ಪೆಟ್ರೋಲ್ ಡೀಸೆಲ್ ಮತ್ತು ಅನಿಲ ದರ ಏರಿಕೆ ಖಂಡಿಸಿ ವೆಲ್ಫೇರ್ ಪಾರ್ಟಿ ಯಿಂದ ಪ್ರತಿಭಟನೆ.

ಬಿ ಜೆ ಪಿ ನೇತ್ರತ್ವದ ಕೇಂದ್ರ ಸರ್ಕಾರ ಪೆಟ್ರೋಲ್,ಡಿಸೇಲ್,ಎಲ್ಪಿಜಿ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಸಿ ದೇಶದ ಜನಸಾಮಾನ್ಯರ ರೈತರ,ಕಾರ್ಮಿಕರ ಜನಜೀವನವನ್ನು ನರಕವಾಗಿಸಿದೆ

0
229

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಾನವಿ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಪತ್ರ.

ಮಾನವಿ 05/02/2021:- ಕೇಂದ್ರ ಸರಕಾರ ವತಿಯಿಂದ ಪೆಟ್ರೋಲ್ ಡೀಸೆಲ್ ಮತ್ತು ಅನಿಲ ದರ ಏರಿಕೆ ಮಾಡಿದ್ದರಿಂದ ಮಧ್ಯಮ ವರ್ಗದ ಜನ ಕಂಗಾಲಾಗಿದ್ದಾರೆ ಎಂದು ವೆಲ್ಫೇರ್ ಪಾರ್ಟಿಯ ತಾಲೂಕು ಅಧ್ಯಕ್ಷ ಶೇಕ್ ಬಾಬ ಹುಸೇನ್ ಹೇಳಿದರು.

ಅವರು ಇಂದು ವೆಲ್ಫೇರ್ ಪಾರ್ಟಿಯ ವತಿಯಿಂದ ಪೆಟ್ರೋಲ್ ಡೀಸೆಲ್ ದರ ಏರಿಕೆ ಯನ್ನ ನಿಯಂತ್ರಣ ಗೊಳಿಸಬೇಕಂದು ಒತ್ತಾಯಿಸಿ ರಾಷ್ಟ್ರಪತಿಗಳಿಗೆ ತಹಸೀಲ್ದಾರ್ ಮುಖಾಂತರ ಮನವಿ ಪತ್ರ ಕೊಡುವ ಸಂದರ್ಭದಲ್ಲಿ ಮಾತನಾಡುತ್ತಾ

ಬಿ ಜೆ ಪಿ ನೇತ್ರತ್ವದ ಕೇಂದ್ರ ಸರ್ಕಾರ ಪೆಟ್ರೋಲ್,ಡಿಸೇಲ್,ಎಲ್ಪಿಜಿ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಸಿ ದೇಶದ ಜನಸಾಮಾನ್ಯರ ರೈತರ,ಕಾರ್ಮಿಕರ ಜನಜೀವನವನ್ನು ನರಕವಾಗಿಸಿದೆ.ಸಬ್ಸಿಡಿ ನೆಪದಲ್ಲಿ ಸಿಲಿಂಡರಿಗೆ ₹ 100 ಏರಿಸಲಾಗಿದೆ ಮತ್ತೋಂದೆಡೆ ಕಳೆದ 6 ತಿಂಗಳಿನಿಂದ ಸಿಲಿಂಡರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ.ಪೆಟ್ರೋಲ್ ಮತ್ತು ಡಿಸೇಲನ್ನು G S T ಯಿಂದ ಹೊರಗಿಟ್ಟು ಒಂದು ಲೀಟರ್ ಪೆಟ್ರೋಲ್ ಗೆ ₹ 2-50 ಮತ್ತು ಡಿಸೇಲ್ ಗೆ ₹ 4 ಸೆಸ್ ವಿಧಿಸಲಾಗಿದೆ.ಈಗಾಗಲೇ ನಮ್ಮ ರಾಜ್ಯ ಸರ್ಕಾರ ಒಂದು ಲೀಟರ್ ಪೆಟ್ರೋಲ್ ಗೆ :₹ 32 ಹಾಗೂ ಕೇಂದ್ರ ಸರ್ಕಾರ :₹ 30 ತೆರಿಗೆ ವಿಧಿಸುತ್ತಿದೆ .ಅಗತ್ಯ ವಸ್ತುಗಳ ಬೆಲೆ ಏರದಂತೆ ನಿಯಂತ್ರಣದಲ್ಲಿರಿಸುವುದು ಸರ್ಕಾರದ ಕರ್ತವ್ಯ .

