ಮೂರನೇ ಬಾರಿ ಸ್ಟೀವನ್ ಸ್ಮಿತ್ ನ ಪಾಲಾದ ಅಲನ್ ಬಾರ್ಡರ್ ಪದಕ

0
80

ಸಿಡ್ನಿ: ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಆಸ್ಟ್ರೇಲಿಯ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂರನೇ ಬಾರಿ ಅಲನ್ ಬಾರ್ಡರ್ ಪದಕ ಜಯಿಸಿದರು. ಬೆಥ್ ಮೂನಿ ಮೊದಲ ಬಾರಿ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ ಬಾಚಿಕೊಂಡರು.

ಎಲ್ಲ ಮೂರು ಮಾದರಿಯ ಕ್ರಿಕೆಟ್ ನಲ್ಲಿ ನೀಡಿರುವ ಅತ್ಯುತ್ತಮ ಪ್ರದರ್ಶನಕ್ಕಾಗಿ ಸ್ಮಿತ್ ಈ ಗೌರವ ಪಡೆದರು. ಮೂನಿ  ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಕ್ಕೆ ಮೊದಲ ಬಾರಿ ಈ ಪ್ರಶಸ್ತಿಗೆ ಆಯ್ಕೆಯಾದರು. 2002ರಲ್ಲಿ ಪ್ರಶಸ್ತಿ ಸ್ಥಾಪನೆಯಾದ ಬಳಿಕ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯದ 9ನೇ ಆಟಗಾರ್ತಿ ಮೂನಿ.

ಸ್ಮಿತ್ 2020-21ರಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್ ನಲ್ಲಿ 45.75ರ ಸರಾಸರಿಯಲ್ಲಿ 1,098 ರನ್ ಗಳಿಸಿದ್ದರು. ಈ ವೇಳೆ ಅವರು 4 ಅರ್ಧಶತಕ ಹಾಗೂ 4 ಶತಕಗಳನ್ನು ಗಳಿಸಿದ್ದು, ಭಾರತ ವಿರುದ್ಧ ಏಕದಿನ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(131)ಗಳಿಸಿದ್ದರು.

LEAVE A REPLY

Please enter your comment!
Please enter your name here