣಗಿರಿಮಠ,ಹೆಚ್ ಶರ್ಪುದ್ದೀನ್ ಪೋತ್ನಾಳ,ಮಲ್ಲಿಕಾರ್ಜುನ್ ಪಾಟೀಲ್ ಅಧ್ಯಕ್ಷರು ವಕೀಲರ ಸಂಘ ಮಾನ್ವಿ,ಗುಮ್ಮಾ ಬಸವರಾಜ ವಕೀಲರು’ ಶಿವಶಂಕರಪ್ಪಗೌಡ ಬಾಗಲವಾಡ, ನಿರೂಪಣೆ ವಲಿಬಾಬು ಮತ್ತು ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here