ಚುನಾವಣೆಯಲ್ಲಿ ಸಬ್ಕಾಸಾತ್ ಸಬ್ಜಾವಿಕಾಸ್ ಮತ್ತು ಅಚ್ಚೇದಿನ್ ಗಳ ಕನಸುಗಳನ್ನು ತೋರಿಸಿ ಅಧಿಕಾರಕ್ಕೆಬಂದ ಈ ಸರ್ಕಾರ ,ಕಳೆದ 6 ವರ್ಷಗಳಿಂದ ದೇಶದಲ್ಲಿ ಸಂವಿಧಾನ ವಿರೋಧಿ ಮತ್ತು ದೇಶದ ಅರ್ಥ ವ್ಯವಸ್ತೆಯನ್ನು ಹಾಳುಮಾಡಿ ಕೇವಲ ಆದಾನಿ ಅಂಬಾನಿ ಮತ್ತು ಭಂಡವಾಳ ಶಾಹಿಗಳ ಪರ ಕಾಯ್ದೆಗಳನ್ನು ತಂದು ಅಧಿಕಾರವನ್ನು ದುರುಪಯೊಗಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ದಮನಿಸಿ ಸಂವಿಧಾನಿಕ ಸಂಸ್ಧೆಗಳನ್ನು ದುರ್ಬಲಗೊಳಿಸಿ ,ಪ್ರಜಾಪ್ರಭುತ್ವ ವ್ಯವಸ್ತೆಯನ್ನು ಬುಡಮೇಲುಗೊಳಿಸಿ ,ಸರ್ವಾಧಿಕಾರಿಯಾಗಿ ಅಧಿಕಾರ ನಿರಂತರ ತನ್ನ ಬಳಿಯಲ್ಲಿಡಲು ಎಲ್ಲಾ ಶಡ್ಯಂತ್ರಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ನಂತರ ರಾಷ್ಟ್ರಪತಿಗಳಿಗೆ ತಹಸೀಲ್ದಾರ್ ಮುಖಾಂತರ ಮನವಿ ಪತ್ರ ಕೊಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಫರೀದ್ ಉಮರಿ, ಗುಲಾಮ್ ರಸೂಲ್, ನಾಸಿರ್ ಅಲಿ, ಎಮ್ ಏ ಎಚ್ ಮುಖೀಮ್, ಹನುಮಂತ, ಅಲ್ಲಾಬಕ್ಷ, ಜಾವಿದ್ ಪಟೇಲ್, ಬಂಗ್ಡಿ ಬಾಷ, ಮಹೀಬೂಬ್ ಸಾಬ್, ಅಬ್ದುಲ್ ಸತ್ತಾರ್, ಅಲಿಮ್ ಖಾನ್, ಚಾಂದ್ ಪಾಷ, ಜಿ ಹನುಮಂತ, ಎಮ್ ಡಿ ಅಹಮದ್ ಹುಸೇನ್, ಹಾರೂನ್ ಮತ್ತು ಇತರೇ ಸದಸ್ಯರು ಉಪಸ್ಥಿತಿತರಿದ್ದರು.

LEAVE A REPLY

Please enter your comment!
Please enter your name here