ಸಿದ್ದರಾಮಯ್ಯನವರ ಸಮಾಜ ವಿರೋಧಿ ಹೇಳಿಕೆ ಸರಿಯಲ್ಲ: ಕೆ.ವಿರೂಪಾಕ್ಷಪ್ಪ

ಕುರುಬ ಸಮಾಜದಲ್ಲಿ ಹುಟ್ಟಿ, ಅದೇ ಕುರುಬರ ಮತ ಪಡೆದು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜ ವಿರೋಧಿ ಹೇಳಿಕೆ ಸರಿಯಲ್ಲ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.

0
191

ಸಿದ್ದರಾಮಯ್ಯನವರ ಸಮಾಜ ವಿರೋಧಿ ಹೇಳಿಕೆ ಸರಿಯಲ್ಲ: ಕೆ.ವಿರೂಪಾಕ್ಷಪ್ಪ

ಕುರುಬ ಸಮಾಜದಲ್ಲಿ ಹುಟ್ಟಿ, ಅದೇ ಕುರುಬರ ಮತ ಪಡೆದು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜ ವಿರೋಧಿ ಹೇಳಿಕೆ ಸರಿಯಲ್ಲ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.

ಅವರು ಬುಧವಾರ ನಗರದ ಕನಕದಾಸ ಕಲ್ಯಾಣಮಂಟಪದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದರು. ಎಸ್ಟಿ ಹೋರಾಟಕ್ಕೆ ಆರ್‌ಎಸ್‌ಎಸ್‌ನಿಂದ ಹಣ ಬರುತ್ತಿದೆ ಎಂದು ಸಿದ್ಧರಾಮಯ್ಯ ಹೇಳಿಕೆ ನೀಡುತ್ತಿರುವುದು ಖಂಡನೀಯ. ಎಸ್ಟಿ ಹೋರಾಟಕ್ಕೆ ಬೆಂಬಲ ನೀಡದಿದ್ದರೆ ಸುಮ್ಮನಿರಲಿ, ಅದನ್ನು ಬಿಟ್ಟು ಸಮಾಜದ ಜನರಿಗೆ ದಾರಿ ತಪ್ಪಿಸುವ ಪ್ರಯತ್ನ ಸಿದ್ದರಾಮಯ್ಯ ಮಾಡಬಾರದು. ಅಧಿಕಾರ ಅನುಭವಿಸಲು ಸಿದ್ಧರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ಹುಟ್ಟಿದ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕಿದ್ದ ಅವರು, ಅಧಿಕಾರದಾಸೆಯಿಂದ ಸಮಾಜದಿಂದ ನಡೆಸುತ್ತಿರುವ ಹೋರಾಟಕ್ಕೆ ವಿರುದ್ಧವಾಗಿ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ. ಇದರಿಂದ ಕುರುಬ ಸಮಾಜದಲ್ಲಿ ಹಾಗೂ ಪಕ್ಷದಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಜನರ ತೀರ್ಮಾನ ಅವರು ಮೊದಲು ಒಪ್ಪುವುದನ್ನು ಕಲಿಯಬೇಕು ಎಂದರು.

ಸಿಎA, ಪಿಎಂ ಭೇಟಿಗೆ ನಿರ್ಧಾರ:

ಹಂತ ಹಂತವಾಗಿ ಹೋರಾಟವನ್ನು ಮುಂದುವರೆಸುವ ನಿಟ್ಟಿನಲ್ಲಿ ಸಮಿತಿಯಿಂದ ರೂಪುರೇಷಗಳÀÄ್ನ ಹಾಕಿಕೊಳ್ಳಲಾಗುತ್ತಿದೆ. ಈ ವಾರದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಶ್ರೀಗಳ ನೇತೃತ್ವದಲ್ಲಿ ಎಲ್ಲಾ ಮುಖಂಡರ ನಿಯೋಗ ದೆಹಲಿ ಪ್ರವಾಸ ಹಮ್ಮಿಕೊಂಡು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದರು.

ಫೆ.೭ರAದು ಬೆಂಗಳೂರಿನಲ್ಲಿ ನಡೆದ ಎಸ್ಟಿ ಬೃಹತ್ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದೆ. ನಿರೀಕ್ಷೆ ಮೀರಿ ಜನಸ್ತೋಮ ಹರಿದು ಬಂದಿದೆ. ಸಮಿತಿಯಿಂದ ಯಾವುದೇ ರೀತಿಯ ಹಣ, ವಾಹನ ವ್ಯವಸ್ಥೆ ಮಾಡದಿದ್ದರೂ ಸ್ವತಃ ತಾವೇ ರೊಟ್ಟಿ ಬುತ್ತಿಕಟ್ಟಿಕೊಂಡು ೪ಲಕ್ಷಕ್ಕೂ ಹೆಚ್ಚಿನ ಜನರು ಹೋರಾಟದಲ್ಲಿ ಭಾಗವಹಿಸಿದ್ದು ಇತಿಹಾಸ ಸೃಷ್ಠಿಸಿದೆ ಎಂದರು.

ಈ ಸಂದರ್ಭದಲ್ಲಿ ಕುರುಬ ಸಂಘದ ತಾಲ್ಲೂಕಾಧ್ಯಕ್ಷ ಪೂಜಪ್ಪ ಪೂಜಾರಿ, ಕಾರ್ಯದರ್ಶಿ ಶಂಭಣ್ಣ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡರಾದ ಟಿ.ಹನುಮಂತಪ್ಪ, ಫಕೀರಪ್ಪ ತಿಡಿಗೋಳ, ವೆಂಕಟೇಶ ಬಾದರ್ಲಿ, ಬೀರಪ್ಪ ಜನತಾ ಕಾಲೋನಿ ಇತರರು ಇದ್ದರು.

LEAVE A REPLY

Please enter your comment!
Please enter your name here